Category: ಬ್ರೇಕಿಂಗ್ ನ್ಯೂಸ್
-

ಮಂಗಳೂರು: ಪೊಲೀಸರ ಕೈಯಿಂದ ಕೈಕೋಳದೊಂದಿಗೆ ತಪ್ಪಿಸಿ ಪರಾರಿಯಾದ ಖತರ್ನಾಕ್ ಸರಗಳ್ಳ..!!
ಮಂಗಳೂರು: ಬಂಧಿಸಿ ಠಾಣೆಗೆ ಕರೆತರುತ್ತಿದ್ದ ವೇಳೆ ಐವರು ಪೊಲೀಸರ ಕಣ್ಣಿಗೆ ಮಣ್ಣು ಎರಚಿ, ಕೈಕೋಳ (ಹ್ಯಾಂಡ್‌ಕಫ್) ಸಮೇತ ಖತರ್ನಾಕ್ ಸರಗಳ್ಳನೊಬ್ಬ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ಮಂಗಳೂರಿನ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಪರಾರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಈತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಮಂಗಳೂರಿನ ಜಪ್ಪಿನಮೊಗರು ಬಳಿ ಇತ್ತೀಚೆಗೆ ನಡೆದ ಸರಗಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಪಾಂಡೇಶ್ವರ ಠಾಣಾ ಪೊಲೀಸರಿಗೆ ಅಂತರರಾಜ್ಯ ಕಳ್ಳರ ಗ್ಯಾಂಗ್ ಕುರಿತು ಸುಳಿವು…
-

8 ತಿಂಗಳ ಮಗು ಎಲ್ಇಡಿ ಬಲ್ಬ್ ನುಂಗಿ ಆಸ್ಪತ್ರೆಗೆ ದಾಖಲು; ತಕ್ಷಣದ ಚಿಕಿತ್ಸೆಯಿಂದ ಜೀವ ಉಳಿಸಿದ ವೈದ್ಯರು
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಮಗುವೊಂದು ಆಟವಾಡುತ್ತಾ ಎಲ್ಇಡಿ ಬಲ್ಬ್ ನುಂಗಿದ ಘಟನೆ ನಡೆದಿದೆ. ಸಕಾಲಿಕ ಚಿಕಿತ್ಸೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಎಲ್ಇಡಿ ಬಲ್ಬ್ ನುಂಗಿದ ಬಳಿಕ ಮಗು ವಿಪರೀತವಾಗಿ ಅಳಲಾರಂಭಿಸಿದ್ದು, ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮೊದಲು ಎಕ್ಸ್ ರೇ ಮಾಡಿದರು. ಗಂಟಲಿನಲ್ಲಿ ಲೋಹದ ವಸ್ತುವೊಂದು ಇರುವುದು ಪತ್ತೆಯಾಗಿದ್ದು, ಲ್ಯಾರಿಂಗೋಸ್ಕೋಪ್ ಪರೀಕ್ಷೆ ನಡೆಸಿದಾಗ ಅದು ಎಲ್ಇಡಿ ಬಲ್ಬ್ ಎಂದು ದೃಢಪಟ್ಟಿತು. ಇಎನ್‌ಟಿ ತಜ್ಞೆ ಡಾ. ರಾಜಶ್ರೀ…
-

ಕರ್ತವ್ಯಲೋಪದ ಹಿನ್ನಲೆಯಲ್ಲಿ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..!!
ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆದೇಶ ಹೊರಡಿಸಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಸಾಗರ್ ಆಸ್ಕಿ, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ರಂಗಧಾಮಯ್ಯ ಹಾಗೂ ಕಾನ್ಸ್‌ಟೇಬಲ್ ಚಂದ್ರಶೇಖರ್ ಅಮಾನತುಗೊಂಡ ದುರದೃಷ್ಟಕರ ಸಿಬ್ಬಂದಿಯಾಗಿದ್ದಾರೆ. ಕರ್ತವ್ಯದಲ್ಲಿ ಬೇಜವಾಬ್ದಾರಿತನ ಹಾಗೂ ಇಲಾಖೆಯ ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ಇವರ ವಿರುದ್ಧ ಈ ಶಿಸ್ತುಕ್ರಮ ಜರುಗಿಸಲಾಗಿದೆ. ನಿಯಮ ಉಲ್ಲಂಘಿಸಿ ಅಸ್ಸಾಂಗೆ ತೆರಳಿದ್ದ…
-

