,

ದ.ಕ. ಗ್ರಾಮ ಪಂಚಾಯತಿಗಳಿಗೆ ಲೋಕಾಯುಕ್ತ ದಾಳಿ ಸ್ವಾಗತಾರ್ಹ- ಮಂಗಳೂರಿನ RTO ಮಾತ್ರ ಯಾಕೆ ಲೋಕಾಯುಕ್ತರ ಕಣ್ಣಿಗೆ ಬೀಳುತ್ತಿಲ್ಲ??

ದಕ್ಷಿಣ ಕನ್ನಡದ 7 ಗ್ರಾಮ ಪಂಚಾಯತಿಗಳ ಮೇಲೆ ಲೋಕಾಯುಕ್ತ ದಿಢೀರ್ ಪರಿಶೀಲನೆ ನಡೆಸಿರುವುದು ವರದಿಯಾಗಿದೆ. ಸಾರ್ವಜನಿಕರಿಂದ ಭ್ರಷ್ಟಾಚಾರ, ಖಾತಾ ಬದಲಾವಣೆ, ಸರ್ಕಾರಿ ಯೋಜನೆಗಳು ಮತ್ತು ಲಂಚದ ಬೇಡಿಕೆ ಕುರಿತ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ನಡೆದಿದೆ. ಗ್ರಾ.ಮ.ಪಂಚಾಯತಿಗಳಿಗೆ ದಾಳಿ ನಡೆಸಿರುವುದು ಸ್ವಾಗತಾರ್ಹ ಮಂಗಳೂರಿನ RTO ಕಚೇರಿಗೇ ಯಾಕಿಲ್ಲ ದಾಳಿ?? ಮಂಗಳೂರು RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಇಲ್ಲಿಗೆ ತಲೆಹಾಕದೇ ಇರುವುದೇ ಇಲ್ಲಿನ ಮುಖ್ಯ ಸಮಸ್ಯೆ. ಇಲ್ಲಿನ ಗುಮಾಸ್ತ ಸೋಮರಾಜ್ ಎಂಬವ ಕಾರ್ಕ್…

ದಕ್ಷಿಣ ಕನ್ನಡದ 7 ಗ್ರಾಮ ಪಂಚಾಯತಿಗಳ ಮೇಲೆ ಲೋಕಾಯುಕ್ತ ದಿಢೀರ್ ಪರಿಶೀಲನೆ ನಡೆಸಿರುವುದು ವರದಿಯಾಗಿದೆ. ಸಾರ್ವಜನಿಕರಿಂದ ಭ್ರಷ್ಟಾಚಾರ, ಖಾತಾ ಬದಲಾವಣೆ, ಸರ್ಕಾರಿ ಯೋಜನೆಗಳು ಮತ್ತು ಲಂಚದ ಬೇಡಿಕೆ ಕುರಿತ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ನಡೆದಿದೆ. ಗ್ರಾ.ಮ.ಪಂಚಾಯತಿಗಳಿಗೆ ದಾಳಿ ನಡೆಸಿರುವುದು ಸ್ವಾಗತಾರ್ಹ

ಮಂಗಳೂರಿನ RTO ಕಚೇರಿಗೇ ಯಾಕಿಲ್ಲ ದಾಳಿ??

ಮಂಗಳೂರು RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಇಲ್ಲಿಗೆ ತಲೆಹಾಕದೇ ಇರುವುದೇ ಇಲ್ಲಿನ ಮುಖ್ಯ ಸಮಸ್ಯೆ.

ಇಲ್ಲಿನ ಗುಮಾಸ್ತ ಸೋಮರಾಜ್ ಎಂಬವ ಕಾರ್ಕ್ ಹುದ್ದೆಗೆ ಭರ್ತಿ ಆದೇಶವನ್ನು ರಾಜಕೀಯದವರಿಗೆ ಲಕ್ಷ ಲಕ್ಷ ನೀಡಿ ಪ್ರಮೋಶನ್ ಆದೇಶವನ್ನು ರದ್ದುಮಾಡಿ ಗುಮಾಸ್ತ ಹುದ್ದೆಯಲ್ಲೇ ಖಾಯಂಗೊಂಡಿದ್ದಾನೆ.
ಇವನಿಗೆ ವರ್ಗಾವಣೆ ಎಂಬ ಪದವೇ ಗೊತ್ತಿಲ್ಲ ಸುಮಾರು 12 ವರ್ಷಗಳಿಂದ ಇಲ್ಲೆ ಖಾಯಂಗೊಂಡಿದ್ದಾನೆ. ದಿನಕ್ಕೆ ಕಮ್ಮಿ ಅಂದರು 35 ರಿಂದ 45 ಸಾವಿರ ಲಂಚದ ಮೂಲಕ ದುಡಿಯುತ್ತಿದ್ದಾನೆ.

ಈ ಹಿಂದೆ ಇವನ ಬಗ್ಗೆ ವರದಿ ಮಾಡಿದಕ್ಕೆ ಇದೆಲ್ಲಾ ನನ್ನ ಜೀವನದಲ್ಲಿ ತುಂಬಾ ನೋಡಿದ್ದೇನೆ, ಮೇಲಾಧಿಕಾರಿಗಳಿಗೆ ಲಕ್ಷ ಲಕ್ಷ ಸುರಿದರೆ ನಾನು ಇದೆ ಹುದ್ದೆಯಲ್ಲಿ ಇರುತ್ತೆನೆ ನನ್ನನ್ನು ಮುಟ್ಟುವವರು ಯಾರು ಇಲ್ಲ ಎಂದು ರಾಜರೋಶವಾಗಿ ಹೇಳುತ್ತಾನೆ.
ಉಸ್ತುವಾರಿ ಸಚಿವರೆ ಇತ್ತ ಗಮನ ಹರಿಸಿ ಇಂತಹ ದುರಾಹಂಕಾರಿ ಸೊಮರಾಜ್ ನನ್ನು ವರ್ಗಾವಣೆ ಮಾಡಿ ಮತ್ತು ಇವನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಿ.

ಇವನ ಸುತ್ತ ಮುತ್ತ, ಜೇಬಿನಲ್ಲಿ ಹಣದ ರಾಶಿ ತುಂಬಿ ತುಳುಕುತ್ತಿವೆ. ತಲಾ ಮಹಡಿಯಲ್ಲಿ ಮುಖ್ಯ ಅಧಿಕಾರಿ ಬಳಿ ದಿನದ ಕಲೆಕ್ಷನ್ ಬಗ್ಗೆ ಬರೆಯಲು ಡೈರಿಯೇ ಇದೆ. ದಿನವಿಡೀ ಈ ಗುಮಾಸ್ತನಿಗೆ ಹಣದುಬ್ಬರ ತುಂಬಿ 500, 200,100 ಹೀಗೆ ಬೇರ್ಪಡಿಸುವ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದಾನೆ.
ಪೋಲಿಸರು ಗೊಡ್ಸ್ ವಾಹನಕ್ಕೆ ದಂಡ ಕಟ್ಟಲು ಕಛೇರಿಗೆ ಕಳಿಸಿದಾಗ 100,200 ಇದ್ದ ದಂಡವನ್ನು ಬೆದರಿಸಿ ಒಂದು ಸಾವಿರದಿಂದ ಎರಡು‌ ಸಾವಿರ ತನಕ ವಸೂಲಿ ಮಾಡುತ್ತಾರೆ. ಹೀಗೆ ಸರಕಾರ ಬೊಕ್ಕಸಕ್ಕೆ ನಕಲಿ ಲೆಕ್ಕಾಚಾರ ನೀಡುತ್ತಾರೆ. ಹೀಗೆ ನಡೆದ ಕಲೆಕ್ಷನ್ ಗಳನ್ನು ವಾರದ ಕೊನೆಯಲ್ಲಿ ಎಲ್ಲಾ ಆಧಿಕಾರಿಗಳಿಗೆ ಹಂಚುತ್ತಾನೆ.

ಇಲಾಖೆಯಲ್ಲಿ ಬ್ರೋಕರ್ ಗಳ ಕಾರುಬಾರೆ‌ ಜಾಸ್ತಿ, ದಲ್ಲಾಳಿಗಳು ಇಲ್ಲದೇ ಇಲ್ಲಿ ಯಾವುದೇ ಕೆಲಸ ನಡೆಯೊದಿಲ್ಲ. ಅಧಿಕಾರಿಗಳ ಮತ್ತು ದಲ್ಲಾಲಿಗಳ ನಡುವೆ ಹಣದ ರೂಪದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.

ತಪಾಸಣೆ ಮಾಡದೇ ಸಾವಿರಾರು ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ (FC) ದುಡ್ಡು ಕೊಟ್ಟರೆ ಕ್ಷಣಮಾತ್ರದಲ್ಲಿ ನೀಡುತ್ತಾರೆ ಇದಕ್ಕೆಲ್ಲ ಬ್ರೋಕರ್ ಗಳು ಬೇಕೆ ಬೇಕು. ದಲ್ಲಾಳಿಗಳು ಮತ್ತು RTO ಅಧಿಕಾರಿಗಳು RTO ನಿಯಮಗಳನ್ನು ಗಾಳಿಗೆ ತೂರಿ ಲಂಚ ನೀಡಿದರೆ ಯಾವುದೇ ಕಾರ್ಯ ಮುಂದುವರಿಯುತ್ತದೆ .ದ‌‌.ಕ ಜಿಲ್ಲಾ ಗ್ರಾಮ ಪಂಚಾಯತಿಗಳಿಗೆ ಲೋಕಾಯುಕ್ತ ದಾಳಿ ನಡೆಸಿದಂತೆ ಮಂಗಳೂರಿನ RTO ಕಛೇರಿಗೂ ದಾಳಿ ನಡೆಸಿ ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟಿ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed