Category: ಬ್ರೇಕಿಂಗ್ ನ್ಯೂಸ್

  • ಮದುವೆ ನಿರಾಕರಿಸಿದ್ದಕ್ಕೆ ಹುಡುಗಿಗೆ ಬಲವಂತವಾಗಿ ಹೆಚ್‌ಐವಿ ರಕ್ತ ಇಂಜೆಕ್ಟ್ ಮಾಡಿದ ಪಾಪಿ!
    ,

    ಮದುವೆ ನಿರಾಕರಿಸಿದ್ದಕ್ಕೆ ಹುಡುಗಿಗೆ ಬಲವಂತವಾಗಿ ಹೆಚ್‌ಐವಿ ರಕ್ತ ಇಂಜೆಕ್ಟ್ ಮಾಡಿದ ಪಾಪಿ!

    ಮದುವೆ ನಿಶ್ಚಯವಾದ ನಂತರ ಮಗನಿಗೆ ಹೆಚ್‌ಐವಿ (HIV) ಇರುವುದು ತಿಳಿದು ಹುಡುಗಿಯ ಕಡೆಯವರು ಸಂಬಂಧ ನಿರಾಕರಿಸಿದ್ದಕ್ಕೆ, ಆಕ್ರೋಶಗೊಂಡ ಯುವಕನೊಬ್ಬ ತನ್ನದೇ ಹೆಚ್‌ಐವಿ ಪೀಡಿತ ರಕ್ತವನ್ನು ಯುವತಿಯ ದೇಹಕ್ಕೆ ಇಂಜೆಕ್ಷನ್ ಮೂಲಕ ಚುಚ್ಚಿದ ಅಮಾನವೀಯ ಘಟನೆ ಹೈದರಾಬಾದ್‌ನ ಪೋಚರಂನಲ್ಲಿ ನಡೆದಿದೆ. ​ಘಟನೆಯ ಭೀಕರ ವಿವರಗಳು:​ಸಂಬಂಧ ಕ್ಯಾನ್ಸಲ್ ಆಗಿದ್ದೇಕೆ?: ಆರೋಪಿ ಮನೋಹರ್ (24) ಮತ್ತು ಸಂತ್ರಸ್ತ ಯುವತಿ ಸಂಬಂಧಿಕರಾಗಿದ್ದು, ಇವರಿಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಆದರೆ, ಮನೋಹರ್ ಪೋಷಕರು ಹೆಚ್‌ಐವಿಯಿಂದ ಮೃತಪಟ್ಟಿದ್ದರಿಂದ ಸಂಶಯಗೊಂಡ ಯುವತಿಯ ತಂದೆ, ಮನೋಹರ್‌ನನ್ನು ರಕ್ತ ಪರೀಕ್ಷೆಗೆ ಒಳಪಡಿಸಿದ್ದರು.…

    Continue Reading

  • ಉಡುಪಿ ಜಿಲ್ಲೆಯ ಮೂವರಿಗೆ ಗಡಿಪಾರು ಆದೇಶ..!!
    ,

    ಉಡುಪಿ ಜಿಲ್ಲೆಯ ಮೂವರಿಗೆ ಗಡಿಪಾರು ಆದೇಶ..!!

    ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯುಳ್ಳ ಸಂದೇಶ, ಸುಶಾಂತ್ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಜಬ್ಬಾರ್ ಹುಸೇನ್ ಎಂಬುವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಪೊಲೀಸ್ ಅಧೀಕ್ಷಕರು ಗಡಿಪಾರು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಕಾಪು ನಡ್ಸಾಲು ನಿವಾಸಿ ಜಬ್ಬಾರ್ ಹುಸೈನ್ ಎಂಬುವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದ್ದು, ಈತನ ವಿರುದ್ಧ ಉಡುಪಿ,  ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಇದುವರೆಗೆ ಒಟ್ಟು…

    Continue Reading

  • ಜಿಲ್ಲಾಧಿಕಾರಿ, ಎಡಿಸಿ ಸಹಿ ಫೋರ್ಜರಿ : 15 ಲಕ್ಷ ರೂ. ನಕಲಿ ಬಿಲ್ ಸೃಷ್ಟಿಸಿದ್ದ ಐವರು ಆರೋಪಿಗಳು ಅರೆಸ್ಟ್
    ,

    ಜಿಲ್ಲಾಧಿಕಾರಿ, ಎಡಿಸಿ ಸಹಿ ಫೋರ್ಜರಿ : 15 ಲಕ್ಷ ರೂ. ನಕಲಿ ಬಿಲ್ ಸೃಷ್ಟಿಸಿದ್ದ ಐವರು ಆರೋಪಿಗಳು ಅರೆಸ್ಟ್

    ರಾಜ್ಯದಲ್ಲಿ ಮತ್ತೊಂದು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಜಿಲ್ಲಾಧಿಕಾರಿ ಹಾಗೂ ಎಡಿಸಿಯವರ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರನ್ನು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಹಾಗೂ ವೆಂಕಟೇಶ್ ಎಂಬ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಎ1 ಆರೋಪಿ ಸೈಯದ್ ಪರಾರಿಯಾಗಿದ್ದು, ಇನ್ನುಳಿದ ಐವರನ್ನು ಬಂಧಿಸಿದ್ದಾರೆ.…

    Continue Reading

  • ಎಚ್ಚರ..!! ಎಚ್ಚರ..!! ಮೂಡುಬಿದಿರೆ: ವಾಟ್ಸಾಪ್ ಗ್ರೂಪ್‌ಗಳಲ್ಲಿ ಡಿ ಮಾರ್ಟ್ ಹೆಸರಿನ ಫೇಕ್ ಲಿಂಕ್ ವೈರಲ್
    ,

    ಎಚ್ಚರ..!! ಎಚ್ಚರ..!! ಮೂಡುಬಿದಿರೆ: ವಾಟ್ಸಾಪ್ ಗ್ರೂಪ್‌ಗಳಲ್ಲಿ ಡಿ ಮಾರ್ಟ್ ಹೆಸರಿನ ಫೇಕ್ ಲಿಂಕ್ ವೈರಲ್

    ಮೂಡುಬಿದಿರೆ : ಮೂಡುಬಿದಿರೆ ಹಾಗೂ ಸುತ್ತಮುತ್ತಲ ಪ್ರದೇಶಗಳ ವಾಟ್ಸಾಪ್ ಗುಂಪುಗಳಲ್ಲಿ “ಡಿ-ಮಾರ್ಟ್ ರೆಡಿ – ಮೆಗಾ ಗಿಫ್ಟ್” ಎಂಬ ಶೀರ್ಷಿಕೆಯ ಸಂದೇಶವೊಂದು ವೇಗವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಲಾಗಿದೆ. ವಾಟ್ಸಾಪ್ ಮೂಲಕ ಬರುತ್ತಿರುವ ಈ ಸಂದೇಶದಲ್ಲಿ “ಡಿ-ಮಾರ್ಟ್ ಎಲ್ಲರಿಗೂ ವಿಶೇಷ ಉಡುಗೊರೆಗಳನ್ನು ನೀಡುತ್ತಿದೆ” ಎಂದು ಹೇಳಿ, ಒಂದು ಅನುಮಾನಾಸ್ಪದ ಲಿಂಕ್ ನೀಡಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿದ ಬಳಿಕ ಬಳಕೆದಾರರಿಂದ ವೈಯಕ್ತಿಕ ಮಾಹಿತಿ, ಫೋನ್ ಸಂಖ್ಯೆ ಸೇರಿದಂತೆ ವಿವಿಧ ವಿವರಗಳನ್ನು ಕೇಳಲಾಗುತ್ತದೆ. ಇದರಿಂದ ಬ್ಯಾಂಕ್ ಖಾತೆ…

    Continue Reading

  • ಒಳ ಉಡುಪಿನಲ್ಲಿಟ್ಟು ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದ ವಾರ್ಡನ್ ಅರೆಸ್ಟ್!!
    ,

    ಒಳ ಉಡುಪಿನಲ್ಲಿಟ್ಟು ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದ ವಾರ್ಡನ್ ಅರೆಸ್ಟ್!!

    ಹಲವು ತಿಂಗಳುಗಳಿಂದ ಒಂದಲ್ಲಾ ಅಕ್ರಮಗಳಿಂದ ಒಂದು ರೀತಿಯ ಸುದ್ದಿಯಾಗುತ್ತಿರುವ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಗಾಂಜಾ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನಲ್ಲಿರುವ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಪ್ರಕಾಶ್ ಗಾವಡೆ ಅವರನ್ನು ಬಂಧಿಸಲಾಗಿದೆ. ಮಾರ್ಚ್ 9 ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ನಿಯೋಜನೆಗೊಂಡಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗ-2ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ…

    Continue Reading

  • ಮೂಡಬಿದ್ರೆ: ಮಹಿಳೆ ಸಂಶಯಾಸ್ಪದ ಸಾವು..!! ಪತಿ ವಿರುದ್ಧ ದೂರು
    ,

    ಮೂಡಬಿದ್ರೆ: ಮಹಿಳೆ ಸಂಶಯಾಸ್ಪದ ಸಾವು..!! ಪತಿ ವಿರುದ್ಧ ದೂರು

    ಮೂಡಬಿದ್ರೆಯ ಪುತ್ತಿಗೆ ಗ್ರಾಮದ ವಿದ್ಯಾಗಿರಿ ಬಳಿಯ ಬಾಡಿಗೆ ವಸತಿಗೃಹದಲ್ಲಿ ವಾಸವಿದ್ದ ಸವಿತಾ ಎಂಬ ಮಹಿಳೆಯ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯ ವಿರುದ್ಧ ದೂರು ದಾಖಲಾಗಿದೆ.  ಸವಿತಾ ಸಾವಿಗೆ ಪತಿ ದಿನೇಶ್ ಕಾರಣ ಎಂದು ಆರೋಪಿಸಿ ಮೃತಳ ಸಹೋದರಿ ಶಶಿಕಲಾ ಬುಧವಾರ ಮೂಡುಬಿದಿರೆ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾದ ದಿನೇಶ್ ಮತ್ತು ಪತ್ನಿ ಸವಿತಾ ತಮ್ಮ ಇಬ್ಬರು ಮಕ್ಕಳೊಂದಿಗೆ ಹಲವು ಸಮಯದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಮನೆಯಲ್ಲಿ ನಡೆದ…

