,

ತುಳುನಾಡಿನ ಹೆಮ್ಮೆಯ ಕುವರಿ ನಿವೇದಿತಾ ರೈಗೆ ನಿಮ್ಮ ಬೆಂಬಲ ಇರಲಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಗೇಮ್ ಶೋ ‘ಹಳ್ಳಿ ಪವರ್ ರಿಲೋಡೆಡ್’ ಕಾರ್ಯಕ್ರಮದಲ್ಲಿ ತಮ್ಮ ಅದ್ಭುತ ಸಾಮರ್ಥ್ಯ, ಕಠಿಣ ಪರಿಶ್ರಮ ಹಾಗೂ ಅಚಲ ಛಲದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸ್ಪರ್ಧಿ ನಿವೇದಿತಾ ರೈ. ಮಂಗಳೂರು ಮೂಲದವರಾದ, ಮೈಸೂರಿನಲ್ಲಿ ಬೆಳೆದ ಇಂಜಿನಿಯರಿಂಗ್ ಪದವೀಧರೆ ನಿವೇದಿತಾ ರೈ ಅವರು ಫಿಟ್‌ನೆಸ್ ಹಾಗೂ ಜಿಮ್ ತರಬೇತಿಯ ಹಿನ್ನೆಲೆಯೊಂದಿಗೆ ಕಠಿಣ ಟಾಸ್ಕ್‌ಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಸತತ ಎರಡು ವಾರಗಳ ಕಾಲ ‘ವೀರರಾಣಿ’ ಪಟ್ಟವನ್ನು ಅಲಂಕರಿಸಿರುವುದು…

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಗೇಮ್ ಶೋ ‘ಹಳ್ಳಿ ಪವರ್ ರಿಲೋಡೆಡ್’ ಕಾರ್ಯಕ್ರಮದಲ್ಲಿ ತಮ್ಮ ಅದ್ಭುತ ಸಾಮರ್ಥ್ಯ, ಕಠಿಣ ಪರಿಶ್ರಮ ಹಾಗೂ ಅಚಲ ಛಲದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸ್ಪರ್ಧಿ ನಿವೇದಿತಾ ರೈ.

ಮಂಗಳೂರು ಮೂಲದವರಾದ, ಮೈಸೂರಿನಲ್ಲಿ ಬೆಳೆದ ಇಂಜಿನಿಯರಿಂಗ್ ಪದವೀಧರೆ ನಿವೇದಿತಾ ರೈ ಅವರು ಫಿಟ್‌ನೆಸ್ ಹಾಗೂ ಜಿಮ್ ತರಬೇತಿಯ ಹಿನ್ನೆಲೆಯೊಂದಿಗೆ ಕಠಿಣ ಟಾಸ್ಕ್‌ಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಸತತ ಎರಡು ವಾರಗಳ ಕಾಲ ‘ವೀರರಾಣಿ’ ಪಟ್ಟವನ್ನು ಅಲಂಕರಿಸಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ.

ಕಠಿಣ ಸವಾಲುಗಳ ಮುಂದೆ ಎಂದಿಗೂ ಹಿಂದೆ ಸರಿಯದೆ, ಆತ್ಮವಿಶ್ವಾಸದಿಂದ ಮುನ್ನುಗ್ಗುವ ಇವರ ಆಟದ ವೈಖರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಅವರು ‘ಟಾಸ್ಕ್ ಕ್ವೀನ್ ನಿವೇದಿತಾ’ ಎಂದೇ ಜನಪ್ರಿಯರಾಗಿದ್ದಾರೆ.

‘ಜಲ ಯುದ್ಧ’ ಟಾಸ್ಕ್‌ನಲ್ಲಿನ ಹೋರಾಟವಾಗಲಿ, ನವರಾತ್ರಿ ವಿಶೇಷ ಸಂಚಿಕೆಯಲ್ಲಿ ಮಹಿಷಮರ್ದಿನಿಯ ಅವತಾರದಲ್ಲಿ ನೀಡಿದ ಸಾಂಸ್ಕೃತಿಕ ಪ್ರದರ್ಶನವಾಗಲಿ — ಪ್ರತಿಯೊಂದರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ನಿವೇದಿತಾ ರೈ ಅವರಿಗೆ ಈಗ ಬೇಕಾಗಿರುವುದು ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಮತ್ತು ಅಮೂಲ್ಯ ಮತಗಳು!

ತುಳುನಾಡಿನ ಜನತೆಯೇ, ಈಗ ನಮ್ಮ ಸರದಿ!

ನಮ್ಮೂರಿನ ಪ್ರತಿಭೆ, ನಮ್ಮ ತುಳುನಾಡಿನ ಕುವರಿ ನಿವೇದಿತಾ ರೈ ಅವರನ್ನು ಗೆಲುವಿನತ್ತ ಕೊಂಡೊಯ್ಯಲು ನಾವೆಲ್ಲರೂ ಒಂದಾಗೋಣ.

ಮಂಗಳೂರು ಸೇರಿದಂತೆ ತುಳುನಾಡಿನ ಸಮಸ್ತ ಜನತೆ, ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ನಮ್ಮದೊಂದು ಪ್ರೀತಿಯ ಮನವಿ:

ನಿಮ್ಮ ಮೊಬೈಲ್‌ನಿಂದ ಸ್ಕ್ಯಾನರ್‌ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ, ಅಧಿಕೃತ ಮತದಾನ ಪ್ರಕ್ರಿಯೆಯಂತೆ ನಿವೇದಿತಾ ರೈ ಅವರಿಗೆ ನಿಮ್ಮ ಅಮೂಲ್ಯ ಮತವನ್ನು ನೀಡಿ.

ನಿಮ್ಮ ಒಂದು ಮತವೂ ಅವರ ಗೆಲುವಿನ ಪಯಣದಲ್ಲಿ ಮಹತ್ವದ ಬೆಂಬಲವಾಗಬಹುದು!

ಬನ್ನಿ, ನಮ್ಮ ತುಳುನಾಡಿನ ಕುವರಿಗೆ ಕೈಜೋಡಿಸೋಣ. ಅವರ ಆತ್ಮವಿಶ್ವಾಸಕ್ಕೆ ಇನ್ನಷ್ಟು ಬಲ ತುಂಬೋಣ. ‘ಹಳ್ಳಿ ಪವರ್ ರಿಲೋಡೆಡ್’ ವೇದಿಕೆಯಲ್ಲಿ ನಿವೇದಿತಾ ರೈ ಅವರ ಗೆಲುವಿಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.

ನಮ್ಮ ಬೆಂಬಲ — ನಿವೇದಿತಾ ರೈಗೆ

ನಮ್ಮ ಹೆಮ್ಮೆ — ತುಳುನಾಡಿನ ಕುವರಿ ನಿವೇದಿತಾ ರೈ

ಜೈ ತುಳುನಾಡು

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports