, ,

ರೈಲಿನಲ್ಲಿ ನಿದ್ರಿಸುತ್ತಿದ್ದ ಮಹಿಳೆಯ ಚೂಡಿದಾರ್ ಜೇಬಿನಿಂದ 12 ಗ್ರಾಂ ಚಿನ್ನದ ಸರ ಕಳವು

ಕುಂದಾಪುರ : ರೈಲು ಪ್ರಯಾಣದ ವೇಳೆ ನಿದ್ರೆಯಲ್ಲಿದ್ದ ಮಹಿಳೆಯ ಚೂಡಿದಾರ್ ಜೇಬಿನಲ್ಲಿದ್ದ ಬರೋಬ್ಬರಿ 12 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಮಂಗಳೂರು-ಕುಂದಾಪುರ ರೈಲು ಮಾರ್ಗದಲ್ಲಿ ಸಂಭವಿಸಿದೆ. ಕೇರಳ ರಾಜ್ಯದ ಕಾಸರಗೋಡು ನಿವಾಸಿ ಬೆನ್ನಿ ಥಾಮಸ್ ಎಂಬುವರು ನೀಡಿದ ದೂರಿನನ್ವಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ. ದೂರುದಾರ ಬೆನ್ನಿ ಥಾಮಸ್ ಅವರು  ರಾತ್ರಿ ಸುಮಾರು 21:30 ಗಂಟೆಗೆ (9:30) ಮಂಗಳೂರಿನಿಂದ ಮಡ್ಯಾಂವ್‌ಗೆ ಚಲಿಸುವ ರೈಲು ಸಂಖ್ಯೆ 12617 ರ (ಮಂಗಳಾ ಲಕ್ಷದ್ವೀಪ್…

ಕುಂದಾಪುರ : ರೈಲು ಪ್ರಯಾಣದ ವೇಳೆ ನಿದ್ರೆಯಲ್ಲಿದ್ದ ಮಹಿಳೆಯ ಚೂಡಿದಾರ್ ಜೇಬಿನಲ್ಲಿದ್ದ ಬರೋಬ್ಬರಿ 12 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಮಂಗಳೂರು-ಕುಂದಾಪುರ ರೈಲು ಮಾರ್ಗದಲ್ಲಿ ಸಂಭವಿಸಿದೆ. ಕೇರಳ ರಾಜ್ಯದ ಕಾಸರಗೋಡು ನಿವಾಸಿ ಬೆನ್ನಿ ಥಾಮಸ್ ಎಂಬುವರು ನೀಡಿದ ದೂರಿನನ್ವಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

ದೂರುದಾರ ಬೆನ್ನಿ ಥಾಮಸ್ ಅವರು  ರಾತ್ರಿ ಸುಮಾರು 21:30 ಗಂಟೆಗೆ (9:30) ಮಂಗಳೂರಿನಿಂದ ಮಡ್ಯಾಂವ್‌ಗೆ ಚಲಿಸುವ ರೈಲು ಸಂಖ್ಯೆ 12617 ರ (ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್) ಬೋಗಿಯಲ್ಲಿ ಕುಟುಂಬಸಮೇತರಾಗಿ ರೈಲು ಹತ್ತಿದ್ದರು. ದೂರುದಾರರ ಪತ್ನಿಯು ಸೀಟ್ ಸಂಖ್ಯೆ 7ರ ಪಕ್ಕದಲ್ಲಿದ್ದು, ಪ್ರಯಾಣದ ವೇಳೆ ಗಾಢ ನಿದ್ರೆಯಲ್ಲಿದ್ದರು.

ರೈಲು ನಿಲ್ದಾಣವೊಂದರಲ್ಲಿ ನಿಂತಾಗ ಪ್ರಯಾಣಿಕರು ಇಳಿಯಲು ಓಡಾಡುತ್ತಿದ್ದ ಸಮಯವನ್ನು ಬಳಸಿಕೊಂಡ ಅಪರಿಚಿತ ಕಳ್ಳನು, ನಿದ್ರೆಯಲ್ಲಿದ್ದ ಮಹಿಳೆಯ ಚೂಡಿದಾರ್ ಜೇಬಿಗೆ ಕೈಹಾಕಿ ಚೈನ್ ಕದ್ದಿದ್ದಾನೆ.
ರೈಲು ಚಲಿಸಲು ಆರಂಭಿಸುತ್ತಿದ್ದಂತೆ ಎಚ್ಚರಗೊಂಡ ಪತ್ನಿ ಪರಿಶೀಲಿಸಿದಾಗ ಜೇಬಿನಲ್ಲಿದ್ದ ಸುಮಾರು 12 ಗ್ರಾಂ ತೂಕದ, 1.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಈ ವಿಷಯವನ್ನು ಪತಿಗೆ ತಿಳಿಸಿದ್ದು, ಅಷ್ಟರಲ್ಲಾಗಲೇ ರೈಲು ಕುಂದಾಪುರ ನಿಲ್ದಾಣವನ್ನು ದಾಟಿ ಮುಂದೆ ಸಾಗಿತ್ತು. ಈ ಕೃತ್ಯದ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 49/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305(C) ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed