Author: News Editor
-

ಮಂಗಳೂರು: ಬೋರ್ಡ್ ಇಲ್ಲದ ಆಡಳಿತ ಸೌಧ – ವರ್ಷಗಳಿಂದ ವರ್ಗಾವಣೆಯಾಗದ ಅಧಿಕಾರಿಗಳು
ಮಂಗಳೂರಿನ ಆಡಳಿತ ಸೌಧದ ನಾಮಫಲಕದ ಬೋರ್ಡ್ ಮಾಯಾವಾಗಿದೆ. ನಗರದ ಕೇಂದ್ರದಲ್ಲಿರುವ ಈ ಆಡಳಿತ ಸೌಧಕ್ಕೆ ದಿನಕ್ಕೆ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಆದರೆ ಇಲ್ಲಿನ ನಿರ್ವಹಣೆ ಮಾತ್ರ ಕುಂಟುತ್ತಾ ಇದೆ. ಬೋರ್ಡ್ ಇರದ ನಗರದ ಆಡಳಿತ ಸೌಧದಲ್ಲಿ ಕೆಲ ಅಧಿಕಾರಿಗಳು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ. ಸುಮಾರು 6–7 ವರ್ಷಗಳಿಂದ ಡಿಟಿ (Deputy Tahsildar) ವರ್ಗಾವಣೆಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ತಹಸೀಲ್ದಾರ್ ಇದ್ದರೂ ಸಹ ಆಡಳಿತದ ಪ್ರಮುಖ ನಿರ್ವಹಣೆ…
-

ಮಂಗಳೂರು: ಮುಡಾದಲ್ಲಿ ಮಾಜಿ ಆಯುಕ್ತರ ವಾಹನ ಡ್ರೈವರ್ ಗಳು ದಲ್ಲಾಳಿಗಳಾಗಿ ಕಾರುಬಾರು
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ( ಮುಡಾ) ದ ಮಾಜಿ ಆಯುಕ್ತರ ವಾಹನ ಡ್ರೈವರ್ ಗಳು ಈಗ ಬಹುದೊಡ್ಡ ಬ್ರೋಕರ್ ಗಳಾಗಿ ಮುಡಾದ ಒಳಗೆ ತುಂಬಿದ್ದಾರೆ. ಈ ದಲ್ಲಾಳಿಗಳ ಹಾವಲಿಯಿಂದ ಇಲಾಖೆಯಲ್ಲಿ ನಿಯಮ ಬಾಹಿರ ಅತಿಹೆಚ್ಚು ವ್ಯವಹಾರ ದಲ್ಲಾಳಿ ಮತ್ತು ಅಧಿಕಾರಿಗಳ ನಡುವೆ ಲಂಚದಿಂದ ನಡೆಯುತ್ತಿದೆ. ಈ ವ್ಯವಸ್ಥೆಯಿಂದ ಸಾಮಾನ್ಯ ಜನರ ಕೆಲಸಗಳು ಮೂಲೆಗುಂಪುಯಾಗಿವೆ. ಕಂತೆ ಕಂತೆ ಹಣ ನೀಡುವವರ ಪೈಲ್ ಗಳು ಅತೀ ವೇಗವಾಗಿ ಮುಂದುವರಿದು ಆ ಕೆಲಸಗಳು ತಕ್ಷಣ ಮಾತ್ರದಲ್ಲಿ ನಡೆಯುತ್ತದೆ. ಇದರಿಂದಾಗಿ ಸಾಮಾನ್ಯ ಜನರು…
-

ಕಾರ್ಕಳದಲ್ಲಿ ಜಮೀನ್ದಾರಿಕೆ ಜೀವಂತ..!! ಬಡ ಕುಟುಂಬಗಳ ಮೇಲೆ ದೌರ್ಜನ್ಯ
ಕಾರ್ಕಳ: ಇಲ್ಲಿಯ ಕುಕ್ಕುಂದೂರು ಪರಿಸರದ ಎರಡು ಬಡ ಕುಟುಂಬಗಳಿಗೆ ಸ್ಥಳೀಯ ಜಮೀನುದಾರರೊಬ್ಬರು ಹಕ್ಕುಪತ್ರ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಅಡ್ಡಿ ಪಡಿಸುತ್ತಿರುವ ಆರೋಪ ಕೇಳಿ ಬಂದಿದೆ. ಕಾರ್ಕಳದಲ್ಲಿ ಈ ಕುಟುಂಬ ಇತ್ತೀಚಿಗೆ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. ಒಂದು ಕುಟುಂಬ ಕುಲಾಲ ಸಮುದಾಯದ ಗುಲಾಬಿ ಮೂಲ್ಯರದ್ದು ಹಾಗೂ ಅದರ ಜೊತೆಗೆ ವಿಶ್ವಕರ್ಮ ಸಮುದಾಯದ ಜಯಂತಿ ಆಚಾರ್ಯರಿಗೆ ಅನ್ಯಾಯ ಆಗಿರುವ ಬಗ್ಗೆ ಆರೋಪಿಸಲಾಗಿದೆ. ಈ ಕುಟುಂಬಗಳಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕುತ್ತಿರುವುದಲ್ಲದೆ ಕೃಷಿಗಳನ್ನು ನಾಶಪಡಿಸಿ ವಿನಃಕಾರಣ…
-