ಕುಟುಂಬ ಕೈಬಿಟ್ಟ ಹಿಂದೂ ಸಹೋದರನಿಗೆ ಮುಸ್ಲಿಂ ಲೀಗ್ ನಾಯಕಿಯಿಂದ ಅಂತ್ಯಕ್ರಿಯೆ
ಕಾಸರಗೋಡು : ರಕ್ತಸಂಬಂಧಗಳು ಮತ್ತು ಸಿದ್ಧಾಂತಗಳ ಮಿತಿಗಳನ್ನು ಮೀರಿ ಮಾನವೀಯತೆ ಧರ್ಮವೇ ಶ್ರೇಷ್ಠ ಎಂದು ಸಾರುವ ಅಪರೂಪದ ಘಟನೆಯೊಂದು ಜಿಲ್ಲೆಯ ಮಂಜೇಶ್ವರದಲ್ಲಿ ನಡೆದಿದೆ. ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಸಾವಿನಲ್ಲೂ ಸ್ವಂತ ಕುಟುಂಬಸ್ಥರು ಕೈಬಿಟ್ಟಾಗ, ಮುಸ್ಲಿಂ ಲೀಗ್‌ನ ಮಹಿಳಾ ನಾಯಕಿಯೊಬ್ಬರು ಮಗಳ ಸ್ಥಾನದಲ್ಲಿ ನಿಂತು ಹಿಂದೂ ಪದ್ಧತಿಯ ಪ್ರಕಾರವೇ ಚಿತೆಗೆ ಕೊಳ್ಳಿ ಇಟ್ಟು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಮಂಜೇಶ್ವರ ತಾಲ್ಲೂಕಿನ ಮೀಂಜ ಗ್ರಾಮ ಪಂಚಾಯತ್‌ನ ಚಿಗುರುಪಾದೆ ಮೂಲದ ದಿನಗೂಲಿ ಕಾರ್ಮಿಕ ನಾರಾಯಣನ್ ತೊಟ್ಟಥೋಡಿ (64)…
-

ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ: 19 ವರ್ಷದ ಯುವಕನ ಬಂಧನ
ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 19 ವರ್ಷದ ಯುವಕನೊಬ್ಬನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬ್ರಹ್ಮಾವರದ ಆಕಾಶವಾಣಿ ಸಮೀಪದ ಸ್ವರ್ಣ ರೆಸಿಡೆನ್ಸಿಯಲ್ಲಿ ವಾಸಿಸುತ್ತಿದ್ದ, ಮೂಲತಃ ಶಿರೂರಿನ ಮುಸ್ಲಿಂ ಮೊಹಲ್ಲಾದ ಜೆ.ಎಂ. ಕ್ರಾಸ್ ರೋಡ್ ನಿವಾಸಿ ಸೈಯದ್ ಮೊಹಮ್ಮದ್ ಮೆಹರಾಜ್ (19) ಎಂದು ಗುರುತಿಸಲಾಗಿದೆ.ಉಡುಪಿ ಉಪ ವಿಭಾಗದ ಪೊಲೀಸ್ ಅಧಿಕಾರಿ ಬೆಳ್ಳಿಯಪ್ಪ ಕೆ.ಯು. ಮತ್ತು ಮಲ್ಪೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದ ಪೊಲೀಸ್…
-

ಮಂಗಳೂರು: ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪಿ ಸಿಸಿಬಿ ಪೊಲೀಸರ ಬಲೆಗೆ, ಎಂಡಿಎಂಎ ವಶಕ್ಕೆ
ಮಂಗಳೂರು: ನಗರದಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪಿ ಓರ್ವನನ್ನು ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು , ಸುರತ್ಕಲ್ ನಿವಾಸಿಯಾಗಿದ್ದು, ಹಾಲಿ ವಾಸ , ಕುಳಾಯಿಗುಡ್ಡೆ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು( 26 ) ಎಂದು ಗುರುತಿಸಲಾಗಿದೆ. ನಿಷೇಧಿತ ಮಾದಕವಸ್ತು ಎಂಡಿಎಂಎ ಖರೀದಿಸಿ ಮಂಗಳೂರು ನಗರಕ್ಕೆ ತಂದು ಕುಳಾಯಿ ಗುಡ್ಡೆ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಜೂನ್ 25 ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಳಿಕ ಬಂಧಿತ ಆರೋಪಿಯಿಂದ ಸುಮಾರು…
-

ಸುರತ್ಕಲ್ ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ
ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತ ಗರ್ಭಿಣಿ ಬಾಲಕಿಯೊಬ್ಬಳ ಆತ್ಮಹತ್ಯೆ ಪ್ರಕರಣದ ತನಿಖೆಯ ವೇಳೆ ಅತ್ಯಂತ ಆಘಾತಕಾರಿ ಹಾಗೂ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಬಾಲಕಿಯ ಕುರಿತ ಕೆಲವೊಂದು ವಿಚಾರಗಳು ಗೊತ್ತಿದ್ದರೂ ಹೆತ್ತವರು ಮೌನವಾಗಿದ್ದರಿಂದ ಗಂಭೀರ ಸ್ಥಿತಿಗೆ ತಲುಪುವಂತಾಯಿತು ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಾದಕ ದ್ರವ್ಯ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಈ ಪ್ರಕರಣದ ಗಂಭೀರತೆಯನ್ನು ಪ್ರಸ್ತಾಪಿಸಿ ಅವರು ಮಾತನಾಡಿದರು.“ಆತ್ಮಹತ್ಯೆ ಮಾಡಿಕೊಂಡ ಬಾಲಕಿಯು ಸ್ಥಳೀಯ…
-

