ಮಂಗಳೂರಿನಲ್ಲಿ ಮತ್ತೊಂದು ಬೃಹತ್ ಹಗರಣದ ಸುಳಿವು ಸಿಕ್ಕಿದೆ. ಮೂಡ (MUDA) ಸಂಬಂಧಿತ ಈ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಈ ಸಂಬಂಧವಾಗಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ.
ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮುಖದಮೆ ದಾಖಲಿಸುವಂತೆ ಒತ್ತಾಯ ಮಾಡಲಾಗಿದೆ.
ಇದರಲ್ಲಿ ಅತ್ಯಂತ ಗಂಭೀರ ಆರೋಪವೇನಂದರೆ ಓಲ್ಡ್ ಏಜ್ ಹೋಂ ನಿರ್ಮಾಣಕ್ಕಾಗಿ ಮಾತ್ರ ಭೂ ಪರಿವರ್ತನೆ ಅನುಮತಿ ನೀಡಲಾಗಿತ್ತು.
ಆದರೆ, ನಿಯಮಾವಳಿಗಳ ಪ್ರಕಾರ ಈ ಜಾಗವನ್ನು (old age home) ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಳಸಬೇಕಾಗಿತ್ತು.
ಹಾಗಿದ್ದರೂ… ನಿಯಮಗಳನ್ನು ಮೀರಿ ಬೇರೆ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಹಗರಣ ಹೊರಬಂದಂತೆ,
ಹಲವಾರು ಬಾರಿ ಕನ್ವರ್ಷನ್ ಎಂಬ ಮಾತುಗಳು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿವೆ.
