ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ಮುಖಂಡೇ ಕೃಪಾ ಆಳ್ವಾ ಗೆ ಸಿಸಿಬಿ ನೋಟಿಸ್ ನೀಡಿದೆ. ಮೊಬೈಲ್ ಮತ್ತು ಲ್ಯಾಪ್ಟಾಪ್ ಸಮೇತ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೂಚನೆ ನೀಡಿದ್ದು ಪೂರ್ವ ನಿಯೋಜಿತ ಟ್ರಿಪ್ ಹಿನ್ನೆಲೆ ಕೃಪ ಆಳ್ವಾ ವಿದೇಶಕ್ಕೆ ತೆರಳಿದ್ದರು.
ನವೆಂಬರ್ 7ರಂದು ರಾತ್ರಿ ಕೆಂಪೇಗೌಡ ಏರ್ಪೋರ್ಟ್ ಗೆ ಕೃಪಾ ಆಳ್ವ ಬಂದಿದ್ದಾರೆ. ಮೊದಲೇ ಕೃಪ ಆಳ್ವ ವಿರುದ್ಧ ಸಿಸಿಬಿ ಅಧಿಕಾರಿಗಳು LOC ಜಾರಿ ಮಾಡಿದ್ದರು ಹಾಗಾಗಿ ಏರ್ಪೋರ್ಟ್ ಎಮಿಗ್ರಷನ್ ಅಧಿಕಾರಿಗಳು ಕೃಪ ಆಳ್ವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಸಿಸಿಬಿ ಸೈಬರ್ ಇನ್ಸ್ಪೆಕ್ಟರ್ ಸತೀಶ್ ವಶಕ್ಕೆ ನೀಡಿದ ಅಧಿಕಾರಿಗಳು, ಕೃಪಾಆಳ್ವರನ್ನು ಪೊಲೀಸರು ಏರ್ಪೋರ್ಟ್ ಸ್ಟೇಷನ್ ಗೆ ಕರೆದೋಯ್ದಿದ್ದರು.
ಈ ವೇಳೆ ಮಧ್ಯಂತರ ಜಾಮೀನು ಪಡೆದಿದ್ದರಿಂದ ಬಂಧನ ಮಾಡಿರಲಿಲ್ಲ ಹೀಗಾಗಿ ನವೆಂಬರ್ 9 ರಂದು ವಿಚಾರಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಕೃಪಾ ಆಳ್ವಗೆ ನೋಟಿಸ್ ನೀಡಿದ್ದಾರೆ.