    Continue Reading

  • ಬೆಳ್ತಂಗಡಿ: ಶಿಬಾಜೆ ಶ್ರೀಧರ ಕೊಲೆ ಪ್ರಕರಣ- ದೂರುದಾರ ವಿಷ ಸೇವಿಸಿ ಆತ್ಮ*ಹ*ತ್ಯೆಗೆ ಯತ್ನ
    ,

    ಬೆಳ್ತಂಗಡಿ: ಶಿಬಾಜೆ ಶ್ರೀಧರ ಕೊಲೆ ಪ್ರಕರಣ- ದೂರುದಾರ ವಿಷ ಸೇವಿಸಿ ಆತ್ಮ*ಹ*ತ್ಯೆಗೆ ಯತ್ನ

    ಬೆಳ್ತಂಗಡಿ: ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ಮರುತನಿಖೆ ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿರುವ ಬೆನ್ನಲ್ಲೇ ದೂರುದಾರ ಫಾರ್ಮ್‌ಹೌಸ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಕುರಿತು ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್‌ನಲ್ಲಿ 2022 ಡಿಸೆಂಬರ್‌ 18 ರಂದು ಶ್ರೀಧರ (30) ಕೊಲೆ ಪ್ರಕರಣದಲ್ಲಿ ದೂರುದಾರನಾಗಿರುವ ಹರೀಶ್‌ ಬಿ ಮುಗೇರ ಮಾ 11 ರಂದು ರಾತ್ರಿ 9.45 ಕ್ಕೆ ಶಿಬಾಜೆಯ ಸಾರಾ ಫಾರ್ಮ್‌ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಕೂಡಲೇ ಮಂಗಳೂರು ಆಸ್ಪತ್ರೆಗೆ…

    Continue Reading

  • ವಿಟ್ಲ: ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ದಂಧೆ, ನಾಲ್ವರು ಸೆರೆ..!!
    ,

    ವಿಟ್ಲ: ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ದಂಧೆ, ನಾಲ್ವರು ಸೆರೆ..!!

    ವಿಟ್ಲ: ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ಸುಮಾರು ರೂ.1,79,700 ಮೌಲ್ಯದ 17.97 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಶ್ರಫ್ ಜಿ ಎಂಬಾತ ತನ್ನ ಮನೆಯಲ್ಲಿ ಎಂಡಿಎಂಎ ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ…

    Continue Reading

  • ಮಂಗಳೂರು: ಪ್ಲಾಸ್ಟಿಕ್‌ ಚೀಲ, ಕವರ್‌ಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ನಿಷೇಧ- ಎಡಿಸಿ ಸೂಚನೆ
    ,

    ಮಂಗಳೂರು: ಪ್ಲಾಸ್ಟಿಕ್‌ ಚೀಲ, ಕವರ್‌ಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ನಿಷೇಧ- ಎಡಿಸಿ ಸೂಚನೆ

    ಮಂಗಳೂರು: ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ. ಪ್ಲಾಸ್ಟಿಕ್‍ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ಬಿಸಿ ಆಹಾರಕ್ಕೆ ಸೇರಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿವೆ. ಹೋಟೆಲ್, ಕ್ಯಾಂಟೀನ್‍ಗಳಿಂದ ಹೆಚ್ಚಾಗಿ ಕಾರ್ಮಿಕರು ಅಥವಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬಿಸಿ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್, ನ್ಯೂಸ್ ಪೇಪರ್‌ಗಳಲ್ಲಿ ಬಿಸಿ ಆಹಾರ ಪದಾರ್ಥಕ್ಕೆ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಲು…

    Continue Reading

  • ಮಂಗಳೂರು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಶವವಾಗಿ ಕೆರೆಯಲ್ಲಿ ಪತ್ತೆ..!!
    ,

    ಮಂಗಳೂರು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಶವವಾಗಿ ಕೆರೆಯಲ್ಲಿ ಪತ್ತೆ..!!

    ಮಂಗಳೂರು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬನ ಶವ ಕೊಣಾಜೆ ಠಾಣಾ ವ್ಯಾಪ್ತಿಯ ಸೋಮೇಶ್ವರ ಕೆರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಕೊಣಾಜೆ ಗ್ರಾಮ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ ಎಂಬವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಮೃತ ಯುವಕ. ವಿವೇಕ್ ಶೆಟ್ಟಿಗಾರ್ ಅವರು ಮಂಗಳೂರಿನ ಕದ್ರಿ ಬಳಿ ಇರುವ ವೇದ ಮೊರ್ಟಾಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದರು. ಅದರಂತೆ ಮಾರ್ಚ್ 9ರಂದು…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed