Author: News Editor
-

ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : 12 ಆರೋಪಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಆಕೆಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಪ್ರಕರಣದ 12 ಆರೋಪಿಗಳು ತಪ್ಪಿತಸ್ಥರು ಅಂತಾ ತೀರ್ಪು ಪ್ರಕಟವಾಗಿತ್ತು. ಇದೀಗ ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 12 ಅಪರಾಧಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪ್ರತಿ ಶಿಕ್ಷೆಗು ಒಂದೊಂದು ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಲಾಗಿದ್ದು, ಐದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಮೂರ್ತಿ ಎಚ್.ಎಸ್ ಮಂಜುನಾಥ್…
-

ಪಿಲಿಕುಳ ಪ್ರಾಣಿ ಸಂಗ್ರಾಲಯಕ್ಕೆ ಬೀಗ..!; ಹೈ ಕೋರ್ಟ್ ಆದೇಶಕ್ಕೆ ಕಾರಣವೇನು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕೈಕ ಪ್ರಾಣಿಗಳ ಸಂಗ್ರಾಲಯ ಆಗಿದ್ದ ಪಿಲಿಕುಳ ಪ್ರಾಣಿ ಸಂಗ್ರಾಲಯ ಇನ್ನೂ ನೆನಪು ಮಾತ್ರ. ಮಕ್ಕಳಿಗೂ ಕುಟುಂಬಗಳಿಗೂ ಜನಪ್ರಿಯವಾದ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮ, ಆಡಳಿತದ ನಿರ್ಲಕ್ಷ್ಯ ಹಾಗೂ ಜವಾಬ್ದಾರಿ ಹೀನತೆಯ ಆರೋಪಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ತೀವ್ರ ಟೀಕೆಗೆ ಗುರಿಯಾಗಿದೆ. ಕರಾವಳಿಯ ಪ್ರಸಿದ್ಧ ZOO ನಲ್ಲಿ ನಡೆದಿರುವ ದುರುಪಯೋಗವನ್ನು ಕಂಡು ಆಘಾತಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು, ಜೂ ಅನ್ನು ತಕ್ಷಣ ಮುಚ್ಚುವಂತೆ ಆದೇಶಿಸಿದ್ದಾರೆ.
-

ಉಳ್ಳಾಲ: ಎರಡು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ 14 ವರ್ಷಗಳ ಬಳಿಕ ಬಂಧನ
ಉಳ್ಳಾಲ: ಠಾಣಾ ಮೊ.ನಂ 312/2011 ಕಲಂ 8(c) (ii) r/w 20(b) NDPS ACT ಹಾಗೂ ಮಾನ್ಯ JMFC II ನೇ ನ್ಯಾಯಾಲಯದ CC ನಂ 1757/13 ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತೋಯಿಬ್ ಮಸೀದಿ ಎದುರುಗಡೆ, ಮುಕ್ಕಚೇರಿ ಉಳ್ಳಾಲ ನಿವಾಸಿ, ಆರೋಪಿ ಮೊಹಮ್ಮದ್ ಸಂಶೀರ್ ತೋಯಿಬ್ ಎಂಬಾತನನ್ನು ಈ ದಿನ ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಯಿತು. ಮಾನ್ಯ ನ್ಯಾಯಾಲಯವು ಆರೋಪಿತನಿಗೆ LPC ವಾರಂಟ್ ಹೊರಡಿಸಿದ್ದು, 14 ವರ್ಷಗಳ ಬಳಿಕ ಆರೋಪಿಯನ್ನುಬಂಧನ ಮಾಡಲಾಗಿದೆ.
-

ಸುಳ್ಯ: ಯುವತಿಯ ಮೇಲೆ ಪತಿ ಸೇರಿ ಮೂವರಿಂದ ಹಲ್ಲೆ..!! ಪ್ರಕರಣ ದಾಖಲು
ಸುಳ್ಯ: ಸುಳ್ಯ ತಾಲೂಕಿನ ಕಲ್ಲುಗುಂಡಿ ನಿವಾಸಿ ಶ್ರೀಮತಿ ಸಾಹಿತ್ಯಾ ರೈ (27) ಅವರ ಮೇಲೆ ಪತಿ ಹಾಗೂ ಮಾವರು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಸಾಹಿತ್ಯಾ ರೈ ಅವರ ಪತಿ ಯಶಸ್ವಿ ರೈ (30) ಹಾಗೂ ಮಾವ ನಿತ್ಯಾನಂದ ರೈ (58) ಇಬ್ಬರೂ ಸೇರಿ ಮುಖಕ್ಕೆ ಕಚ್ಚಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸಾಹಿತ್ಯಾ ರೈ ಅವರು ಈ ವಿಚಾರವನ್ನು ತಕ್ಷಣವೇ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿರುವ ತಮ್ಮ ಪೋಷಕರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.…
-

‘ಐ ಬಾಲ್’ ಟ್ಯಾಟೂ ಹುಚ್ಚು : ಕಣ್ಣುಗುಡ್ಡೆಯಲ್ಲಿ ಹಚ್ಚೆ ಹಾಕಿಸಿಕೊಂಡು ಕುರುಡನಾದ ಯುವಕ.!
ಪ್ರಸ್ತುತ ಯುಗದಲ್ಲಿ, ಯುವಕರು ವಿವಿಧ ರೀತಿಯಲ್ಲಿ ವಿಭಿನ್ನವಾಗಿ ಕಾಣಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆಂಧ್ರಪ್ರದೇಶದ ಜಗದೀಶ್ ಎಂಬ ಯುವಕ ಮಾಡಿದ ಕೆಲಸ ಎಲ್ಲರನ್ನೂ ಅಚ್ಚರಿಗೊಳಿಸುವ ಮತ್ತು ಭಯಭೀತಗೊಳಿಸುವಂತಿದೆ. ಕಣ್ಣುಗುಡ್ಡೆಯ ಹಚ್ಚೆ ಹಾಕಿಸಿಕೊಂಡ ಮೊದಲ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ಅವನು ತನ್ನ ಕಣ್ಣುಗುಡ್ಡೆಗಳ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ‘ಐ ಬಾಲ್’ ಟ್ಯಾಟೂ ಹುಚ್ಚು ಐಟಿಐ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ಜಗದೀಶ್, ಪ್ರಸ್ತುತ ಹಚ್ಚೆ ಕಲಾವಿದನಾಗಿ ಕೆಲಸ ಮಾಡುತ್ತಿದ್ದಾನೆ. ಅವನು ನೇಪಾಳದಲ್ಲಿ ಹಚ್ಚೆ ಮತ್ತು ಚುಚ್ಚುವಿಕೆಯಂತಹ ವಿಭಾಗಗಳಲ್ಲಿ ತರಬೇತಿ ಪಡೆದಿದ್ದಾನೆ. ಬಾಲ್ಯದಿಂದಲೂ,…
-

ಮಂಗಳೂರು: ಮೂಡದ ಹಣ ಕಬಳಿಸಿ ಬಿಜಾಪುರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ..!! ಜೆಇ ನ ಭ್ರಷ್ಟಾಚಾರದ ಕಾರ್ಮಕಾಂಡ
ಮಂಗಳೂರು ನಗರ ಪ್ರಾಧಿಕಾರ (ಮೂಡ) ಇಲ್ಲಿನ ಜೆಇ (ಇಂಜಿನಿಯರ್) ಕೊಣಾಜೆ ಸುರತ್ಕಲ್ ಇಲ್ಲಿನ ಅಭಿವೃದ್ಧಿ ಯ ಮಣ್ಣನ್ನು ಕಬಳಿಸಿ ಬಿಜಾಪುರದಲ್ಲಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಕಟ್ಟಲು ಹೊರಟಿರುವ ಜೆಇ (ಇಂಜಿನಿಯರ್) ಕಳೆದ ಹಲವಾರು ವರ್ಷಗಳ ಹಿಂದೆ ಮೂಡ ದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇಲ್ಲಿನ ಭ್ರಷ್ಟಾಚಾರ ಹೆಚ್ಚಾಗಿರುವ ಕಾರಣ ಅವಾಗಿನ ಶಾಸಕರಾದ ಭರತ್ ಶೆಟ್ಟಿಯವರು ಎತ್ತಂಗಡಿ ಮಾಡಲಾಗಿತ್ತು. ಇದೀಗ ಪ್ರಭಾವಿ ರಾಜಕಾರಣಿಗಳ ಪ್ರಭಾವದಿಂದ ಮತ್ತೆ ಮೂಡದಲ್ಲೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆಂದು ಮೀಸಲಿಟ್ಟ ಹಣವನ್ನು ಬಿಜಾಪುರ ದಲ್ಲಿ…
-

ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್
ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ನೆಲೆಯಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನೈತಿಕ ಸಂಬಂಧವನ್ನು ಮಹಿಳೆಯ ಮಗಳು ಬಯಲು ಮಾಡಿದ್ದಕ್ಕೆ ಓರ್ವನ ಕೊಲೆಯಾಗಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಂತಹ ವಸಂತ ನಾಯಕ್ ಎನ್ನುವ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವಸಂತ ನಾಯಕ್ ಸಾವನ್ನಪ್ಪಿದ್ದಾರೆ.…
-

ಅಂಗಡಿ, ಹೊಟೇಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ ದರ್ಶನ್
ಮಂಗಳೂರು : ಎಲ್ಲಾ ರೀತಿಯ ಅಂಗಡಿ, ಕಂಪೆನಿ, ಕಚೇರಿಗಳು, ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೆ 2 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ…
-

ಮಂಜೇಶ್ವರ: ತಂದೆಯಿಂದಲೇ ಮಗಳ ಹತ್ಯೆ- ಆರೋಪಿಯ ಬಂಧನ
ಮಂಜೇಶ್ವರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬನೇ ತನ್ನ 18 ವರ್ಷದ ಮಗಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿಯೇ ಹತ್ಯೆ ಮಾಡಿರುವ ದಾರುಣ ಘಟನೆ ಸೋಮವಾರ ಸಂಜೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಹಿಲ್ ಟಾಪ್ ನಗರದಲ್ಲಿ ನಡೆದಿದೆ. ಮರಿಯಮತ್ ಜುಮೈರಾ (18) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ಆರೋಪಿ ತಂದೆ ಉಮರ್ ಪಾಷ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ದಾಳಿಯ ವೇಳೆ ಅಡ್ಡ ಬಂದ ಯುವತಿಯ ದೊಡ್ಡಪ್ಪ ಶೇಕುಂಞ ಎಂಬುವವರಿಗೂ ಆರೋಪಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಆರೋಪಿ ಉಮರ್…
-

ಉಡುಪಿ: ಬೀಚ್ ನಲ್ಲಿ ಕಳವು ಪ್ರಕರಣ- 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಉಡುಪಿಯ ಮಲ್ಪೆ ಬೀಚ್ ನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಳೆದ 11ವರ್ಷಗಳಿಂದ ತಲೆಮರೆಸಿಕೊಂಡ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಾದ ಆಶಾ @ ಸುಮಿತ್ರ ಕೃಷ್ಣ ಹಾಗೂ ರೇಖಾ ದಾನಪ್ಪ ಬಂಧಿತರು.ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸ ಮನೆ ಎಂಬಲ್ಲಿ ಇವರನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತರು ಮಲ್ಪೆ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇದೀಗ ಆರೋಪಿಗಳನ್ನು ಮಲ್ಪೆ ಠಾಣಾ ಸಿಬ್ಬಂದಿಗಳಾದ ಸುರೇಶ್ ಕುಮಾರ್, ವಿಶ್ವನಾಥ್ ಮತ್ತು ಮಹಿಳಾ ಸಿಬ್ಬಂದಿ ಸಿಂಚನ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











