ಮನುಷ್ಯ ಭಾವನಾತ್ಮಕ ಜೀವಿ. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಭಾಷೆ, ಆಚಾರ-ವಿಚಾರ, ರೂಢಿ ಸಂಪ್ರದಾಯ ಉಡುಗೆ ತೊಡುಗೆ, ಸಂಸ್ಕಾರ-ಸಂಸ್ಕೃತಿಗಳು ವಿಭಿನ್ನವಾಗಿರುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತಹ ವೈಶಿಷ್ಟ್ಯ ನಮ್ಮದು. ಇವೆಲ್ಲವನ್ನೂ ಒಗ್ಗೂಡಿಸಿ, ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಶಕ್ತಿ ಭಾಷೆಗೆ ಇದೆ. ಭಾಷೆಯೇ ನಮ್ಮ ಅಸ್ಥಿತೆ, ನಮ್ಮ ಸಂಸ್ಕೃತಿಯ ಜೀವಾಳ.

ಈ ಹಿನ್ನಲೆಯಲ್ಲಿ, ನಡೆಯಲಿರುವ ಕುಂದಾಪುರ ಕನ್ನಡ ಹಬ್ಬ ನಮ್ಮ ಭಾಷೆ ನಮ್ಮ ಹೆಮ್ಮೆ, ನಮ್ಮ ಸಂಸ್ಕೃತಿ ನಮ್ಮ ಗುರುತು. ಯಾವುದೇ ಭಾಷೆಯನ್ನು ಉಳಿಸಬೇಕಾದರೆ ಆ ಭಾಷೆಯನ್ನ ಬಳಸಬೇಕು ಹಾಗಾಗಿ ಮಾತನಾಡೋಣ ಕುಂದಾಪುರ ಕನ್ನಡ ಉಳಿಸೋಣ ಕುಂದಗನ್ನಡ,ಕುಂದಗನ್ನಡದ ನೆಲದಲ್ಲಿ ಜನಿಸಿ, ವೃತ್ತಿ ನಿಮಿತ್ತ ಮಂಗಳೂರಿಗೆ ಬಂದು ನೆಲೆಸಿ, ತುಳುನಾಡಿನವರೇ ಆಗಿದ್ದುಕೊಂಡರೂ, ತಮ್ಮ ಮೂಲ ನೆಲೆಯ ಭಾಷೆ, ಸಂಸ್ಕೃತಿ ಆಚರಣೆ, ಸಂಪ್ರದಾಯವನ್ನ ಉಳಿಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಕುಡ್ಡದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದವರ ಆಶ್ರಯದಲ್ಲಿ “ವಿಶ್ವ ಕುಂದಾಪ್ರ ದಿನಾಚರಣೆಯನ್ನು” ಆಷಾಢ ಮಾಸದ ಒಂದು ದಿನದಲ್ಲಿ ‘ಕುಂದಾಪ್ರ ಹಬ್ಬ’ ಹೆಸರಿನಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿರುತ್ತಾರೆ.
ಹಾಗೆ ಪ್ರತಿ ವರ್ಷದಂತೆ ಈ ವರ್ಷವೂ, ಕುಂದಾಪ್ರ ಕನ್ನಡ ಹಬ್ಬ 2026ನ್ನು ಆಗಸ್ಟ್ 9 ಭಾನುವಾರ ಬೆಳಿಗ್ಗೆ 7.30ರಿಂದ ಸಂಜೆ 8.30ರ ತನಕ ಮಂಗಳೂರಿನ ಹೃದಯ ಭಾಗದ ಡಾ. ಬಿ.ಆರ್. ಅಂಬೇಡ್ಕರ್ ಭವನ, ಉರ್ವಸ್ಟೋರ್‌ನಲ್ಲಿ ಆಚರಿಸಲು ಆಯೋಜನಾ ಸಮಿತಿಯವರು ನಿರ್ಧರಿಸಿದ್ದಾರೆ.
ಇದರ ಮೂಲ ಉದ್ದೇಶ ಕುಂದಾಪುರದ ಮೂಲ ಭಾಷೆಯ ಆಚಾರ ವಿಚಾರಗಳ ಮತ್ತು ಅದರ ಅಸ್ಥಿತೆಯ ಮಹತ್ವವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ಉಳಿಸಿ ಬೆಳೆಸುವ ಕಾರ್ಯಕ್ರಮ.
ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ರಕ್ತ ತಪಾಸಣಾ ಶಿಬಿರವು ಮಂಜುನಾಥ ಎಸ್. ಎಮ್. Ph.D ಕಾಯ ಹೆಲ್ತ್ ಕೇರ್ ಡಯಾಗೋಸಿಸಸ್ & ಕ್ಲಿನಿಕ್, ವಾಮಂಜೂರು ಇದರಿಂದ ಹಾಗೂ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಎನ್.ಎಸ್.ಎಸ್. ಯುನಿಟ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡಿಮಿ ಇವರಿಂದ ವೈದ್ಯರಾದ ಡಾ। ಅವಿನ್ ಆಳ್ವ ಕೊಳ್ಳೆಬೈಲು, IMA ಮಾಜಿ ಕಾರ್ಯದರ್ಶಿ ಹಾಗೂ ತಂಡದವರಿಂದ ನಡೆಯಲಿರುವುದು.

