ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಅಧಿಕಾರಿಗಳು ತಮ್ಮ ಅನುಭವಕ್ಕೆ ತಕ್ಕಂತೆ ಉತ್ತಮವಾಗಿ ಕೆಲಸ ಮಾಡಬೇಕು. ಕೆಲಸದಲ್ಲಿ ವಿಳಂಬ ಮಾಡಿ, ಸಮಯ ಹಾಳು ಮಾಡುವ ಅಧಿಕಾರಿಗಳು ಜಿಲ್ಲೆಯಿಂದ ತೆರಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಚಿವರೇ ಒಮ್ಮೆ ಮಂಗಳೂರು RTO ಕಛೇರಿಗೂ ಭೇಟಿ ನೀಡಿ ಇಲ್ಲಿಯ ಗುಮಾಸ್ತ ಸೋಮರಾಜ್ 2- 3 ವರ್ಷ ಅಲ್ಲ ಬರೋಬ್ಬರಿ 12 ವರ್ಷಗಳಿಂದ ಅದೇ ಹುದ್ದೆಯಲ್ಲಿ ಇದ್ದಾನೆ, ವರ್ಗಾವಣೆ ಎಂಬ ಪದ ಇವನಿಗೆ ಗೊತ್ತೆ ಇಲ್ಲಾ..!! ಹುದ್ದೆಗೆ ಭರ್ತಿ ಆದೇಶ ಬಂದರು ಅದನ್ನು ತನ್ನ ರಾಜಕೀಯ ಮತ್ತು ಹಣದುಬ್ಬರ ಸುರಿಸಿ ಪ್ರಮೋಶನ್ ಅದೇಶವನ್ನೇ ರದ್ದುಮಾಡಿ ಗುಮಾಸ್ತ ಹುದ್ದೆಯಲ್ಲೇ ಖಾಯಂಗೊಂಡಿದ್ದಾನೆ.
ಈ ಹಿಂದೆ ಇವನ ಬಗ್ಗೆ ವರದಿ ಮಾಡಿದಕ್ಕೆ ಇದೆಲ್ಲಾ ನನ್ನ ಜೀವನದಲ್ಲಿ ತುಂಬಾ ನೋಡಿದ್ದೇನೆ, ಮೇಲಾಧಿಕಾರಿಗಳಿಗೆ ಲಕ್ಷ ಲಕ್ಷ ಸುರಿದರೆ ನಾನು ಇದೆ ಹುದ್ದೆಯಲ್ಲಿ ಇರುತ್ತೆನೆ ನನ್ನನ್ನು ಮುಟ್ಟುವವರು ಯಾರು ಇಲ್ಲ ಎಂದು ರಾಜರೋಶವಾಗಿ ಹೇಳುತ್ತಾನೆ.
ಉಸ್ತುವಾರಿ ಸಚಿವರೆ ಇತ್ತ ಗಮನ ಹರಿಸಿ ಇಂತಹ ದುರಾಹಂಕಾರಿ ಸೊಮರಾಜ್ ನನ್ನು ವರ್ಗಾವಣೆ ಮಾಡಿ ಮತ್ತು ಇವನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಿ. ಸಚಿವರೇ ಇವನನ್ನು ವರ್ಗಾವಣೆ ಮಾಡಿ ನಮ್ಮ ದ.ಕ ಜಿಲ್ಲೆಯನ್ನು ರಕ್ಷಿಸಿ.













