Author: News Editor
-

RSS ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ : ಸಚಿವ ಪ್ರಿಯಾಂಕ್ ಖರ್ಗೆ ನಲಪಾಡ್ ಗೆ ಜಾಮೀನು ಮಂಜೂರು
ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡಗೆ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ಕೋಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ. ತಲಾ 10 ಸಾವಿರ ರೂಪಾಯಿ ವೈಯಕ್ತಿಕ ಶೂರಿಟಿ ವಿಧಿಸಿದೆ ಆರ್ ಎಸ್ ಎಸ್ ಕಾರ್ಯಕರ್ತ ಎ ತೇಜಸ್ ದೂರು ನೀಡಿದ್ದರು. 2025 ಅಕ್ಟೋಬರ್ 14ರಂದು ಆರ್ ಎಸ್ ಎಸ್ ಸದಸ್ಯರ ವಿರುದ್ಧ ಪ್ರಿಯಾಂಕ ಖರ್ಗೆ ಟ್ವೀಟ್…
-

1352 ರೌಡಿಶೀಟರ್ಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರ ದಿಢೀರ್ ದಾಳಿ..!!
ಬೆಂಗಳೂರು : ನಗರದಲ್ಲಿ ಪುಂಡಾಟಿಕೆ ಮತ್ತು ಅಪರಾಧ ಕೃತ್ಯಗಳಿಗೆ ಕಟಿಬದ್ಧವಾಗಿ ಕಡಿವಾಣ ಹಾಕಲು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಗರದಾದ್ಯಂತ ಒಟ್ಟು 1,352 ರೌಡಿಶೀಟರ್ಗಳ ಮನೆಗಳ ಮೇಲೆ ಪೊಲೀಸರು ಏಕಾಏಕಿ ದಿಢೀರ್ ದಾಳಿ ನಡೆಸಿದ್ದಾರೆ. ಸಿಸಿಬಿ (CCB) ತಂಡದ ಜೊತೆಗೆ ಬೆಂಗಳೂರು ಪಶ್ಚಿಮ, ಉತ್ತರ, ಈಶಾನ್ಯ ಹಾಗೂ ನೈರುತ್ಯ ವಿಭಾಗದ ಪೊಲೀಸರು ಜಂಟಿಯಾಗಿ ಈ ಬೃಹತ್ ಜಪ್ತಿ ಮತ್ತು ಪರಿಶೀಲನಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ತಡರಾತ್ರಿ ಹಾಗೂ ಮುಂಜಾನೆ 4 ಗಂಟೆಯಿಂದಲೇ ಆರಂಭವಾದ…
-

ಹನೂರು ಎನ್ಕೌಂಟರ್ ಪ್ರಕರಣ : ತನಿಖೆಗೆ CID ಎಂಟ್ರಿ, ತನಿಖೆ ಮತ್ತಷ್ಟು ಚುರುಕು
ಕಾವೇರಿ ವನ್ಯಧಾಮದಲ್ಲಿ ನಡೆದ ಬಹುಚರ್ಚಿತ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆಯಾದ ಬೆನ್ನಲ್ಲೇ, ಇದೀಗ ಪ್ರಕರಣದ ಸಮಗ್ರ ತನಿಖೆಗಾಗಿ ರಾಜ್ಯ ಸಿಐಡಿ (CID) ತಂಡ ಅಖಾಡಕ್ಕಿಳಿದಿದೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರವು ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿದ್ದು, ಅಧಿಕಾರಿಗಳ ತಂಡ ಈಗಾಗಲೇ ಚಾಮರಾಜನಗರ ಜಿಲ್ಲೆಯ ಸಂಬಂಧಿತ ಸ್ಥಳಗಳಿಗೆ ಭೇಟಿ ನೀಡಿ ಬೀಡುಬಿಟ್ಟಿದೆ. ತನಿಖೆ ಚುರುಕುಗೊಳಿಸಲು ಒಟ್ಟು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ರಚಿಸಲಾಗಿರುವ ಈ ನಾಲ್ಕು ತಂಡಗಳಿಗೆ…
-

ಮಂಗಳೂರು: 21 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ..!!
ಮಂಗಳೂರು: ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು 21 ವರ್ಷ ಪ್ರಾಯದೊಳಗಿನ ವ್ಯಕ್ತಿಗಳಿಗೆ ಮಾರಾಟ ಮಾಡುವಂತಿಲ್ಲ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ. ತಿಳಿಸಿದ್ದಾರೆ.ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ದ.ಕ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ 2024ಕ್ಕೆ ತಂದಿರುವ ತಿದ್ದುಪಡಿಯ ಅನ್ವಯ 21 ವರ್ಷ ಪ್ರಾಯದೊಳಗಿನವರಿಗೆ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಲಾಗಿದೆ. ಅದಲ್ಲದೆ ಸಿಗರೇಟ್…
-

ಮಲಗಿದ್ದ ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಹೃದಯಾಘಾತ ಎಂದು ಕಥೆ ಕಟ್ಟಿದ ಗಂಡ ಅರೆಸ್ಟ್
ಹೊನ್ನಾವರ: ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಂದು ಏನೂ ತಿಳಿಯದವನಂತೆ ‘ಹೃದಯಾಘಾತ’ದ ನಾಟಕವಾಡಿದ್ದ ಪತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಬಂಧಿಸಿದ ಘಟನೆ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ನಡೆದಿದೆ. ದೊಡ್ಡಗುಂಡ ಗ್ರಾಮದ ನಿವಾಸಿ ಗಣಪತಿ ಮಂಜುನಾಥ ನಾಯ್ಕ ಬಂಧಿತ ಆರೋಪಿ. ಮಂಗಲಾ ಗಣಪತಿ ನಾಯ್ಕ (27) ಕೊಲೆಯಾದವರು ಆರೋಪಿ ಗಣಪತಿ ಮದ್ಯ ಸೇವಿಸಿ ಮನೆಗೆ ಬಂದು ರಾತ್ರಿ ಪತ್ನಿ ಮಂಗಲಾ ಮಲಗಿದ್ದಾಗ ಆಕೆಯ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಪತ್ನಿ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಆರೋಪಿ…
-

ಮರಳು ಸಾಗಣೆ ಲಾರಿ ಚಾಲಕನಿಂದ 30 ಸಾವಿರ ಲಂಚ ಸ್ವೀಕಾರ : ಮೂವರು ಹೆಡ್ ಕಾನ್ಸ್ಟೇಬಲ್, ಓರ್ವ ಹೋಂ ಗಾರ್ಡ್ ಲೋಕಾಯುಕ್ತ ಬಲೆಗೆ
ಮರಳು ಸಾಗಣೆ ಲಾರಿ ಚಾಲಕನಿಂದ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಮೂವರು ಹೆಡ್ ಕಾನ್ಸ್ಟೇಬಲ್ ಹಾಗೂ ಓರ್ವ ಹೋಂಗಾರ್ಡನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಕೊಪ್ಪಳದ ಲಾರಿ ಚಾಲಕನ ಹನುಮಂತನಿಂದ ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ. 30 ಸಾವಿರ ಲಂಚ ಪಡೆದಿರುವ ಆರೋಪ ಕೇಳಿ ಬಂದಿದ್ದು ಹನುಮಂತ ಲೋಕಾಯುಕ್ತ ಪೊಲೀಸ್ ರಿಗೆ ಈ ಕುರಿತು ದೂರು ನೀಡಿದ್ದ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಲಾರಿ ಬಿಡಲು ಲಂಚ…
-

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ ಆರೋಪ-ಪರಾರಿಯಾಗಲು ಯತ್ನಿಸಿ ಆರೋಪಿ ಅರೆಸ್ಟ್..!!
ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್ (21) ಬಂಧಿತ ಆರೋಪಿ. 2025ರ ಸೆಪ್ಟೆಂಬರ್ನಿಂದ ನವೆಂಬರ್ ಅವಧಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ಈ…
-

ಮಂಗಳೂರು ನಗರದ ಹೃದಯ ಭಾಗದ ಹಂಪನಕಟ್ಟೆಯಲ್ಲಿ ಬಿಸಿಲು ಮಳೆ ಎನ್ನದೆ ಸಂಚಾರಿ ಪೊಲೀಸರಾಗಿ ಕರ್ತವ್ಯನಿಷ್ಠೆ ಪಾಲಿಸುವ ಗೃಹ ರಕ್ಷಕ ದಳದ ಅಬ್ದುಲ್ ರೌಪ್- ಇವರ ಕಾರ್ಯವೈಖರಿಗೆ ಸಾರ್ವಜನಿಕರೆ ಪಿಧಾ..!!
ಮಂಗಳೂರು: ನಗರದ ಪ್ರಮುಖ ವಾಣಿಜ್ಯ ಹಾಗೂ ಸಂಚಾರ ಕೇಂದ್ರವಾಗಿರುವ ಹಂಪನಕಟ್ಟೆಯಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರ ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಿ ಸಂಚಾರವನ್ನು ಸುಗಮವಾಗಿ ನಿರ್ವಹಿಸುವುದು ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಗೃಹ ರಕ್ಷಕ ದಳದ ಸಿಬ್ಬಂದಿ ಅಬ್ದುಲ್ ರೌಪ್ ಅವರು ಸಲ್ಲಿಸುತ್ತಿರುವ ಸೇವೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಹಂಪನಕಟ್ಟೆಯಂತಹ ಬ್ಯುಸಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಅಬ್ದುಲ್ ರೌಪ್ ಅವರು ಬಿಸಿಲು, ಮಳೆ ಎನ್ನದೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ವಾಹನಗಳ…
-

ಕಡಬದಲ್ಲಿ ಮನೆಯಿಂದ 84,800 ರೂ. ನಗದು ಕಳ್ಳತನ: ಪ್ರಕರಣ ದಾಖಲು
ಕಡಬ: ಮನೆಯಲ್ಲಿ ಮರದ ಬಾಕ್ಸ್ನಲ್ಲಿಟ್ಟಿದ್ದ ನಗದು ಕಳ್ಳತನವಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಗ್ರಾಮದ ಅಡ್ಡಗದ್ದೆ ನಿವಾಸಿ ತಮನ್ನಾ ಜಬೀನ್(43) ಎಂಬವರು ತಮ್ಮ ಗಂಡ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದು, ಅವರು ತಮ್ಮ ರೂಮಿನಲ್ಲಿಟ್ಟಿದ್ದ ಮರದ ಬಾಕ್ಸ್ನಲ್ಲಿ ಹಣ ಸಂಗ್ರಹಿಸಿಟ್ಟಿದ್ದರು. ಆ.18 ರಂದು ಕಾರ್ಯಕ್ರಮವೊಂದರ ನಿಮಿತ್ತ ತಮನ್ನಾ ಜಬೀನ್ಅವರು ಗಂಡ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿ, ಅದೇ ದಿನ ಮನೆಗೆ ಹಿಂತಿರುಗಿದ್ದಾರೆ. ಬಳಿಕ ಆ. 24 ರಂದು ಬಾಕ್ಸ್ನಲ್ಲಿದ್ದ ಹಣ…
-

ಉಡುಪಿ : 8 ವರ್ಷಗಳ ಹಿಂದೆ ಸತ್ತ ಮಗನ ಹೆಸರಲ್ಲಿ ₹5 ಲಕ್ಷ ವಂಚನೆ; ಕುಟುಂಬಕ್ಕೆ ಜೀವ ಬೆದರಿಕೆ, ಇಬ್ಬರು ಅರೆಸ್ಟ್
ಉಡುಪಿ : 8 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಯೊಬ್ಬರು ವಜ್ರದ ವ್ಯಾಪಾರದಲ್ಲಿ 5 ಲಕ್ಷ ರೂಪಾಯಿ ಬಾಕಿ ಇರಿಸಿದ್ದಾರೆ ಎಂದು ಸುಳ್ಳು ಹೇಳಿ, ಅವರ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಿವಳ್ಳಿ ಗ್ರಾಮದ ಕುಕ್ಕುಂಜೆ ನಿವಾಸಿ ಸಾಜೀದ್ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೈಯದ್ ಸೈಫ್ ಅಹಮ್ಮದ್ (40) ಬಂಧಿತ ಆರೋಪಿಗಳು. ದೂರುದಾರರಿಗೆ ಜುಲೈ 2, 2026ರಂದು ವಾಟ್ಸಾಪ್ ಕರೆಯೊಂದು ಬಂದಿದ್ದು, ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ, “ನಿಮ್ಮ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











