Category: ಬ್ರೇಕಿಂಗ್ ನ್ಯೂಸ್

  • ನೇಣು ಬಿಗಿದುಕೊಂಡ ಗಂಡನ ಮೃತದೇಹ ನೋಡಿ ಪತ್ನಿ17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
    ,

    ನೇಣು ಬಿಗಿದುಕೊಂಡ ಗಂಡನ ಮೃತದೇಹ ನೋಡಿ ಪತ್ನಿ17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

    ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಟೆಕ್ಕಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಭಾನು ಚಂದ್ರ ರೆಡ್ಡಿ ಹಾಗೂ ಸಾಜಿಯಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮೊದಲಿಗೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡನ ಮೃತದೇಹ ಕಂಡು ಪತ್ನಿ ಸಹ ಅಪಾರ್ಟ್‌ಮೆಂಟ್‌ನ 17ನೇ ಫ್ಲೋರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ – ಹೆಂಡತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಅನೇಕ ಬಾರಿ ಕಲಹಗಳಾಗಿದೆ.…

    Continue Reading

  • ಕಾರ್ಕಳ: ಮದುವೆಯಾದ ಒಂದೇ ತಿಂಗಳಲ್ಲಿ ಮದುಮಗ ಸಂಶಯಾಸ್ಪದ ಸಾವು- ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದೇನು..?
    ,

    ಕಾರ್ಕಳ: ಮದುವೆಯಾದ ಒಂದೇ ತಿಂಗಳಲ್ಲಿ ಮದುಮಗ ಸಂಶಯಾಸ್ಪದ ಸಾವು- ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದೇನು..?

    ಕಾರ್ಕಳ ತಾಲೂಕಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ವಿವಾಹಿತನೊಬ್ಬ ಸಾವಿಗೆ ಶರಣಾಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ ಸುದೀಪ್ ಶೆಟ್ಟಿ ಮೃತ ದುರ್ದೈವಿ ಮದುವೆಯಾಗಿ ಕೇವಲ ಒಂದು ತಿಂಗಳು ಕಳೆಯುವಷ್ಟರಲ್ಲೇ ಸುದೀಪ್ ಶೆಟ್ಟಿ, ನಿಧನ ಆಗಿರೋದು ಕುಟುಂಬಸ್ಥರ ನಿದ್ದೆಗೆಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ಶೆಟ್ಟಿ ಹಾಗೂ ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ, ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಫೆಬ್ರವರಿ 17 ರಂದು ಪುತ್ತೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ವಿವಾಹವಾಗಿದ್ದರು. ಸುದೀಪ್ ಮನೆಯವರು ಈ ಮದುವೆಗೆ ತೀವ್ರ ಆಕ್ಷೇಪ…

    Continue Reading

  • ಬೆಳ್ತಂಗಡಿ : ಕ್ರಿಕೆಟ್ ಆಡುವ ಸಂದರ್ಭದಲ್ಲಿ ನಡೆದ ವಾಗ್ವಾದ- ಯುವಕನ ಮೇಲೆ ಕತ್ತಿಯಿಂದ ಹಲ್ಲೆ
    ,

    ಬೆಳ್ತಂಗಡಿ : ಕ್ರಿಕೆಟ್ ಆಡುವ ಸಂದರ್ಭದಲ್ಲಿ ನಡೆದ ವಾಗ್ವಾದ- ಯುವಕನ ಮೇಲೆ ಕತ್ತಿಯಿಂದ ಹಲ್ಲೆ

    ಬೆಳ್ತಂಗಡಿ : ಕ್ರಿಕೆಟ್ ಆಡುವ ಸಂದರ್ಭದಲ್ಲಿ ನಡೆದ ವಾಗ್ವಾದವನ್ನು ನೆಪವಾಗಿಸಿ ಯುವಕನ ತಲೆಗೆ ಕತ್ತಿಯಿಂದ ಕಡಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ ಘಟನೆ ಮಾ.29ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಆಸಿಫ್ (36) ಗಾಯಗೊಂಡವರಾಗಿದ್ದು ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಆರೀಫ್ (25) ಎಂಬಾತ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ‌. ಆರೋಪಿಯನ್ನು…

    Continue Reading

  • ಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನ
    , ,

    ಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನ

    ಕಾರ್ಕಳ : ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಕಾರು ಹರಿಸಲು ಯತ್ನಿಸಿ ಕೊಲೆ ಯತ್ನ ನಡೆಸಿದ ಹಾಗೂ ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಡೂರು ನಿವಾಸಿ ಸುದರ್ಶನ ಶೆಟ್ಟಿ (29), ಕೃತವ್ಯ ಶೆಟ್ಟಿ (27), ಅರುಣ್ ಶೆಟ್ಟಿ (29), ತೇಜಸ್ (28) ಮತ್ತು ಪ್ರಜ್ವಲ್ ಶೆಟ್ಟಿ (29) ಬಂಧಿತರು. ಕಾರ್ಕಳದ ಹಂಚಿಕಟ್ಟೆ ಬಳಿ ತಪಾಸಣೆ ನಡೆಸುತ್ತಿದ್ದ ಪಿಎಸ್‌ಐ ಪ್ರಸನ್ನ ಎಂ.ಎಸ್. ಅವರ ತಂಡ ಕಪ್ಪು ಬಣ್ಣದ ಕಾರನ್ನು ನಿಲ್ಲಿಸಲು ಸೂಚಿಸಿದಾಗ,…

    Continue Reading

  • ಕಾರ್ಕಳ-: ಬಜಾಜ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯಿಂದ ದೂರು!!
    ,

    ಕಾರ್ಕಳ-: ಬಜಾಜ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯಿಂದ ದೂರು!!

    ಕಾರ್ಕಳ ತಾಲೂಕಿನ ಅಜೆಕಾರ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಬಜಾಜ್ ಫೈನಾನ್ಸ್ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ ಅವಮಾನಕಾರಿ ರೀತಿಯಲ್ಲಿ ಮಾತನಾಡಿದ ಘಟನೆ ವರದಿಯಾಗಿದೆ. ದಿನಾಂಕ 25-03-2026 ರಂದು, ಬಜಾಜ್ ಫೈನಾನ್ಸ್‌ನಿಂದ ಕರೆ ಬಂದಿದೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮಹಿಳೆಗೆ ಸಂಪರ್ಕಿಸಿ, “ನಿಮ್ಮ ಗಂಡನಿಗೆ ಸಾಲ ಕಟ್ಟಲು ಆಗುತ್ತಿಲ್ಲ” ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಮಹಿಳೆ, ತಾನು ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲವೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರೆ ಮಾಡಿದ ವ್ಯಕ್ತಿ, “ಸುಧೀರ್ ನಿನ್ನ ಗಂಡ…

    Continue Reading

  •  ಆರೀಫ್‌ ಹತ್ಯೆ ಪ್ರಕರಣ : ಸಿಸಿಬಿ ಪೊಲೀಸರನ್ನೊಳಗೊಂಡ ವಿಶೇಷ ಪತ್ತೆ ದಳ ರಚನೆ
    , ,

     ಆರೀಫ್‌ ಹತ್ಯೆ ಪ್ರಕರಣ : ಸಿಸಿಬಿ ಪೊಲೀಸರನ್ನೊಳಗೊಂಡ ವಿಶೇಷ ಪತ್ತೆ ದಳ ರಚನೆ

    ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫೈಓವರ್ ಮೇಲೆ ಮೀನಿನ ವ್ಯಾಪಾರಿ, ರೌಡಿ ಶೀಟರ್‌ ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಹುಸೇನ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಕೊಲೆಯಾದ ಆರೀಫ್‌ ಪುತ್ರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೌಫಾಲ್ ಸಹಚರ ಮಹಮ್ಮದ್ ರಿಫಾತ್ ಆಲಿ ನೇತೃತ್ವದ ತಂಡ ಕೊಲೆ ಮಾಡಿದ್ದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆರೀಫ್‌ ಕೊಲೆ ನಡೆಸಿದ್ದ ಹಂತಕರು ಇನ್ನೋವಾ ಕಾರನ್ನು ವಿಟ್ಲ ಬುಡೋಳಿಯಲ್ಲಿ ಬಿಟ್ಟು ಹೋಗಿದ್ದರು. ಬಳಿಕ ರಿಕ್ಷಾವೊಂದರಲ್ಲಿ…

    Continue Reading

  • ಮಂಗಳೂರು ಗ್ಯಾಂಗ್ ವಾರ್ ನ ನಟ್ಟ್ ಬೋಲ್ಟ್ ಟೈಟ್ ಮಾಡುತ್ತಾರಾ ಪೊಲೀಸರು..?
    , ,

    ಮಂಗಳೂರು ಗ್ಯಾಂಗ್ ವಾರ್ ನ ನಟ್ಟ್ ಬೋಲ್ಟ್ ಟೈಟ್ ಮಾಡುತ್ತಾರಾ ಪೊಲೀಸರು..?

    ಏನಾಗುತ್ತಿದೆ ಮಂಗಳೂರಿನಲ್ಲಿ..? ಅಬ್ಬಬ್ಬಾ.. ವರ್ಷದ ಹಿಂದೆ ಮಂಗಳೂರಿನಲ್ಲಿ ಇಂತಹ ಮಾತುಗಳು ಬೀದಿ ಬೀದಿಗಳಲ್ಲಿ ಕೇಳಿ ಬರುತ್ತಿತ್ತು. ದಿನ ಬೆಳಗಾದರೆ ಸಾಕು, ಗ್ಯಾಂಗ್ ವಾರ್ ಗಳ ಅಬ್ಬರ ಮಂಗಳೂರಿನಲ್ಲಿ ಕೇಳಿ ಬರುತ್ತಿತ್ತು. ಪೊಲೀಸರ ಎಚ್ಚರಿಕೆಗಿಂತಲೂ ಹೆಚ್ಚಾಗಿ ದುಬೈ, ಮುಂಬೈ ನಲ್ಲಿ ಅಡಗಿರುವ ‘ಬಾಯಿ ಲೋಗ್’ ಗಳ ಆದೇಶವೇ ಇಲ್ಲಿ ಜಾರಿಗೊಳ್ಳುತ್ತಿತ್ತು. ಅಪರಾಧ ಸುದ್ದಿಗಳು ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿತ್ತು. ದ್ವೇಷ ಭಾಷಣಕಾರರ ಅಟ್ಟಹಾಸ ಮಂಗಳೂರಿನಲ್ಲಿ ಮುಗಿಲು ಮುಟ್ಟುತ್ತಿತ್ತು. ಮತೀಯ ಗಲಭೆಗಳಿಗೆ ಕರಾವಳಿ ಕುಖ್ಯಾತಿ ಪಡೆದಿತ್ತು. ಚೂರಿಗಳದ್ದೇ ಅಬ್ಬರ, ಅಮಾಯಕರ…

    Continue Reading

  • ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ – ಆರೋಪಿಯ ಬಂಧನ
    ,

    ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ – ಆರೋಪಿಯ ಬಂಧನ

    ಮಂಗಳೂರು: 2026 ನೇ ಜನವರಿ ತಿಂಗಳಿನಲ್ಲಿ ಮಂಗಳೂರು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಕಿರಾತ್ (ಕುರಾನ್ ಸ್ಫಟಿಸುವ) ಸ್ಪರ್ದೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಾಗ ಗಣೇಶ್ ಪ್ರಸಾದ್ ಎಂಬಾತನು ತನ್ನ ಅಕೌಂಟ್ ನಲ್ಲಿ ” ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂದು ಪ್ರಚೋದನಕಾರಿಯಾಗಿ ಕಮೆಂಟ್ ಹಾಕಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಅ.ಕ್ರ. 15/2026 ಕಲಂ 196 ಬಿ.ಎನ್.ಎಸ್ ಮತ್ತು 66 ಐಟಿ…

    Continue Reading

  • ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಕರೆದ ಪ್ರೊಫೆಸರ್
    ,

    ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಕರೆದ ಪ್ರೊಫೆಸರ್

    ಬೆಂಗಳೂರು: ನಗರದ ಪ್ರತಿಷ್ಠಿತ PES ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ‘ಭಯೋತ್ಪಾದಕ’ (Terrorist) ಎಂದು ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಪ್ರೊಫೆಸರ್ ಅವರನ್ನು ಅಮಾನತುಗೊಳಿಸಿದೆ. ಏನಿದು ಘಟನೆ? ಮಾಹಿತಿಯ ಪ್ರಕಾರ, ವಿದ್ಯಾರ್ಥಿ ಅಫ್ಫಾನ್ ತರಗತಿಯ ನಡುವೆ ಹೊರಗೆ ಹೋಗಲು ಅನುಮತಿ ಕೇಳಿದ್ದನು. ಇದರಿಂದ ಆಕ್ರೋಶಗೊಂಡ ಪ್ರೊಫೆಸರ್ ಡಾ. ಮುರಳೀಧರ್ ದೇಶಪಾಂಡೆ, ವಿದ್ಯಾರ್ಥಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತನ…

    Continue Reading

  • ಬೆಳ್ತಂಗಡಿ: ಅಕ್ರಮ ಕೋಳಿ ಅಂಕ ಅಡ್ಡೆಗೆ ಪೊಲೀಸರ ದಾಳಿ..!!
    ,

    ಬೆಳ್ತಂಗಡಿ: ಅಕ್ರಮ ಕೋಳಿ ಅಂಕ ಅಡ್ಡೆಗೆ ಪೊಲೀಸರ ದಾಳಿ..!!

    ಬೆಳ್ತಂಗಡಿ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮುರದಮೇಲು ಎಂಬಲ್ಲಿ ಮಾ.27 ರಂದು ಸುಮಾರು ಬೆಳಿಗ್ಗೆ 10:15 ಗಂಟೆ ವೇಳೆಗೆ ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕವಾಗಿ ಬಾಳು (ಸಣ್ಣ ಕತ್ತಿ) ಕಟ್ಟಿ ಅವುಗಳನ್ನು ಎದುರು-ಬದುರಾಗಿ ಹಾರಿಸಿ ಕಾದಾಟ ಮಾಡಲು ಬಿಟ್ಟು ಹಣವನ್ನು ಪಣವಾಗಿಟ್ಟುಕೊಂಡು ಸಂಘಟನಾತ್ಮಕವಾಗಿ ಕೋಳಿ ಅಂಕ ಜೂಜಾಟವಾಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟ‌ರ್ ಸರ್ಮಥ್ರ ಆರ್ ಗಾಣಿಗೇರ ನೇತೃತ್ವದ ಎಎಸ್‌ಐ…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed