ಪುತ್ತೂರು: ಬಜತ್ತೂರು ಗ್ರಾಮದ ಬೆದ್ರೋಡಿಯ ಹನ್ನತ್ ಬೀಬಿ ಎಂಬುವವರು ಬಜಾಜ್ ಫೈನಾನ್ಸ್ ಮೂಲಕ ಮೊಬೈಲ್ ಖರೀದಿಸಿದ್ದು, ಇಎಂಐ
ಪಾವತಿಸಿದೆ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಬಜಾಜ್ ಫೈನಾನ್ಸ್‌ನ ಉದ್ಯೋಗಿ ಹನ್ನತ್ ಅವರಿಗೆ ಕರೆ ಮಾಡಿದಾಗ ಮನೆಗೆ ಬಂದರೆ ಹಣ ಕೊಡುವುದಾಗಿ ಹೇಳಿ ಅವರ ಮನೆಗೆ ತೆರಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹನ್ನತ್ ಬೀಬಿ ಅವರು ಮನೆಗೆ EMI ಹಣ ಕೊಡುತ್ತಾರೆಂದು ತಿಳಿಸಿದ ಕಾರಣ ಬಜಾಜ್ ಉದ್ಯೋಗಿ ಅವರ ಮನೆಗೆ ತೆರಳಿದಾಗ ಅಲ್ಲಿ ಬೀಬಿರವರ ಸಹೋದರ ಶಮೀರ್ ಎಕಾಏಕಿಯಾಗಿ ಬಜಾಜ್ ಸಿಬ್ಬಂದಿಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಕೆನ್ನೆಗೆ ಹೊಡೆದು ಅಲ್ಲೇ ಪಕ್ಕದಲ್ಲಿದ್ದ ಚೆಯರ್ ನಿಂದ ಕೈಗೆ ಹೊಡೆದು
ನಂತರ ಅಲ್ಲಿದ್ದ ಕಾರಿನ ಟಯರನ್ನು ಎಸೆದಿದ್ದು ಇದರಿಂದಸಿಬ್ಬಂದಿಯ ಬಲಕಾಲಿಗೆ, ಕೈಗೆ ,ಕೆನ್ನೆಗೆ ಗುದ್ದಿದ ಗಾಯವಾಗಿದೆ. ನಂತರ ಹನ್ನತ್ ಬೀಬಿರವರ ಮನೆಯವರು ಸೇರಿ
ಗಲಾಟೆ ಬಿಡಿಸಿದ್ದು, ನಂತರ ಗಾಯಾಳುವನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 145/2026 ಕಲಂ 352, 351(2),115(2), 118(1), ಬಿ.ಎನ್. ಎಸ್. 2023 ಅನ್ವಯ ಪ್ರಕರಣ ದಾಖಲಾಗಿದೆ.















