Category: ಬ್ರೇಕಿಂಗ್ ನ್ಯೂಸ್
-

ಕೆ.ಸಿ ರೋಡ್ ಸಹಕಾರ ಸಂಘ ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಉಳ್ಳಾಲ: ತೊಕ್ಕೊಟ್ಟು ಸಮೀಪದ ಕೆ.ಸಿ ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 2025ರ ಜನವರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಗುಜರಾತ್ ಸೂರತ್ ನಿವಾಸಿ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್ ಸಿಂಗ್ ಬಂಧಿತ ಆರೋಪಿ. ಈತ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈ ತಂಡವು ದೊರೆತ ಖಚಿತ ಮಾಹಿತಿಯಂತೆ ತಲೆಮರೆಸಿಕೊಂಡಿದ್ದ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್…
-

ಜಾಮೀನು ರಹಿತ ವಾರಂಟ್ಗೂ ಕ್ಯಾರೆ ಎನ್ನದ ಆರೋಪಿಗಳು ಅಂದರ್ – ಮಂಗಳೂರು ಪೊಲೀಸರ ಕಾರ್ಯಾಚರಣೆ
ಮಂಗಳೂರು: ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಪದೇ ಪದೇ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.ಬಂಧಿತರನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಿವಂಗತ ರಂಗಸ್ವಾಮಿ ಅವರ ಪುತ್ರ ಶ್ರೀನಿವಾಸ ಸಿರಾಯನ್ (56), ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಗಾವನಹಳ್ಳಿ ಗ್ರಾಮದ ಚಂದ್ರೇಗೌಡ ಅವರ ಪುತ್ರ ಉಪೇಂದ್ರ ಡಿಸಿ ಅಲಿಯಾಸ್ ಅಭಿಷೇಕ್ (28) ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಕಾರ, ಶ್ರೀನಿವಾಸ ಸಿರಾಯನ್ ಮಂಗಳೂರು ಪೂರ್ವ ಪೊಲೀಸ್…
-

ಕುಟುಂಬಕ್ಕೆ ನೆರವಾಗಲು ಹೊರಟಿದ್ದ ಮಕ್ಕಳಿಗೆ ವಿಧಿಯ ಕ್ರೂರ ಆಟ; ಇಬ್ಬರು ಸಹೋದರರ ಸಾವು
ಕಾಸರಗೋಡು : ಶಾಲಾ ರಜಾದಿನಗಳಲ್ಲಿ ಮನೆಯವರಿಗೆ ಹೊರೆಯಾಗದೆ ಸ್ವಂತ ಖರ್ಚಿಗೆ ಹಣ ಗಳಿಸಬೇಕೆಂಬ ಮುಗ್ಧ ಬಾಲಕರ ಸಾಹಸವೊಂದು ಶನಿವಾರ ಸಂಜೆ ಸಂಭವಿಸಿದ ಭೀಕರ ತಡೆಗೋಡೆ ಕುಸಿತದೊಂದಿಗೆ ಕರುಣಾಜನಕ ದುರಂತವಾಗಿ ಕೊನೆಗೊಂಡಿದೆ. ತಡೆಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಮುಗ್ಧ ಸಹೋದರರು ಮೃತಪಟ್ಟು, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ದೇಲಂಪಾಡಿ ಪಂಚಾಯತ್ನ ಅಡೂರ್ ಬಳಿ ನಡೆದಿದೆ.ಮೃತರನ್ನು ಸ್ಥಳೀಯ ಚಾಲಕ ಅಬುಬಕರ್ ಮತ್ತು ಸೌಧಾ ದಂಪತಿಯ ಮಕ್ಕಳಾದ ಮುನ್ಸೀರ್ (9) ಮತ್ತು ಮುಸಮ್ಮಿಲ್ (14) ಎಂದು ಗುರುತಿಸಲಾಗಿದೆ.…
-

ಲಿಫ್ಟ್ ನಿರೀಕ್ಷೆಯಲ್ಲಿ ನಿಂತಿದ್ದ ಅಜ್ಜಿ-ಮೊಮ್ಮಗನಿಗೆ ಕಾದಿತ್ತು ಭೀಕರ ಅಂತ್ಯ
ಖೈರತಾಬಾದ್ನ ಆನಂದ್ ನಗರ ಕಾಲೋನಿಯ ‘ಭವನ ಅಪಾರ್ಟ್ಮೆಂಟ್ಸ್’ನಲ್ಲಿ ಈ ಧಾರುಣ ಘಟನೆ ನಡೆದಿದೆ. ರಾಧಾ (58) ಮೃತಪಟ್ಟ ದುರ್ದೈವಿ. ಅವರ 13 ತಿಂಗಳ ಮೊಮ್ಮಗ ಜೋಯಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ರಾಧಾ ಅವರು ತಮ್ಮ ಮೊಮ್ಮಗ ಜೋಯಲ್ನನ್ನು ಎತ್ತಿಕೊಂಡು ಅಪಾರ್ಟ್ಮೆಂಟ್ನ 5ನೇ ಮಹಡಿಯಲ್ಲಿದ್ದರು. ಕೆಳಗೆ ಹೋಗುವ ಉದ್ದೇಶದಿಂದ ಅವರು ಲಿಫ್ಟ್ ಬಟನ್ ಒತ್ತಿದ್ದಾರೆ. ಆದರೆ, ಲಿಫ್ಟ್ನ ಮುಖ್ಯ ಕ್ಯಾಬಿನ್ 5ನೇ ಮಹಡಿಗೆ ತಲುಪುವ ಮೊದಲೇ, ತಾಂತ್ರಿಕ ದೋಷದಿಂದಾಗಿ ಲಿಫ್ಟ್ನ ಹೊರಗಿನ…
-

ಮಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಮಿಂಚಿನ ದಾಳಿ: ಇಬ್ಬರು ಅರೆಸ್ಟ್
ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ.ಆರೋಪಿಗಳಿಂದ ಒಟ್ಟು 164 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕವಸ್ತುವಿನ ಒಟ್ಟು ಮೌಲ್ಯ ಸುಮಾರು 16,40,000 ಎಂದು ಅಂದಾಜಿಸಲಾಗಿದೆ.ಪ್ರಕರಣ -1ಬೆಂಗಳೂರು ನಗರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ ಮಂಗಳೂರು ನಗರಕ್ಕೆ ತಂದು ಹೊಯಿಗೆ ಬಜಾರ್ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ…
-

18 ವರ್ಷಗಳ ಬಳಿಕ ಮನೆಗಳ್ಳತನ ಪ್ರಕರಣಕ್ಕೆ ಅಂತ್ಯ: ಆರೋಪಿಗೆ ಕಠಿಣ ಶಿಕ್ಷೆ
ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಹಾಗೂ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಎರಡು ಪ್ರತ್ಯೇಕ ಗಂಭೀರ ಪ್ರಕರಣಗಳ ವಿಚಾರಣೆ ನಡೆಸಿದ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ (SCJ & JMFC) ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಸುಳ್ಯದ ಅಜ್ಜಾವರ ನಿವಾಸಿ ಎ.ಎಂ. ಅಜೀಜ್ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.ಅಪರಾಧಿ ಎ.ಎಂ. ಅಜೀಜ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ 2006ರಲ್ಲಿ ರಾತ್ರಿ ವೇಳೆ ಮನೆಗನ್ನ ಹಾಕಿ ಕಳ್ಳತನ…
-

ಅಕ್ಬರ್ ಅಕ್ತರ್ ಪಾಷಾ ಮನೆ ಮೇಲೆ ಲೋಕಾಯುಕ್ತ ದಾಳಿ:ಹಲವು ಅಧಿಕಾರಿಗಳ ಪಾತ್ರದ ಶಂಕೆ
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವುದಾಗಿ ಆರೋಪಿಸಲಾಗಿರುವ ಅಕ್ರಮಗಳ ತನಿಖೆಗೆ ಮಹತ್ವದ ತಿರುವು ಸಿಕ್ಕಿದ್ದು, ಮುಡಾದ ಇಂಜಿನಿಯರ್ ಆಗಿದ್ದ ಅಕ್ಬರ್ ಅಕ್ತರ್ ಪಾಷಾ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿನ್ನೆಯಿಂದ ಇಂದು ಬೆಳ್ಳಗಿನ ವರೆಗೆ ಪಾಷಾರವರ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ಕೊಣಾಜೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಡಾಗೆ ಸಂಬಂಧಿಸಿದ ಜಮೀನು ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಅಧಿಕಾರಿಗಳ…
-

ಬಂಟ್ವಾಳದಲ್ಲಿ ಮತ್ತೊಂದು ಡ್ರಗ್ಸ್ ಪ್ರಕರಣ: ಕಾರು ತಪಾಸಣೆಯಲ್ಲಿ ಭಾರಿ ಪ್ರಮಾಣದ ಎಂಡಿಎಂಎ ಪತ್ತೆ
ಬಂಟ್ವಾಳ: ಕಾರಿನಲ್ಲಿ ಮಾದಕವಸ್ತು ಎಂಡಿಎಂಎ ಸಾಗಾಟ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, 7,64,000 ರೂ. ಮೌಲ್ಯದ ಎಂಡಿಎಂಎ ಅನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.ಬಂಟ್ವಾಳ ಪುದು ನಿವಾಸಿ ಎ,ಜುಬೈರ್ (39), ಬಂಟ್ವಾಳ ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಂಟ್ವಾಳ ಬಿ ಮೂಡ ನಿವಾಸಿ ಬಿ.ಎಮ್. ರಶೀದ್ ಯಾನೆ ಮಾರಿಮುತ್ತು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಂದಾಜು 7,64,000ರೂ. ಮೌಲ್ಯದ ಒಟ್ಟು 76 ಗ್ರಾಂ 40 ಮಿಲಿಗ್ರಾಂ ಎಂಡಿಎಂಎ…
-

ಮಂಗಳೂರು ಮುಡಾ ಇಂಜಿನಿಯರ್ ಆಗಿದ್ದ ಅಕ್ಬರ್ ಪಾಷಾರವರ ಮನೆಗೆ ಲೋಕಾಯುಕ್ತ ದಾಳಿ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ( ಮುಡಾ) ದ ಇಂಜಿನಿಯರ್ ಆಗಿದ್ದ ಅಕ್ಬರ್ ಪಾಷಾರವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.ಕೊಣಾಜೆ ಪರಿಸರದಲ್ಲಿ ಮುಡಾಗೆ ಸಂಬಂಧಿಸಿದ ಹಲವಾರು ಆಸ್ತಿಗಳಲ್ಲಿ ಅವ್ಯವಹಾರ ನಡೆದಿದ್ದು, ದಾಳಿ ವೇಳೆ ಸಂಬಂಧ ಪಟ್ಟ ಮಹತ್ವದ ದಾಖಲೆಗಳು ಪತ್ತೆಯಾಗಿವೆ.ಮುಡಾದಲ್ಲಿ ನಡೆದ ಅಕ್ರಮ ಅವ್ಯವಹಾರಗಳ ಬಗ್ಗೆ ಖಚಿತ ಮಾಹಿತಿಯೊಂದಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಇದೆ.ಅಕ್ಬರ್ ಪಾಷಾ ಮನೆಯಲ್ಲಿ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
-

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ದಂಪತಿ ಅದೃಷ್ಟವಶಾತ್ ಪಾರು
ವಿಟ್ಲ: ಮಂಗಳೂರು-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ವಿಟ್ಲ ಸಮೀಪದ ಮಾಣಿ ಸಮೀಪದ ಅಳಿರಾ ಎಂಬಲ್ಲಿ ಶುಕ್ರವಾರ ಮುಂಜಾನೆ ಕಾರು ಪಲ್ಟಿಯಾದ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800 ಕಾರೊಂದು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿ ಬಿದ್ದಿದ್ದು, ಕಾರಿನಲ್ಲಿದ್ದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











