Category: ಕ್ರೈಂ ಸುದ್ದಿ
Your blog category
-

ಕಚೇರಿಯಲ್ಲೇ ಮಹಿಳೆಯರ ಜೊತೆಗೆ ಡಿಜಿಪಿ ರಾಸಲೀಲೆ..!! ವಿಡಿಯೋ ವೈರಲ್
ಬೆಂಗಳೂರು: ನಟಿ ರನ್ಯಾ ರಾವ್ ಅವರ ತಂದೆ, ಡಿಜಿಪಿ ಡಾ.ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲೇ ರಾಸಲೀಲೆಯಾಡಿದಂತ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಕಿಂಗ್ ಎನ್ನುವಂತೆ ಡಿಜಿಪಿ ಡಾ.ರಾಮಚಂದ್ರ ರಾವ್ ಅವರು ತಮ್ಮ ಡಿಜಿಪಿ ಕಚೇರಿಯಲ್ಲೇ ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ರಾಸಲೀಲೆ ಆಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೈರಲ್ ಆಗಿರುವಂತ ವೀಡಿಯೋಗಳಲ್ಲಿ ಡಿಜಿಪಿ ಡಾ.ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಕುಳಿತು, ಸಮವಸ್ತ್ರದಲ್ ಹಲವು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರೋದನ್ನು ಕಾಣಬಹುದಾಗಿದೆ. ಹೀಗೆ ಪ್ರಸಿದ್ಧ ಮಾಡೆಲ್ ಒಬ್ಬರ ಜೊತೆಗೆ ಡಿಜಿಪಿ ಡಾ.ರಾಮಚಂದ್ರರಾವ್…
-

ಮಂಗಳೂರು: ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ಯುವಕನ ಬಂಧನ
ಮಂಗಳೂರು: ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಕದ್ರಿ ಪೊಲೀಸ್ ಠಾಣೆಯ ಅಧಿಕಾರಿಗಳು ಯುವಕನೊಬ್ಬನನ್ನು ಬಂಧಿಸಿ ಎಂಡಿಎಮ್ಎ (MDMA) ಮಾದಕವಸ್ತು ಹಾಗೂ ಬೈಕ್ ವಶಪಡಿಸಿಕೊಂಡಿರುವ ಘಟನೆ ಜನವರಿ 17, 2026ರಂದು ನಡೆದಿದೆ. ಬಂಧಿತ ಆರೋಪಿಯನ್ನು ಜೂಡ್ ಮಾಥ್ಯೂ (20) ಎಂದು ಗುರುತಿಸಲಾಗಿದ್ದು, ಆತನು ಮನೋಜ್ ಜೊಸೆಫ್ ಅವರ ಪುತ್ರ. ಆರೋಪಿಯು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ, ಚುನಯಮಕ್ಕಿಲ್ ಹೌಸ್ ವಾಸಿಯಾಗಿದ್ದಾನೆ. ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ, ಮಂಗಳೂರು ಪೂರ್ವ ಪೊಲೀಸ್…
-

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ 3 ಮೊಬೈಲ್ ಜೊತೆ ಸಿಮ್ ಹಾಗೂ ಚಾರ್ಜರ್ ಪತ್ತೆ…!
ಮಂಗಳೂರು: ಬೆಂಗಳೂರಿನಲ್ಲಿ ಬಂದೀಖಾನೆ ಡಿಜಿಪಿಯಾಗಿ ಅಲೋಕ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಂದಿಖಾನೆ ಭದ್ರತೆಯನ್ನು ಹೆಚ್ಚುಗೊಳಿಸಲಾಗಿದೆ. ಮಂಗಳೂರಿನ ಬಂದೀಖಾನೆಗೂ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿ ತೆರಳಿದ್ದರು. ಜನವರಿ 14ರಂದು ತಡರಾತ್ರಿ 10.55ರಿಂದ 11.50ರ ನಡುವೆ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಜೈಲಿನ ಅಧಿಕಾರಿ ಮತ್ತು ಸಿಬಂದಿಯೊಂದಿಗೆ ಕಾರಾಗೃಹದ ಒಳಗಡೆ ತಪಾಸಣೆ ನಡೆಸಿರುವ ವೇಳೆ ‘ಎ’ ವಿಭಾಗದ 3ನೇ ಕೊಠಡಿಯಲ್ಲಿ ಸಿಮ್ ಸಹಿತ ವೀವೋ ಮೊಬೈಲ್ ಫೋನ್, ಕಪ್ಪು ಬಣ್ಣದ ಎಚ್ ಡಿಎಂ…
-