ಗುಂಡೇಟು, ಸುಟ್ಟ ಗಾಯಗಳೊಂದಿಗೆ ಕಾರಿನೊಳಗೆ ದಂಪತಿ ಮೃತದೇಹ ಪತ್ತೆ..!!
ನವದೆಹಲಿ: ಮಧ್ಯಪ್ರದೇಶದ ಅಶೋಕನಗರದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಗುಂಡೇಟು ಹಾಗೂ ಸುಟ್ಟ ಗಾಯಗಳೊಂದಿಗೆ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣವನ್ನು ಕೊಲೆ ಹಾಗೂ ಆತ್ಮಹತ್ಯೆ ಎರಡೂ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರನ್ನು ರಿತಿಕ್ ಸೋನಿ ಮತ್ತು ಮುಸ್ಕಾನ್ ಎಂದು ಗುರುತಿಸಲಾಗಿದೆ. ರಿತಿಕ್ ಕಾರಿನ ಚಾಲಕನ ಆಸನದಲ್ಲಿ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಗೆ ಗುಂಡೇಟಿನ ಗಾಯ ಮತ್ತು ಮುಖದ ಮೇಲೆ ಸುಟ್ಟ ಗುರುತುಗಳಿದ್ದವು. ಮುಸ್ಕಾನ್ ಪಕ್ಕದ ಆಸನದಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ಇಬ್ಬರೂ ಅಶೋಕನಗರದ ನಿವಾಸಿಗಳಾಗಿದ್ದಾರೆ. ಪೊಲೀಸರ…
-

ಗೋಲ್‌ಮಾಲ್ ಆರೋಪ ತಳ್ಳಿ ಹಾಕಿದ ಇಲಾಖೆ – ಗೃಹಲಕ್ಷ್ಮಿ ಯೋಜನೆ ಕುರಿತು ಸ್ಪಷ್ಟನೆ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ ವರದಿ ಹೇಳಿದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಯಾವುದೇ ಗೋಲ್‌ಮಾಲ್ ಆಗಿಲ್ಲ ಎಂದು ಡೇಟಾ ಸಮೇತ ಸ್ಪಷ್ಟೀಕರಣ ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಒಟ್ಟು 2,88,376 ಫಲಾನುಭವಿಗಳು ಸಾವನ್ನಪ್ಪಿದ್ದಾರೆ. ಆ ಪೈಕಿ 1,03,922 ಮೃತ ಫಲಾನುಭವಿಗಳ ಕುಟುಂಬದಲ್ಲಿ ಯಜಮಾನಿಯ ಹೆಸರು ಬದಲಾವಣೆ ಆಗಿ, ಮರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ 1,08,755 ಮೃತ ಫಲಾನುಭವಿಗಳ ಮರಣದ ವಿವರ ಸಕಾಲಕ್ಕೆ ಲಭ್ಯವಾಗಿಲ್ಲ. ಹೀಗಾಗಿ ಇಲ್ಲಿ ಯಾವುದೇ ತಾಂತ್ರಿಕ ದೋಷವಾಗಿಲ್ಲ. ಆಧಾರ್ ಬೇಸ್ಡ್ ಪೇಮೆಂಟ್…
-

ದಾರಿ ಕೇಳುವ ನೆಪದಲ್ಲಿ ದರೋಡೆ: ಮಹಿಳೆಯ 2 ಪವನ್ ಸರ ಕಸಿದು ಪರಾರಿ
ಕಾಸರಗೋಡು: ಹಾಡುಹಗಲೇ ಮಹಿಳೆಯೊಬ್ಬರಿಗೆ ಅಡ್ಡಗಟ್ಟಿ, ಅವರ ಕುತ್ತಿಗೆಯಲ್ಲಿದ್ದ ಎರಡು ಪವನ್ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಗಳ ಪೈಕಿ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ಕುಂಬ್ಳೆಯ ಬಂಬ್ರಾಣ ನಿವಾಸಿ ಎ. ಸಂದೀಪ್ (31) ಎಂದು ಗುರುತಿಸಲಾಗಿದೆ. ಈ ಘಟನೆಯು ಸೋಮವಾರ ಸಂಜೆ ಹೊಸಂಗಡಿ ಸಮೀಪ ನಡೆದಿತ್ತು.ಘಟನೆಯ ವಿವರ:ಪೈವಳಿಕೆಯ ಬಾಯಿಕಟ್ಟೆ ನಿವಾಸಿ ನಯನಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ, ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ದಾರಿ ಕೇಳುವ ನೆಪದಲ್ಲಿ ಅವರ ಬಳಿ ಬಂದಿದ್ದಾರೆ. ಮಾತನಾಡುವ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











