ಮಂಗಳೂರು: ನಗರದ ಕಸಬಾ ಬಜಾರ್ ಟಿ.ಎಸ್ ನಂಬ್ರ 4-ಎ(ಅಂಶ) ಆರ್ ಎಸ್ ನಂಬ್ರ 1689/ಎ ಇದರ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪತ್ರ 2004-05 ರಂದು ನೀಡಿರುತ್ತಾರೆ. ಇದೇ ಕಟ್ಟಡಕ್ಕೆ ಮಹಾನಗರ ಪಾಲಿಕೆವು ಕಟ್ಟಡ ಪ್ರವೇಶ ಪತ್ರವನ್ನು 2025 ರಂದು ನೀಡಿರುತ್ತದೆ.

ಸುಮಾರು 20 ವರ್ಷಗಳ ನಂತರ ಕಾನೂನು ಬಾಹಿರವಾಗಿ ಕಟ್ಟಡ ಪ್ರವೇಶ ಪತ್ರ ನೀಡಿದ್ದು ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದಲ್ಲಿ ಇದು ಒಂದೇ ಅಲ್ಲಾ… ನಗರದ ಜೆಪ್ಪು, ಬಂದರ್, ಉರ್ವಾ ಸುರತ್ಕಲ್ ಸೇರಿದಂತೆ ಅನೇಕ ಕಟ್ಟಡಗಳು ಕಾನೂನಿನ ಪರಿದಿಗಿಂತ ಹೊರತು ಇದೆ. ಇದಕ್ಕೂ ಇನ್ನೂ ಕಟ್ಟಡ ಕಟ್ಟಡ ಪ್ರವೇಶ ಪತ್ರ ನೀಡುವಾರೆ..?? ಎಂದು ಕಾದು ನೋಡಬೇಕಾಗಿದೆ.
ಕಟ್ಟಡ ನಿರ್ಮಾಣಕ್ಕೆ ಸಮಗ್ರ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಿಗೆ, 8 ದಿನದೊಳಗೆ ಪ್ರವೇಶ ಪತ್ರ ಮತ್ತು 7 ದಿನದೊಳಗೆ ಸ್ಥಳ ಪರಿಶೀಲನೆ ನಡೆಸಬೇಕು ಎಂಬ ಆದೇಶ ಇದೆ. ಈ ಆದೇಶವನ್ನು ಅಧಿಕಾರಿಗಳು ಗಾಳಿಗೆ ತೋರಿ ಅಕ್ರಮವೆಸಗಿದ್ದಾರೆ.