ಕುಂದಾಪ್ರ ಕನ್ನಡ ಹಬ್ಬವು ಬೆಳಿಗ್ಗೆ 8.45ಕ್ಕೆ ಧ್ವಜಾರೋಹಣದೊಂದಿಗೆ ಗ್ರಾಮೀಣ ಕ್ರೀಡಾ ಕೂಟವನ್ನು ಶ್ರೀ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ನಿರೀಕ್ಷಕರು, ದಕ್ಷಿಣ ಪೊಲೀಸ್ ಠಾಣೆ, ಪಾಂಡೇಶ್ವರ, ಮಂಗಳೂರು ಇವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಗ್ರಾಮೀಣ ಕ್ರೀಡಾಕೂಟ ನಡೆಸಲಾಗುವುದು. ಅದರಲ್ಲಿ ಗೇರು ಬೀಜ ಗುರಿ ಇಡುವುದು, ಚಮಚ ಲಿಂಬೆ ಓಟ, ಮಡಲು ನೇಯುವ ಸ್ಪರ್ಧೆ, ತಲೆಯ ಮೇಲೆ ಲೋಟ ಇಟ್ಟು ಓಟ, ಒಂಟಿ ಕಾಲಿನ ಓಟ, ರಂಗೋಲಿ ಸ್ಪರ್ಧೆ, ಬಲೂನು ಜೋಡಿ ಆಟ, ಗೋಲಿ ಗುರಿ ಇಡುವುದು.

ಸಂಜೆ 4.00 ಗಂಟೆಗೆ ಸಭಾ ಕಾರ್ಯಕ್ರಮವು ನಡೆಯಲಿರುವುದು, ಸಭಾಧ್ಯಕ್ಷತೆಯನ್ನು 2026ರ ಆಯೋಜನಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಾಲತಿ ಸಂತೋಷ್ ಶೆಟ್ಟಿ ಬಾರ್ಕೂರು ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಮತ್ತು ದಿಕ್ಕೂಚಿ ಭಾಷಣಕಾರರಾಗಿ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಮಂಗಳೂರು ವಿ.ವಿ ಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರು ಹಾಗೂ ಮುಖ್ಯ ಅತಿಥಿಯಾಗಿ ಶ್ರೀ ಶಾನಾಡಿ ಅಜಿತ್ ಕುಮಾರ ಹೆಗ್ಡೆ, ನಿವೃತ್ತ ನಿರ್ದೇಶಕರು (ಹಣಕಾಸು) B-SMILE, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕರ್ನಾಟಕ ಸರಕಾರ ಇವರು ಪಾಲ್ಗೊಳ್ಳುವರು. ಶ್ರೀ ಗೋಪಾಲಕೃಷ್ಣ ಶೆಟ್ಟಿ (ಜಿ.ಕೆ) ಗೌರವ ಅಧ್ಯಕ್ಷರು, ಕುಡ್ಲ ಕುಂದಾಪುರ ಫೌಂಡೇಶನ್ (ರಿ.) ಮತ್ತು ಶ್ರೀ ಶರತ ಆಚಾರ್ಯ, ಯಡ್ತಾಡಿ ಕಾರ್ಯದರ್ಶಿ ಕುಡ್ಲ ಕುಂದಾಪುರ ಫೌಂಡೇಶನ್ (ರಿ.) ಉಪಸ್ಥಿತಿತರಿರುವರು.

ಸಭೆಯಲ್ಲಿ ಸಾಧಕರಾದ ಶ್ರೀ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಪ್ರಸಿದ್ಧ ಅಂಕಣಕಾರರು ಹಾಗೂ ಶ್ರೀ ಸುಜನ್ ಶೆಟ್ಟಿ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ದಕ್ಷಿಣ ಉಪವಿಭಾಗ ಕಚೇರಿ, ಮಂಗಳೂರು ನಗರ ಇವರಿಗೆ ಸನ್ಮಾನ ನೆರವೇರಲಿರುವುದು. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಪ್ರತಿಭಾ ಪುರಸ್ಕಾರ ನೆರವೇರಲಿರುವುದು.
ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲದೆ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ವೇದಿಕೆಯಲ್ಲಿ ನೆರವೇರುತ್ತವೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಕುಂದಾಪುರದ ಸಾಂಪ್ರದಾಯಿಕ ತಿಂಡಿ ತಿನಿಸುಗಳ ವ್ಯವಸ್ಥೆ ಮಾಡಲಾಗಿದೆ.
ಹಾಗಾಗಿ ಈ ಎಲ್ಲಾ ಕಾರ್ಯಕ್ರಮಕ್ಕೆ ಮಂಗಳೂರಿನ ಜನತೆ ಮತ್ತು ಮಂಗಳೂರಿನಲ್ಲಿ ನೆಲೆಸಿರುವ ಕುಂದಗನ್ನಡದವರೆಲ್ಲರೂ ಭಾಗವಹಿಸುವಂತೆ ಅಧ್ಯಕ್ಷರು, ಪದಾಧಿಕಾರಿಗಳು ಸಂಯೋಜನಾ ಸಮಿತಿಯ ಸದಸ್ಯರು ಆಹ್ವಾನ ನೀಡಿ ಸ್ವಾಗತಿಸುತ್ತಿದ್ದಾರೆ.