ಬೆಳ್ತಂಗಡಿ: ಅಕ್ರಮವಾಗಿ ಶೇಖರಿಸಿದ 4,175 ಲೀಟರ್ ಡೀಸೆಲ್ ಪತ್ತೆ- ಪ್ರಕರಣ ದಾಖಲು
ಬೆಳ್ತಂಗಡಿ: ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 4,175 ಲೀಟರ್ ಡೀಸೆಲ್ ಅನ್ನು ಪೊಲೀಸರು ಪತ್ತೆಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ನಡೆದಿದೆ. ಮಾರ್ಚ್ 9ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ. ಅವರಿಗೆ ಬಂದ ಮಾಹಿತಿಯ ಮೇರೆಗೆ, ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳ ತಂಡ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್ ಪರಿಶೀಲನೆ ನಡೆಸಿದಾಗ ಸುಮಾರು 200 ಲೀಟರ್ ಸಾಮರ್ಥ್ಯದ 20…
-

ಉಡುಪಿ: ಮಹಿಳೆಯ ಬರ್ಬರ ಹತ್ಯೆ- ಆರೋಪಿಗಳಿಬ್ಬರ ಬಂಧನ
ಉಡುಪಿ: ನಗರದ ಹೊರವಲಯದ ದೊಂದೂರುಕಟ್ಟೆಯ ಮಣಿಪುರ ಗ್ರಾಮದ ಅರಬಿ ಕನರಾಡಿ ಎಂಬಲ್ಲಿ ಮಹಿಳೆಯೊಬ್ಬರನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ವನಜಾ ಪೂಜಾರ್ತಿ (60) ಕೊಲೆಯಾದ ಮಹಿಳೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಗಳಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಲೇರಿಯನ್ ಮೆಂಡೊನ್ಸಾ ಹಾಗೂ ಪ್ರವೀಣ್ ಮೆಂಡೊನ್ಸಾ ಅವರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ವನಜಾ ಪೂಜಾರ್ತಿಯವರೊಂದಿಗೆ ಆಗಾಗ್ಗೆ ಇವರಿಬ್ಬರು ಮದ್ಯಪಾನ ಮಾಡುತ್ತಿದ್ದರು. ಮಾರ್ಚ್ 9 ರಂದು ಸಂಜೆ 5 ಗಂಟೆಯಿಂದ ಮಾರ್ಚ್ 10…
-

ಬಂಟ್ವಾಳ: ಬಸ್‌ನಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನ ಬಂಧನ- 20 ಲಕ್ಷ ರೂ. ಮೌಲ್ಯದ ಸ್ವತ್ತು ವಶ
ಬಂಟ್ವಾಳ: ಚಲಿಸುವ ಬಸ್‌ನಲ್ಲಿ ಬ್ಯಾಗ್ ಒಳಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಯನ್ನು ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ನಿವಾಸಿ ಸಮದ್ ಖಾನ್ (37) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 174 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ನವೆಂಬರ್ 19, 2025 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳವು ನಡೆದಿತ್ತು. ಪ್ರಯಾಣಿಕರೊಬ್ಬರು…
-

ಇನ್ಮುಂದೆ ಪೊಲೀಸ್ ಅಧಿಕಾರಿಗಳು MLA, MLC, MP ನಂಬರ್ ಹೊಂದಿರೋದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ
ರಾಜ್ಯದ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಇನ್ಮುಂದೆ ಜನಪ್ರತಿನಿಧಿಗಳ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರು (DGP) ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯು ಈ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಇದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ: ಸುತ್ತೋಲೆಯಲ್ಲಿ ಏನಿದೆ ? ಸಂಪರ್ಕ ಸಂಖ್ಯೆ ಇಟ್ಟುಕೊಳ್ಳುವುದು ಕಡ್ಡಾಯ: ಎಲ್ಲಾ ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಿಧಾನಸಭಾ ಸದಸ್ಯರು (MLA), ವಿಧಾನ ಪರಿಷತ್ ಸದಸ್ಯರು (MLC),…
-

ಕಾರ್ಕಳ: ಸಾಕ್ಷಿದಾರನ ಪತ್ನಿಗೆ ತಲವಾರಿನಿಂದ ಹಲ್ಲೆ ಯತ್ನ..!! ಕೊಲ್ಲುವುದಾಗಿ ಜೀವ ಬೆದರಿಕೆ
ಕಾರ್ಕಳ : ನ್ಯಾಯಾಲಯದಲ್ಲಿ ಪತಿ ಸಾಕ್ಷಿ ಹೇಳಿದ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿ, ಪತಿ ಪತ್ನಿ ಇಬ್ಬರನ್ನೂ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದ ಬೈಲೂರಿನಲ್ಲಿ ಮಾ.6 ರಂದು ನಡೆದಿದೆ. ಗಣೇಶ್ ಪೂಜಾರಿ ಎಂಬಾತ ಮಾ.6 ರಂದು ಕಾರಿನಲ್ಲಿ ಬಂದು ಬೈಲೂರು ಪಂಚಾಯತ್ ಮುಂಭಾಗದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪುಷ್ಪಲತಾ ಎಂಬವರಿಗೆ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ಪುಷ್ಪಲತಾ ಮತ್ತು ಅವರ ಪತಿ ರಾಜೇಂದ್ರ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ತನ್ನ ವಿರುದ್ಧ…
-

2 ವರ್ಷದ ಮಗುವಿನ ಕತ್ತು ಹಿಸುಕಿ, ದಂಪತಿ ಆತ್ಮ*ಹ*ತ್ಯೆ..!! ಅದೃಷ್ಟವಶಾತ್ ಮಗು ಬಚಾವ್
ರಾಜ್ಯದಲ್ಲಿ ಇಂದು ಘೋರವಾದ ಘಟನೆಯ ಒಂದು ಸಂಭವಿಸಿದ್ದು, ಎರಡು ವರ್ಷದ ಮಗುವಿನ ಕತ್ತು ಹಿಸುಕಿ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ , ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಜಯನಗರದ ಮನೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮಗು ಬದುಕುಳಿದಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ವರ್ಷದ ಹಿಂದೆ ದರ್ಶನ್ ಮತ್ತು ದಿವ್ಯಶ್ರೀ ಎಂಬುವವರು ವಿವಾಹವಾಗಿದ್ದರು. ಘಟನೆ ಕುರಿತು ಕೆಆರ್ ಪೇಟೆ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಂಪತಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕೆಆರ್…
-

ಉಡುಪಿ ಜಿಲ್ಲಾ PWD ಅಧಿಕಾರಿಗಳ ಅಮಾನವೀಯ ಅಟ್ಟಹಾಸ – ಬಡವರ ಹೊಟ್ಟೆಯ ಮೇಲೆ ಬರೆ ಎಳೆದು ಭಾರಿ ಸದ್ದು ಮಾಡುತ್ತಿದೆ ಅಧಿಕಾರಿಗಳ ದೌರ್ಜನ್ಯ
ಬ್ರಹ್ಮಾವರ/ಉಡುಪಿ: ಉಡುಪಿ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳು ಒಂದೆಡೆ ಕೋಟಿಗಟ್ಟಲೆ ಹಗರಣಗಳಲ್ಲಿ ಮುಳುಗಿದ್ದರೆ, ಇನ್ನೊಂದೆಡೆ ಬಡ ಶ್ರಮಿಕರ ಮೇಲೆ ತಮ್ಮ ಅಧಿಕಾರದ ದರ್ಪ ತೋರುವ ಮೂಲಕ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಈ ಅಧಿಕಾರಿಗಳು ನಡೆಸಿದ ಅಮಾನವೀಯ ಕೃತ್ಯ ಈಗ ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸುತ್ತಿದೆ. PWD ಅಧಿಕಾರಿಗಳ ಅಟ್ಟಹಾಸ: ಬಡವರ ಹೊಟ್ಟೆಗೆ ಮಣ್ಣು!ಚಾಂತಾರು ವ್ಯಾಪ್ತಿಯಲ್ಲಿ ರಸ್ತೆಯಿಂದ ಬದಿಗೆ, ಮರದ ಅಡಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಅಡ್ಡಿಯಾಗದಂತೆ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











