Category: ಬ್ರೇಕಿಂಗ್ ನ್ಯೂಸ್

  • ಮಜಾಭಾರತ ಕಲಾವಿದ ಸಿದ್ದಾರ್ಥ ಪರಶನೂರ ಅನುಮಾನಾಸ್ಪದ ಸಾವು; ಅರಣ್ಯ ಪ್ರದೇಶದಲ್ಲಿ ಶವ ಪತ್ತೆ
    , ,

    ಮಜಾಭಾರತ ಕಲಾವಿದ ಸಿದ್ದಾರ್ಥ ಪರಶನೂರ ಅನುಮಾನಾಸ್ಪದ ಸಾವು; ಅರಣ್ಯ ಪ್ರದೇಶದಲ್ಲಿ ಶವ ಪತ್ತೆ

    ಬೀದರ್: ಅನುಮಾನಾಸ್ಪದ ರೀತಿಯಲ್ಲಿ `ಮಜಾಭಾರತ ಕಾಮಿಡಿ ರಿಯಾಲಿಟಿ ಶೋ ಕಲಾವಿದ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಘಟನೆಯಾಗಿದೆ.ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿ‌ಯಲ್ಲಿ ವಾಸವಿದ್ದ ಸಿದ್ದಾರ್ಥ ಪರಶನೂರ (36) ಜೂನ್ 13 ರಂದು ಸ್ನೇಹಿತರೊಂದಿಗೆ ಮನೆಯಿಂದ ಹೋಗಿದ್ದು, ಇಂದು ಶವವಾಗಿ ಪತ್ತೆಯಾಗಿದ್ದಾನೆ.3 ದಿನವಾದರೂ ಮನೆಗೆ ಬಾರದ ಸಿದ್ದಾರ್ಥ, ಸೋಮವಾರ ಮಧ್ಯಾಹ್ನ ಶವವಾಗಿ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆಯಷ್ಟೇ ಹುಮ್ನಾಬಾದ್ ಪೊಲೀಸ್ ಠಾಣೆಗೆ ಕುಟುಂಬಸ್ಥರು ಮಿಸ್ಸಿಂಗ್‌ ದೂರು ದಾಖಲಿಸಲು ಹೋಗಿದ್ದರು. ಮೊಬೈಲ್…

    Continue Reading

  • ಉಡುಪಿ: ಸರಕಾರಿ ಬಸ್ ನಿಲ್ದಾಣದಲ್ಲಿ ಯುವತಿ ಚಾಕು ಹಿಡಿದು ಬೀದಿ ರಂಪಾಟ!!
    , ,

    ಉಡುಪಿ: ಸರಕಾರಿ ಬಸ್ ನಿಲ್ದಾಣದಲ್ಲಿ ಯುವತಿ ಚಾಕು ಹಿಡಿದು ಬೀದಿ ರಂಪಾಟ!!

    ಉಡುಪಿ: ಅದಾವುದೋ ಕಾರಣಕ್ಕೆ ಮಾನಸಿಕ ಕ್ಷೋಭೆಗೆ ಒಳಗಾಗಿದ್ದ 17 ವರ್ಷದ ಅಪ್ರಾಪ್ತ ಯುವತಿ ತನ್ನನ್ನು ರಕ್ಷಿಸಲು ಮುಂದಾದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಮೇಲೆಯೇ ಚಾಕು ಹಿಡಿದು ದಾಳಿ ನಡೆಸಿ ರಾದ್ಧಾಂತ ಸೃಷ್ಟಿಸಿದ ಘಟನೆ ಸೋಮವಾರ ಉಡುಪಿಯ ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.ಯುವತಿ ವಿಶು ಶೆಟ್ಟಿ ಅವರ ಮೇಲೆ ಚಾಕು ಬೀಸಿದ್ದು, ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ.ಯುವತಿಯ ರಾದ್ಧಾಂತವನ್ನು ಕಂಡು ಬೆಚ್ಚಿ ಆಕೆಯ ತಾಯಿ ಮೂರ್ಚೆ ಬಿದ್ದಿದ್ದು, ಯುವತಿಯ ತಂದೆಯ ಅಪೇಕ್ಷೆ ಮೇರೆಗೆ ಯುವತಿ…

