ಮಂಗಳೂರು: ಮಾಜಿ ಸಂಸದ ಪ್ರತಾಪ ಸಿಂಹನು ಜನರಿಗೆ ಪರಿಚಯವಾದದ್ದೇ, ಬೆತ್ತಲು ಲೋಕ ಎಂಬ ಪೇಪರಿನ ಹುಲಿ ಹವ್ಯಾಸದಿಂದ, ಪ್ರತಾಪನು ಅಂದಿನಿಂದ ಇಂದಿನವರೆಗೆ, ಏನಾದರೂ ಸಾಧನೆ ಮಾಡಿದ್ದಿದ್ದರೆ, ಅದು ಅವನು ಉಸಿರಾಡುತ್ತಿರುವ ಕೋಮು ದ್ವೇಷದಿಂದ. ಮೈಸೂರು ಪ್ರಾಂತ್ಯದಲ್ಲಿ, ಮುಸ್ಲಿಮ್ ಮತ್ತು ಇಸ್ಲಾಮ್ ನಂಬಿಕೆ, ಚಿನ್ಹೆ, ಸಂಕೇತ, ಸಂಪ್ರದಾಯಗಳನ್ನು ದ್ವೇಷ ಮಾಡಿಕೊಂಡು, ತೆವಳಿ, ಈ ಪ್ರಾಂತ್ಯದ ಪರಿಶಿಷ್ಟ, ಒಕ್ಕಲಿಗ ಜನರನ್ನು , ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಕೋಮುಗಲಭೆ ಹಚ್ಚಿ ಜನರನ್ನು ಧ್ರುವೀಕರಿಸಿ ಮಾಡಿದ ರಾಜಕೀಯದಿಂದಾಗಿ ತಾನು ಸಂಸದನಾಗಿದ್ದಾನೆ.
ಆದರೆ ಮೈಸೂರಿನ ಜನರು ಸಾಂಸ್ಕೃತಿಕ ಹಿನ್ನೆಲೆಯವರು ಆದುದರಿಂದ ಪ್ರತಾಪನ ಎರಡನೇ ಸಂಸದ ಪ್ರಯತ್ನ ವಿಫಲವಾಗಿದೆ. ಪ್ರಸ್ತುತ ಪ್ರತಾಪ ಸಿಂಹ ತನ್ನ ಚಾಳಿಯನ್ನು ಮುಂದುವರಿಸುವ ಭಾಗವಾಗಿ, ಪೊಲೀಸರ ಹಬ್ಬದ ಮುಂಜಾಗ್ರತೆಯ ಕ್ರಮವನ್ನು ಕೋಮುಗಲಬೆಯಾಗಿ ಪರಿವರ್ತಿಸಲು ಪ್ರಯತ್ನ ಪಟ್ಟಿದ್ದಾನೆ, ಪ್ರತಾಪನ ಜೀವನವೇ ಕೋಮು ದ್ವೇಷಿತ, ‘ ಮುಸ್ಲಿಮ್, ಮಸೀದಿ ‘ ಎಂಬ ಪದಬಳಕೆ ಹೊರತಾದ ಜೀವನ ಪ್ರತಾಪಾನಿಂದ ಸಾಧ್ಯವಿಲ್ಲ!!! ಎಂಬುದು ನಿಜವಾಗುತ್ತಿದೆ. ಮಸೀದಿ , ಮುಸ್ಲಿಮರು, ಸಾಬರು ಎಂಬ ಪದವನ್ನೇ ಕಣ್ವರಿಸುವ ಪ್ರತಾಪನಿಗೆ ಇವುಗಳು ಇಲ್ಲದಿದ್ದರೆ ಜೀವಸಲು ಸಾಧ್ಯವಿಲ್ಲದ ಸನ್ನಿವೇಶ ಎದುರಾಗಿದೆ !!!.















