ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರದ ಪೊಲೀಸ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪಿತೂರಿ ನಾಗರಿಕರ ಶಾಂತಿ ನೆಮ್ಮದಿ ಹಾಳು ಮಾಡುವ ಉದ್ದೇಶವೇ??
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ವರ್ಗಾವಣೆಯ ಹಿಂದೆ ಯಾವುದಾದರೂ ಒತ್ತಡ, ಪ್ರಭಾವ ಅಥವಾ ಹಿತಾಸಕ್ತಿ ಕೆಲಸ ಮಾಡುತ್ತಿದೆಯೇ?
ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಡಾ. ಅರುಣ್ ಕುಮಾರ್ ಮತ್ತುಮಂಗಳೂರು ನಗರ ಪೊಲೀಸ್ ಆಯುಕ್ತರ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್ ವರ್ಗಾವಣೆಗೆ ಮಟ್ಕಾ ದಂದೆಕೋರರು , ಡ್ರಗ್ಸ್ ಮಾಫಿಯಗಳ ಮಸಾಜ್ ಸೆಂಟರ್ ಮಾಲಕರ ಸಂತೋಷಪಡಿಸಲಿಕ್ಕಾಗಿಯೇ, ವರ್ಗಾವಣೆ ಎಂಬುವುದು ಸಹಜ, ಆದರೆ ಇಂತಹ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರಕ್ಕೆ ಬಂದ ನಂತರ ಮಂಗಳೂರಿನ ನಾಗರಿಕರು ಶಾಂತಿಯಿಂದ ಮತ್ತು ನೆಮ್ಮದಿಯಿಂದ ಬದುಕುತ್ತಿದ್ದಾರೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಉದ್ದೇಶ ವಿತ್ತೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ವರ್ಗಾವಣೆ ಮಾಡುವುದು ಬಹಳ ಸುಲಭ ಮಂಗಳೂರಿನ ಶಾಂತಿ ಮತ್ತು ಕಾನೂನು ವ್ಯವಸ್ಥೆಯನ್ನು ರಾಜಕೀಯ ಲಾಭಕ್ಕೋಸ್ಕರ ಶಾಂತಿ ಬಯಸುವ ನಾಗರಿಕರ ನೆಮ್ಮದಿ ಹಾಳು ಮಾಡಬೇಡಿ, ಮಂಗಳೂರು ನಾಗರಿಕರಿಗೆ ಬೇಕಿರುವುದು ಕಾನೂನು ಪಾಲನೆ ಮಾಡುವ ನಿಷ್ಠಾವಂತ ಇಂತಹ ಪೊಲೀಸ್ ಅಧಿಕಾರಿಗಳು, ಮಾನ್ಯ ಮುಖ್ಯಮಂತ್ರಿಗಳೇ ಮಾನ್ಯ ಗೃಹ ಸಚಿವರೇ ಮಾನ್ಯ ಉಸ್ತುವಾರಿ ಸಚಿವರೇ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಮಂಗಳೂರು ನಗರದ ನಾಗರಿಕರ ಕಳಕಳಿಯ ವಿನಂತಿ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಡಿ, ಮಂಗಳೂರು ನೆಮ್ಮದಿಯಿಂದ ಬದುಕಲು ಶಾಂತಿಯಿಂದ ಬದುಕಲು ಇಂತಹ ಅಧಿಕಾರಿಗಳ ಅಗತ್ಯ.