    Continue Reading

  • ಬೇಕಲ ಸಮೀಪ ಪಳ್ಳಿಕೆರೆ ಕಡಲತೀರದಲ್ಲಿ ದುರಂತ; ಇಬ್ಬರು ವಿದ್ಯಾರ್ಥಿಗಳು ನೀರುಪಾಲು
    , ,

    ಬೇಕಲ ಸಮೀಪ ಪಳ್ಳಿಕೆರೆ ಕಡಲತೀರದಲ್ಲಿ ದುರಂತ; ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ ಭಾನುವಾರ ಸಂಜೆ ಪ್ರವಾಸಕ್ಕೆ ಬಂದಿದ್ದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತಿಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.ಮೃತಪಟ್ಟ ವಿದ್ಯಾರ್ಥಿಗಳನ್ನು ಕೊಟ್ಟಾಯಂ ಜಿಲ್ಲೆಯ ಚಂಗನಾಶೇರಿಯ ನಿವಾಸಿಗಳಾದ ಅಂಕಿತ್ (20) ಮತ್ತು ಅಪ್ಪು ಟಿ. ಅಬ್ರಹಾಂ (20) ಎಂದು ಗುರುತಿಸಲಾಗಿದೆ.ಭಾನುವಾರ ಸಂಜೆ ಸುಮಾರು 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಒಟ್ಟು ಆರು ಮಂದಿ ವಿದ್ಯಾರ್ಥಿಗಳ ತಂಡ ಪ್ರವಾಸಕ್ಕಾಗಿ ಕಡಲತೀರಕ್ಕೆ ಆಗಮಿಸಿದ್ದು, ಅವರಲ್ಲಿ ನಾಲ್ವರು ಸಮುದ್ರಕ್ಕಿಳಿದಿದ್ದರು.ವಿದ್ಯಾರ್ಥಿಗಳು ಬೇಕಲ ಕೋಟೆಯನ್ನು ವೀಕ್ಷಿಸಲು ಬಂದಿದ್ದರು.…

    Continue Reading

  • ಅಪಘಾತದಲ್ಲಿ ಗಾಯಗೊಂಡು 6 ತಿಂಗಳು ಕೋಮಾದಲ್ಲಿದ್ದ ಯುವಕ ವಿಧಿವಶ
    , ,

    ಅಪಘಾತದಲ್ಲಿ ಗಾಯಗೊಂಡು 6 ತಿಂಗಳು ಕೋಮಾದಲ್ಲಿದ್ದ ಯುವಕ ವಿಧಿವಶ

    ಪುತ್ತೂರು: ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ಜೂನ್ 14ರಂದು ನಿಧನರಾಗಿದ್ದಾರೆ.ಮೃತರು ಮೂಲತಃ ಮಠ ಗ್ರಾಮದ ನಿವಾಸಿಯಾಗಿದ್ದು, ಸದ್ಯ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಬದ್ರುದ್ದೀನ್ ಮಠ ಎಂದು ಗುರುತಿಸಲಾಗಿದೆ. ಇವರು ಕೂಟೇಲ್‌ನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.ಘಟನೆಯ ಹಿನ್ನೆಲೆ:2025ರ ಡಿಸೆಂಬರ್ 11ರ ರಾತ್ರಿ ಬದ್ರುದ್ದೀನ್ ಅವರು ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಎದುರಿನಿಂದ ಬಂದ ಕಾರು ಅವರ…

    Continue Reading

  • 2 ಲಕ್ಷಕ್ಕೆ ಬೇಡಿಕೆ, 40 ಸಾವಿರ ಪಡೆಯುವಾಗ ಟ್ರ್ಯಾಪ್! ಹೆಚ್‌ಎಎಲ್ ಪೊಲೀಸರ ವಿರುದ್ಧ ಎಸಿಬಿ ಆಕ್ಷನ್
    , ,

    2 ಲಕ್ಷಕ್ಕೆ ಬೇಡಿಕೆ, 40 ಸಾವಿರ ಪಡೆಯುವಾಗ ಟ್ರ್ಯಾಪ್! ಹೆಚ್‌ಎಎಲ್ ಪೊಲೀಸರ ವಿರುದ್ಧ ಎಸಿಬಿ ಆಕ್ಷನ್

    ಬೆಂಗಳೂರು: ವರದಕ್ಷಿಣೆ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಹೆಚ್ಎಎಲ್‌ ಪೊಲೀಸರು ಜೈಪುರದಲ್ಲಿ ಟ್ರ್ಯಾಪ್‌ ಆಗಿರುವ ಘಟನೆ ನಡೆದಿದೆ.ಆರೋಪಿಯ ಬಂಧನಕ್ಕೆ ತೆರಳಿದ್ದ ಪೊಲೀಸರು, ಆತನ ಬಳಿ ಹಣಕ್ಕೆ ಬೇಡಿಕೆಯಿಟ್ಟು ರಾಜಸ್ಥಾನದ ಎಸಿಬಿ ಅಧಿಕಾರಿಗಳಿಗೆ ಲಾಕ್‌ ಆಗಿದ್ದಾರೆ.ಪಿಎಸ್‌ಐ ಅನಿತಾ, ಹೆಡ್ ಕಾನ್ಸ್‌ಟೇಬಲ್‌ ಉಳುವಪ್ಪ, ಕಾನ್ಸ್ಟೇಬಲ್ ಯತೀಶ್ ಟ್ರ‍್ಯಾಪ್ ಆದ ಪೊಲೀಸರು.ವರದಕ್ಷಿಣೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಶುಕ್ರವಾರ ಆರೋಪಿ ಬಂಧನಕ್ಕೆ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದರು. ಈ ವೇಳೆ ಸಿಕ್ಕ ಆರೋಪಿ ಬಳಿ 2 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆದ್ರೆ…

    Continue Reading

  • ಮೆಸೇಜ್ ಕಳುಹಿಸಿದ ಬಳಿಕ ನಾಪತ್ತೆಯಾದ ಉದ್ಯಮಿ; ಪ್ರಕರಣ ದಾಖಲು
    , ,

    ಮೆಸೇಜ್ ಕಳುಹಿಸಿದ ಬಳಿಕ ನಾಪತ್ತೆಯಾದ ಉದ್ಯಮಿ; ಪ್ರಕರಣ ದಾಖಲು

    ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಔಷಧಕ್ಕೆ ಸಂಬಂಧಿತ ಕಚೇರಿಯನ್ನುನಡೆಸುತ್ತಿದ್ದ ಉದ್ಯಮಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಪತ್ತೆಯಾದ ವ್ಯಕ್ತಿಯನ್ನು ಸುನೀಲ್ ಬಿ. ಎಸ್. (36) ಎಂದು ಗುರುತಿಸಲಾಗಿದೆ. ಅವರು ಬಿಜೈನಲ್ಲಿರುವ ಪಿಜಿ ಯೊಂದರಲ್ಲಿ ವಾಸಿಸುತ್ತಿದ್ದರು.ಕುಟುಂಬದವರು ನೀಡಿರುವ ದೂರಿನ ಪ್ರಕಾರ, ಸುನೀಲ್ ಜೂನ್ 12 ರ ಸಂಜೆ ತಮ್ಮ ಕಚೇರಿಯ ಕೆಲಸವನ್ನು ಮುಗಿಸಿ, ರಾತ್ರಿ ಸುಮಾರು 9 ಗಂಟೆಗೆ ತಮ್ಮ ಸಹೋದರಿಯ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರು.ಆ ಸಂದೇಶ ಕಳುಹಿಸಿದ ತಕ್ಷಣವೇ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.…

    Continue Reading

  • ಮುಂಗಾರು ಎಫೆಕ್ಟ್: ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್, ಪ್ರವಾಸಿಗರಿಗೆ ನಿರ್ಬಂಧ
    , ,

    ಮುಂಗಾರು ಎಫೆಕ್ಟ್: ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್, ಪ್ರವಾಸಿಗರಿಗೆ ನಿರ್ಬಂಧ

    ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಜಮಲಾಬಾದ್ ಕೋಟೆ ಗಡಾಯಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆ ಮತ್ತೆ ನಿರ್ಬಂಧ ಹೇರಿದೆ. ಮಳೆಯ ಕಾರಣ ಕಲ್ಲುಗಳು ಜಾರುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಜೂನ್ 14ರಿಂದ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಕುರಿತು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗ ಪ್ರಕಟಣೆ ಹೊರಡಿಸಿದ್ದು, ಸುರಕ್ಷತಾ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದೆ.ಈ ಹಿಂದೆ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಹಾಗೂ ಇತರ ಅನಾಹುತಗಳನ್ನು ತಡೆಗಟ್ಟುವ…

    Continue Reading

  • ಮಹಜರಿಗೆ ತೆರಳಿದ ವೇಳೆ ಹೈಡ್ರಾಮಾ: ಹಲ್ಲೆ ಮಾಡಿದ ಆರೋಪಿಗೆ ಪೊಲೀಸ್ ಫೈರಿಂಗ್
    , ,

    ಮಹಜರಿಗೆ ತೆರಳಿದ ವೇಳೆ ಹೈಡ್ರಾಮಾ: ಹಲ್ಲೆ ಮಾಡಿದ ಆರೋಪಿಗೆ ಪೊಲೀಸ್ ಫೈರಿಂಗ್

    ಶಿವಮೊಗ್ಗ: ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್‌ನಲ್ಲಿ ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ನರಸಿಂಹ ಕೊಲೆ ಕೇಸ್ ಆರೋಪಿ ಮಧು ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ನಡೆದಿದೆ.ಶಿವಮೊಗ್ಗದಲ್ಲಿ ರೌಡಿಶೀಟರ್ ನರಸಿಂಹ ಕೊಲೆ ಕೇಸ್ ಸಂಬಂಧ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಕೋಟೆ ಠಾಣೆ ಕ್ರೈಮ್ ಸಿಬ್ಬಂದಿ ಅಂಜನಪ್ಪ ಮೇಲೆ ಆರೋಪಿ ಮಧು ಹಲ್ಲೆ ಮಾಡಿದ್ದಾನೆ. ಏರ್ ಫೈರ್ ಮಾಡಿ ವಾರ್ನ್ ಮಾಡಿದರೂ ಮಾತು ಕೇಳದ ಹಿನ್ನೆಲೆ ಕೋಟೆ…

    Continue Reading

  • 99 ವರ್ಷದ ವೃದ್ಧೆ ಬಾವಿಗೆ ಬಿದ್ದು ಸಾವು; ಇಣುಕಿ ನೋಡುತ್ತಿದ್ದಾಗ ಜಾರಿ ಬಿದ್ದ ದುರಂತ
    , ,

    99 ವರ್ಷದ ವೃದ್ಧೆ ಬಾವಿಗೆ ಬಿದ್ದು ಸಾವು; ಇಣುಕಿ ನೋಡುತ್ತಿದ್ದಾಗ ಜಾರಿ ಬಿದ್ದ ದುರಂತ

    ಮೂಡುಬಿದಿರೆ: ವೃದ್ಧೆಯೋವ೯ರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಒಂಟಿಕಟ್ಟೆಯಲ್ಲಿ ಶನಿವಾರ ನಡೆದಿದೆ.ಮೂಡಬಿದ್ರೆ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆಯ ಕಮಲ (99) ಮೃತಪಟ್ಟವರು. ಶನಿವಾರ ಬಾವಿಗೆ ಇಣುಕಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಗಂಭೀರ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಮೂಡಬಿದ್ರೆಯ ಅಗ್ನಿಶಾಮಕ ದಳದ ಸಿಬಂದಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಮೂಡಬಿದ್ರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

  • ಸಂಜೆಯಿಂದ ಮನೆಗೆ ಮರಳದ ಇಬ್ಬರು ಬಾಲಕರು ; ಸುಳಿವು ನೀಡುವಂತೆ ಮನವಿ
    , ,

    ಸಂಜೆಯಿಂದ ಮನೆಗೆ ಮರಳದ ಇಬ್ಬರು ಬಾಲಕರು ; ಸುಳಿವು ನೀಡುವಂತೆ ಮನವಿ

    ಮಂಜೇಶ್ವರ: ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರಿನಲ್ಲಿ ನಡೆದಿದೆ.ಕುಂಜತ್ತೂರು ಸ್ವಾಗತ್ ಹೊಟೇಲ್ ಸಮೀಪದ ಯಾಸಿನ್ ( 13) ಮತ್ತು ಸುಲ್ತಾನ್ (14) ನಾಪತ್ತೆಯಾದವರು. ಶನಿವಾರ ಸಂಜೆ ಐದು ಗಂಟೆ ಬಳಿಕ ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಾಲಕರ ಬಗ್ಗೆ ಗುರುತು, ಸುಳಿವು ಲಭಿಸಿದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed