,

ದಕ್ಷ ಪೋಲಿಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಂದ ಮಂಗಳೂರು ಮಾದಕ ದ್ರವ್ಯ ಮುಕ್ತ

ಮಂಗಳೂರು: ಯುವಕರ ಭವಿಷ್ಯ ಹಾಳುಮಾಡುವ ಮಾದಕ ದ್ರವ್ಯಗಳ ಜಾಲವನ್ನು ಮಟ್ಟಹಾಕಲು ಮಂಗಳೂರು ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.ನಗರದಲ್ಲಿ ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆಯನ್ನು ತಡೆಯಲು ವಿಶೇಷ ಕಾರ್ಯಾಚರಣೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಾಚರಣೆಗಳ ಭಾಗವಾಗಿ, ಸಾರ್ವಜನಿಕ ಸ್ಥಳಗಳು, ಚಹಾ ಅಂಗಡಿಗಳು ಮತ್ತು ಇತರ ವ್ಯಾಪಾರ ಮಳಿಗೆಗಳಲ್ಲಿ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುತ್ತಿದೆ. ಇಂತಹ ದಾಳಿಗಳಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಕಳೆದ 6 ತಿಂಗಳುಗಳಿಂದ ಈ ವಿಶೇಷ…

ಮಂಗಳೂರು: ಯುವಕರ ಭವಿಷ್ಯ ಹಾಳುಮಾಡುವ ಮಾದಕ ದ್ರವ್ಯಗಳ ಜಾಲವನ್ನು ಮಟ್ಟಹಾಕಲು ಮಂಗಳೂರು ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
ನಗರದಲ್ಲಿ ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆಯನ್ನು ತಡೆಯಲು ವಿಶೇಷ ಕಾರ್ಯಾಚರಣೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಾಚರಣೆಗಳ ಭಾಗವಾಗಿ, ಸಾರ್ವಜನಿಕ ಸ್ಥಳಗಳು, ಚಹಾ ಅಂಗಡಿಗಳು ಮತ್ತು ಇತರ ವ್ಯಾಪಾರ ಮಳಿಗೆಗಳಲ್ಲಿ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುತ್ತಿದೆ. ಇಂತಹ ದಾಳಿಗಳಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಕಳೆದ 6 ತಿಂಗಳುಗಳಿಂದ ಈ ವಿಶೇಷ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದ್ದು, ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಅಂಗಡಿಗಳ ಮೇಲೆ ನಿಗಾ ಇಡಲಾಗಿದೆ. ಈ ವೇಳೆ, ಗಾಂಜಾ ಮತ್ತು ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಮಾರಾಟಗಾರರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ನಮ್ಮ ಮಂಗಳೂರಿನಲ್ಲಿ ಎಷ್ಟೋ ಕಮಿಷನರ್‌ಗಳು ಬಂದು ಹೋಗಿದ್ದಾರೆ, ಆದರೆ ಸುಧೀರ್ ಕುಮಾರ್ ರೆಡ್ಡಿ ಅವರಂತಹ ಅಧಿಕಾರಿಯ ಆಗಮನ ಕರಾವಳಿಯ ಜನತೆಗೆ ಹೊಸ ಭರವಸೆ ನೀಡಿದೆ. ಒಬ್ಬ ದಕ್ಷ ಅಧಿಕಾರಿ ಮನಸ್ಸು ಮಾಡಿದರೆ ವ್ಯವಸ್ಥೆಯಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಇವರೇ ಸಾಕ್ಷಿ.
ಒಂದು ಕಾಲವಿತ್ತು… ಗಾಂಜಾ ಮಾಫಿಯಾ ಮತ್ತು ದನಗಳ ಕಳ್ಳತನದಂತಹ ಪ್ರಕರಣಗಳಲ್ಲಿ ಆರೋಪಿಗಳು ಸುಲಭವಾಗಿ ಜಮೀನು ಪಡೆದು ಹೊರಬರುತ್ತಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸ್‌ಗಳು ಮುಚ್ಚಿ ಹೋಗುತ್ತಿದ್ದವು. ಇದರಿಂದ ಹಗಲಿರುಳು ಕಷ್ಟಪಟ್ಟು ಅಕ್ರಮಗಳನ್ನು ಹಿಡಿದುಕೊಡುತ್ತಿದ್ದ ಸಂಘಟನೆಯ ಯುವಕರಿಗೆ ಮತ್ತು ಸಾರ್ವಜನಿಕರಿಗೆ ಬೇಸರವಾಗುತ್ತಿತ್ತು. ಆದರೆ, ಸುಧೀರ್ ಕುಮಾರ್ ರೆಡ್ಡಿಯವರು ಬಂದ ನಂತರ ಚಿತ್ರಣವೇ ಬದಲಾಗಿದೆ!
ಇಂದು ಕ್ರಿಮಿನಲ್‌ಗಳು ಅರೆಸ್ಟ್ ಆಗುವುದು ಮಾತ್ರವಲ್ಲ, ಅವರಿಗೆ ಕೋರ್ಟ್‌ನಲ್ಲಿ ಶಿಕ್ಷೆಯಾಗುವಂತೆ ಕಟ್ಟುನಿಟ್ಟಿನ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ಕಮಿಷನರ್ ಯಶಸ್ವಿಯಾಗಿದ್ದಾರೆ. ಗಾಂಜಾ ಜಾಲದ ಸಣ್ಣಪುಟ್ಟ ಕೊಂಡಿಗಳಷ್ಟೇ ಅಲ್ಲ, ದೊಡ್ಡ ದೊಡ್ಡ ತಲೆಗಳ ಹೆಡೆಮುರಿ ಕಟ್ಟುವ ಕೆಲಸವೂ ವೇಗವಾಗಿ ಸಾಗುತ್ತಿದೆ. ಇಂದು ಕ್ರಿಮಿನಲ್‌ಗಳು ಕಮಿಷನರ್ ಅವರ ಹೆಸರನ್ನು ಕೇಳಿದರೆ ಕನಸಿನಲ್ಲೂ ಬೆಚ್ಚಿಬೀಳುವಂತಾಗಿದೆ!

ಮಂಗಳೂರನ್ನು ಮಾದಕ ದ್ರವ್ಯ ಮುಕ್ತ ಮತ್ತು ಅಪರಾಧ ಮುಕ್ತ ನಗರವನ್ನಾಗಿ ಮಾಡುವ ಅವರ ಹಠಕ್ಕೆ ನಮ್ಮೆಲ್ಲರ ಬೆಂಬಲವಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಸಾರ್ವಜನಿಕರ ಸಹಕಾರ ಯಾವತ್ತೂ ಇರುತ್ತದೆ.
“ನಿಮ್ಮ ದಕ್ಷತೆಗೆ ನಮ್ಮದೊಂದು ಸಲ್ಯೂಟ್ ಸರ್. ಸತ್ಯದ ಹಾದಿಯಲ್ಲಿ ನಡೆಯುವ ನಿಮ್ಮ ಕೆಲಸಕ್ಕೆ ದೇವರ ಆಶೀರ್ವಾದ ಯಾವತ್ತೂ ಇರಲಿ ಎಂಬುದು ನಮ್ಮ ಕ್ರೈಂ ನ್ಯೂಸ್‌ ನ ಆಶಯವಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed