,

ಯುದ್ಧದ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪ : 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ

ಅಬುಧಾಬಿ: ಅಮೆರಿಕ-ಇಸ್ರೇಲ್‌, ಇರಾನ್‌ ನಡುವಿನ ಯುದ್ಧದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 19 ಭಾರತೀಯರು ಸೇರಿದಂತೆ 35 ಮಂದಿಯ ಬಂಧನಕ್ಕೆ ಯುಎಇ ಆದೇಶ ಹೊರಡಿಸಿದೆ.‌ ಪ್ರಾದೇಶಿಕ ಉದ್ವಿಗ್ನತೆಗೆ ಸಂಬಂಧಿಸಿದ ದೃಶ್ಯಾವಳಿಗಳು ಮತ್ತು ನಿರೂಪಣೆಗಳನ್ನು ಪ್ರಸಾರ ಮಾಡಲು ಆರೋಪಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಆರೋಪಿಗಳು ತ್ವರಿತ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ. ಜನರ ದಾರಿ ತಪ್ಪಿಸುವ, ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡಿದ ಆರೋಪ…

ಅಬುಧಾಬಿ: ಅಮೆರಿಕ-ಇಸ್ರೇಲ್‌, ಇರಾನ್‌ ನಡುವಿನ ಯುದ್ಧದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 19 ಭಾರತೀಯರು ಸೇರಿದಂತೆ 35 ಮಂದಿಯ ಬಂಧನಕ್ಕೆ ಯುಎಇ ಆದೇಶ ಹೊರಡಿಸಿದೆ.‌ ಪ್ರಾದೇಶಿಕ ಉದ್ವಿಗ್ನತೆಗೆ ಸಂಬಂಧಿಸಿದ ದೃಶ್ಯಾವಳಿಗಳು ಮತ್ತು ನಿರೂಪಣೆಗಳನ್ನು ಪ್ರಸಾರ ಮಾಡಲು ಆರೋಪಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಆರೋಪಿಗಳು ತ್ವರಿತ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.

ಜನರ ದಾರಿ ತಪ್ಪಿಸುವ, ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡಿದ ಆರೋಪ ಇವರ ಮೇಲಿದೆ. ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳ ಮೇಲೆ ಮೇಲ್ವಿಚಾರಣೆ ಮಾಡುವ ಮೂಲಕ ಈ ಕ್ರಮಕೈಗೊಳ್ಳಲಾಗಿದೆ ಎಂದು ಯುಎಇಯ ಅಟಾರ್ನಿ ಜನರಲ್ ಡಾ.ಹಮದ್ ಸೈಫ್ ಅಲ್ ಶಮ್ಸ್ ಹೇಳಿದ್ದಾರೆ. ಮೂರು ಗುಂಪುಗಳಲ್ಲಿ ಆರೋಪಿಗಳನ್ನು ಪಟ್ಟಿ ಮಾಡಲಾಗಿದೆ. ಮೊದಲ ಗುಂಪಿನಲ್ಲಿ ಐವರು ಭಾರತೀಯರು, ಒಬ್ಬ ಪಾಕಿಸ್ತಾನಿ, ಒಬ್ಬ ನೇಪಾಳಿ, ಇಬ್ಬರು ಫಿಲಿಪಿನೋಗಳು ಮತ್ತು ಒಬ್ಬ ಈಜಿಪ್ಟಿನ ವ್ಯಕ್ತಿ ಸೇರಿದ್ದಾರೆ. ಎರಡನೇ ಗುಂಪಿನಲ್ಲಿ ಐವರು ಭಾರತೀಯರು ಮತ್ತು ನೇಪಾಳ, ಬಾಂಗ್ಲಾದೇಶದ ತಲಾ ಇಬ್ಬರು ಆರೋಪಿಗಳನ್ನು ಹೆಸರಿಸಲಾಗಿದೆ. ಮೂರನೇ ಗುಂಪಿನಲ್ಲಿ ಐವರು ಭಾರತೀಯರು, ಒಬ್ಬ ಪಾಕಿಸ್ತಾನಿಯನ್ನು ಪಟ್ಟಿ ಮಾಡಲಾಗಿದೆ. ಇದೇ ರೀತಿಯ ಅಪರಾಧಗಳಿಗಾಗಿ ಮತ್ತಿಬ್ಬರು ಭಾರತೀಯರು ಸಹ ಆರೋಪಗಳನ್ನು ಎದುರಿಸುತ್ತಿದ್ದಾರೆ.

10 ಆರೋಪಿಗಳನ್ನು ಶನಿವಾರ ವಿಚಾರಣೆ ನಡೆಸಿದ ನಂತರ ಸಾರ್ವಜನಿಕ ವಿಚಾರಣೆ ಪ್ರಾರಂಭವಾಯಿತು. ಅವರನ್ನು ಕಸ್ಟಡಿಯಲ್ಲಿಡಲು ಆದೇಶಿಸಲಾಗಿದೆ. ಇವರು ಯುಎಇಯ ವಿವಿಧ ಪ್ರದೇಶಗಳಲ್ಲಿ ಸ್ಫೋಟಗಳು, ಪ್ರಮುಖ ಕಟ್ಟಡಗಳ ಮೇಲೆ ದಾಳಿಗಳನ್ನು ಸೂಚಿಸುವ ಕೃತಕ ಬುದ್ಧಿಮತ್ತೆ ರಚಿತ ದೃಶ್ಯಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಅಟಾರ್ನಿ ಜನರಲ್ ಅಲ್ ಶಮ್ಸ್ ತಿಳಿಸಿದ್ದಾರೆ.

ಯುಎಇಯಲ್ಲಿ ಇಂತಹ ಕೃತ್ಯಗಳಿಗೆ ಕಾನೂನಿನಡಿಯಲ್ಲಿ ಕನಿಷ್ಠ 1 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 1,00,000 ದಿರ್ಹಮ್‌ಗಳ (25.19 ಲಕ್ಷ ರೂಪಾಯಿ) ದಂಡ ವಿಧಿಸಲಾಗುವುದು.

ಹೋಟೆಲ್‌ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿ ಹೋಟೆಲ್​​ ಉದ್ಯಮ ಬಹಳ ಸಮಸ್ಯೆಗೆ ಸಿಲುಕಿದೆ. ಹಲವೆಡೆ ಹೋಟೆಲ್‌ ರೆಸ್ಟೋರೆಂಟ್​​ಗಳು ಬಂದ್​​ ಆಗಿದ್ದರೆ, ಇನ್ನು ಕೆಲ ಹೋಟೆಲ್​​ಗಳು ಮೆನುವಿನಿಲ್ಲಿ ಭಾರಿ ಕಡಿತ ಮಾಡಿ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ. ಇದೆಲ್ಲದರ ಪರಿಣಾಮ ಬೆಂಗಳೂರೊಂದರಲ್ಲೇ ಕಳೆದ 5 ದಿನಗಳಲ್ಲಿ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದ್ದು, ಹೋಟೆಲ್​​ಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೋಟೆಲ್‌ಗಳು ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ. ಹೋಟೆಲ್‌ಗಳು ಮುಚ್ಚಿರುವುದರಿಂದ ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ.

ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್​ಗಳಿದ್ದು, ಈ ಪೈಕಿ 4,500 ಹೋಟೆಲ್​​ಗಳು ರಿಜಿಸ್ಟರ್​​ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹೀಗಾಗಿ ಟ್ಯಾಕ್ಸ್ ವಿನಾಯತಿ ನೀಡುವಂತೆ ಹೋಟೆಲ್ ಮಾಲೀಕರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಾಪರ್ಟಿ ತೆರಿಗೆ ಸೇರಿ ಎಲ್ಲ ವಿಧದ ಟ್ಯಾಕ್ಸ್​​ನಿಂದ ಶೇ.20ರಿಂದ 25ರಷ್ಟು ವಿನಾಯಿತಿ ನೀಡುವಂತೆ ಕೋರಲಾಗಿದೆ.

ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿದ್ದು ಹೋಳಿಗೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಸಿಲಿಂಡರ್​​ಗಳ ಕೊರತೆ ಇವುಗಳ ತಯಾರಿ ಮೇಲೆಯೂ ಪ್ರಭಾವ ಬೀರಿದೆ. ವೆರೈಟಿ ಹೋಳಿಗೆ ತಯಾರಿಸುವ ಬಹುತೇಕ ಹೋಳಿಗೆ ಮನೆಗಳು ಬಂದ್​​ ಆಗಿದ್ದು, ಸಂಪಿಗೆ ರಸ್ತೆಯ ಹಳ್ಳಿಮನೆ ಹೋಟೆಲ್ ಹಬ್ಬದ ಹೋಳಿಗೆ ತಯಾರಿಸಲು ಸೌದೆ ಒಲೆ ಮೊರೆ ಹೋಗಿರುವ ದೃಶ್ಯ ಕಂಡುಬಂದಿವೆ.

ಕೆಲ ಹೋಟೆಲ್‌ಗಳು ಸೌದೆ ಒಲೆಗಳನ್ನು ಬಳಸಿಕೊಂಡು ಸೀಮಿತ ಮೆನುಗಳೊಂದಿಗೆ ಆಹಾರ ತಯಾರಿಸುತ್ತಿದ್ದರೆ, ಇನ್ನೂ ಕೆಲವು ಸಂಪೂರ್ಣವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮಿಗಳು ಕಂಗಾಲಾಗಿದ್ದಾರೆ. ಹಣ ಕೊಟ್ಟರೂ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗೃಹಬಳಕೆ ಸಿಲಿಂಡರ್ ಬಳಸುವುದಕ್ಕೂ ನಿಯಮಗಳ ಅಡ್ಡಿಯಿದೆ. ಇನ್ನೊಂದೆಡೆ ಸೌದೆ ಒಲೆಗಳನ್ನು ಬಳಸಲು ಬೇಕಾದಷ್ಟು ಜಾಗವೂ ಲಭ್ಯವಿಲ್ಲದ ಕಾರಣ ಹೋಟೆಲ್ ಮಾಲೀಕರು ದಿಕ್ಕೇ ತೋಚದ ಸ್ಥಿತಿಗೆ ತಲುಪಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed