, ,

ಫೇಸ್‌ಬುಕ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಕಾರಿನ ಹೆಸರಲ್ಲಿ ಸೈಬರ್ ವಂಚನೆ- ಕಾರ್ಕಳದ ವ್ಯಕ್ತಿಗೆ ₹4.35 ಲಕ್ಷ ಪಂಗನಾಮ

ಕಾರ್ಕಳ: ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹೀರಾತು ನೀಡಿ, ಕಾರು ಖರೀದಿಸಲು ಮುಂದಾದ ವ್ಯಕ್ತಿಯಿಂದ ₹4.35 ಲಕ್ಷ ಪಡೆದು ಕಾರನ್ನೂ ನೀಡದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಾರ್ಕಳ ತಾಲೂಕಿನ ಬೆಳ್ಮಣ್‌ನ ಬಾಲಕೃಷ್ಣ ರಾವ್‌ (48) ವಂಚನೆಗೊಳಗಾದವರು. ಇವರು 2026ರ ಆಗಸ್ಟ್ 20ರಂದು ಫೇಸ್‌ಬುಕ್‌ನಲ್ಲಿ KA-05 NK-2712 ನೋಂದಣಿ ಸಂಖ್ಯೆಯ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಮಾರಾಟದ ಜಾಹೀರಾತನ್ನು ಗಮನಿಸಿದ್ದರು. ಬಳಿಕ ಜಾಹೀರಾತಿನಲ್ಲಿ ನೀಡಲಾದ ಸಂಪರ್ಕದ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ…

ಕಾರ್ಕಳ: ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹೀರಾತು ನೀಡಿ, ಕಾರು ಖರೀದಿಸಲು ಮುಂದಾದ ವ್ಯಕ್ತಿಯಿಂದ ₹4.35 ಲಕ್ಷ ಪಡೆದು ಕಾರನ್ನೂ ನೀಡದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಾರ್ಕಳ ತಾಲೂಕಿನ ಬೆಳ್ಮಣ್‌ನ ಬಾಲಕೃಷ್ಣ ರಾವ್‌ (48) ವಂಚನೆಗೊಳಗಾದವರು. ಇವರು 2026ರ ಆಗಸ್ಟ್ 20ರಂದು ಫೇಸ್‌ಬುಕ್‌ನಲ್ಲಿ KA-05 NK-2712 ನೋಂದಣಿ ಸಂಖ್ಯೆಯ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಮಾರಾಟದ ಜಾಹೀರಾತನ್ನು ಗಮನಿಸಿದ್ದರು. ಬಳಿಕ ಜಾಹೀರಾತಿನಲ್ಲಿ ನೀಡಲಾದ ಸಂಪರ್ಕದ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿ, ತಾನು ರವಿಚಂದ್ರ ಎಂಬುದಾಗಿ ಪರಿಚಯಿಸಿಕೊಂಡು ಕಾರನ್ನು ₹4.50 ಲಕ್ಷಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದ ಎನ್ನಲಾಗಿದೆ.

ಆರೋಪಿಯ ಮಾತನ್ನು ನಂಬಿದ ಬಾಲಕೃಷ್ಣ ರಾವ್ ಅವರು ಆಗಸ್ಟ್ 20ರಂದು ₹45,000, ಆಗಸ್ಟ್ 21ರಂದು ₹3 ಲಕ್ಷ ಹಾಗೂ ಅದೇ ದಿನ ಮತ್ತೊಂದು ₹45,000 ಮತ್ತು ಆಗಸ್ಟ್ 22ರಂದು ₹45,000 ಸೇರಿದಂತೆ ಒಟ್ಟು ₹4.35 ಲಕ್ಷವನ್ನು ಪೇಟಿಎಂ ಹಾಗೂ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಕಾರು ಪಡೆದುಕೊಳ್ಳಲು ಆರೋಪಿಯು ತಿಳಿಸಿದ್ದ ಚಿಕ್ಕಮಗಳೂರಿನ ಮತ್ತಿಕೆರೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ವ್ಯಕ್ತಿ ಅಥವಾ ಕಾರು ಪತ್ತೆಯಾಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಕಾರಿನ ಬ್ಯಾಟರಿ ಚಾರ್ಜ್ ಇಲ್ಲದೆ ಸ್ಥಗಿತಗೊಂಡಿದ್ದು, ಶೋರೂಂನಲ್ಲಿ ರಿಪೇರಿ ಮಾಡಿಸಿ ಒಂದು ವಾರದೊಳಗೆ ಚಾಲಕನ ಮೂಲಕ ಮನೆಗೆ ತಲುಪಿಸುವುದಾಗಿ ಆರೋಪಿ ಭರವಸೆ ನೀಡಿದ್ದ ಎನ್ನಲಾಗಿದೆ.

ಆದರೆ ಇದುವರೆಗೆ ಕಾರನ್ನು ನೀಡದೆ, ಪಾವತಿಸಿದ ಹಣವನ್ನೂ ಹಿಂದಿರುಗಿಸದೆ ವಂಚಿಸಿರುವುದಾಗಿ ಬಾಲಕೃಷ್ಣ ರಾವ್ ದೂರು ನೀಡಿದ್ದಾರೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed