ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಪವರ್ ಟಿವಿ ಕಚೇರಿ ಹಾಗೂ ವಾಹಿನಿಯ ಮಾಲಕ ರಾಕೇಶ್ ಶೆಟ್ಟಿ
ಅವರ ಕೊಡಿಗೇಹಳ್ಳಿಯ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೋಮವಾರ ಸುಮಾರು 30 ಅಧಿಕಾರಿಗಳನ್ನೊಳಗೊಂಡ ಸಿಸಿಬಿ ತಂಡವು ಏಕಕಾಲದಲ್ಲಿ ರಾಕೇಶ್ ಶೆಟ್ಟಿ ಅವರ ನಿವಾಸ ಹಾಗೂ ಅವರ ಮಾಲೀಕತ್ವದ ಪವರ್ ಟಿವಿ ಕಚೇರಿ ಮೇಲೆ ದಾಳಿ
ನಡೆಸಿ ದಾಖಲೆಗಳು ಹಾಗೂ ಇತರ ಮಾಹಿತಿಗಳ ಪರಿಶೀಲನೆ ಕೈಗೊಂಡಿದೆ.
ಸಿದ್ದರಾಮಯ್ಯ ವಿರುದ್ಧ ಹರಿಬಿಡಲಾಗಿದ್ದ ವಿಡಿಯೊವನ್ನು ತಾವೇ ರೆಕಾರ್ಡ್ ಮಾಡಿದ್ದಾಗಿ ರಾಕೇಶ್ ಶೆಟ್ಟಿ ಈ ಹಿಂದೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ,
ಪವರ್ ಟಿವಿ ಕಚೇರಿ ಮೇಲೆ ದಾಳಿ ನಡೆಸಿದರೆ ಇಂತಹ ಇನ್ನೂ ಹಲವು ವಿಡಿಯೊಗಳು ಲಭ್ಯವಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಪವರ್ ಟಿವಿ ಕಚೇರಿ ಮತ್ತು ರಾಕೇಶ್ ಶೆಟ್ಟಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ
ಮುಂದುವರಿಸಿದ್ದಾರೆ.