ಉಳ್ಳಾಲ: ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ- ಯುವಕನ ಬಂಧನ
ಉಳ್ಳಾಲ: ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವು ಯುವಕನೊಬ್ಬನನ್ನು ಬಂಧಿಸಿ ನಿಷೇಧಿತ ಮಾದಕವಸ್ತು ವಶಪಡಿಸಿಕೊಂಡಿರುವ ಘಟನೆ ಜನವರಿ 16, 2026ರಂದು ನಡೆದಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ, ಉಳ್ಳಾಲ ತಾಲೂಕು ಮುನ್ನೂರು ಗ್ರಾಮದ ರಾಣಿಪುರ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ–ಸಜಿಪ–ಮುನ್ನೂರು ನಿವಾಸಿ ಇಮ್ಮಿಯಾಜ್ @ ಮೊಹಮ್ಮದ್ ಇಮ್ಮಿಯಾಜ್ ಎಂಬಾತನು ಎಂಡಿಎಮ್‌ಎ ಮಾದಕವಸ್ತುವನ್ನು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ತನ್ನ ಗಿರಾಕಿಗಳಿಗೆ…
-

ಉಡುಪಿ: ಜಾನುವಾರು ಹತ್ಯೆ ಪ್ರಕರಣ- ಇಬ್ಬರು ಆರೋಪಿಗಳ ಬಂಧನ
ಉಡುಪಿ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಜಾನುವಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಮೂಡು ತೆರಾರು ಗ್ರಾಮದ ಗಂಜೀಮಠ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಕೆಮ್ಮಣ್ಣು ಹೂಡೆ ನಿವಾಸಿಗಳಾದ ವಸಿಂ ಅಕ್ರಮ್(32) ಹಾಗೂ ಸೈಫನ್ ಮುಕ್ತಸರ ಬಂಧಿತ ಆರೋಪಿಗಳು. ಇವರಿಬ್ಬರ ವಿರುದ್ಧ ಹೆಬ್ರಿ ಠಾಣೆಯಲ್ಲಿ ಅ.ಕ್ರ :02/2026 U/S 303(2) 3(5) ಬಿ ಏನ್ ಎಸ್ ಮತ್ತು ಕಲಂ 11(1)(D) ಪ್ರಾಣಿ ಹಿಂಸಾ ಪ್ರತಿಬಂದಕ ಕಾಯ್ದೆ ಮತ್ತು ಕಲಂ: 4,5,7,12 ಕರ್ನಾಟಕ…
-

ಉಡುಪಿ: ಅಕ್ರಮ ಮರಳು , ಕಲ್ಲು , ಜಲ್ಲಿ ಸಾಗಟದ ವಿರುದ್ಧ ಪೊಲೀಸರ ಕಾರ್ಯಾಚರಣೆ
ಉಡುಪಿ:ಕಲ್ಲು, ಮಣ್ಣು, ಜಲ್ಲಿ ಮತ್ತು ಮರಳಿನಂತಹ ಸಣ್ಣ ಖನಿಜಗಳ ಸಾಗಟಕ್ಕೆ ಸಂಬಂಧಿಸಿದ ಉಲ್ಲಂಘನೆಗಳನ್ನು ತಡೆಯಲು ಉಡುಪಿ ಜಿಲ್ಲಾ ಪೊಲೀಸರು ಮಂಗಳವಾರ ವಿಶೇಷ “ಜಾಗೃತಿ ಮತ್ತು ಜಾರಿ” ಅಭಿಯಾನವನ್ನು ನಡೆಸಿದರು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಜಿಲ್ಲೆಯಾದ್ಯಂತ 832 ವಾಹನಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ವಿವಿಧ ನಿಯಮ ಉಲ್ಲಂಘನೆಗಾಗಿ 182 ವಾಹನ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.ಇದಲ್ಲದೆ, ಓವರ್‌ಲೋಡ್ ಮತ್ತು ಇತರ ಅಪರಾಧಗಳಿಗಾಗಿ 66 ವಾಹನಗಳಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು, ಇದರ ಪರಿಣಾಮವಾಗಿ 22,500 ರೂ. ದಂಡ…
-

ದೆಹಲಿ ಪೊಲೀಸ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡುವೆ ಗುಂಡಿನ ಚಕಮಕಿ : ಇಬ್ಬರ ಬಂಧನ
ಬುಧವಾರ ರಾತ್ರಿ ದೆಹಲಿ ಪೊಲೀಸರು ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಶೂಟರ್ ಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್ ಕೌಂಟರ್ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಇಬ್ಬರು ಶೂಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಶೂಟರ್ ಗಳಲ್ಲಿ ಒಬ್ಬರ ಕಾಲಿಗೆ ಗುಂಡೇಟಿನ ಗಾಯವಾಗಿದೆ. ಇನ್ನೊಬ್ಬ ಶೂಟರ್ ಅಪ್ರಾಪ್ತ ವಯಸ್ಕ. ಇಬ್ಬರೂ ಶೂಟರ್ ಗಳು ದೆಹಲಿಯ ಪಶ್ಚಿಮ್ ವಿಹಾರ್ ಮತ್ತು ವಿನೋದ್ ನಗರ ಪ್ರದೇಶಗಳಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಎನ್ ಕೌಂಟರ್ ಬಗ್ಗೆ…
-

ಮದ್ವೆಯಾಗೋದಾಗಿ ನಂಬಿಸಿ ಲವ್ ಸೆಕ್ಸ್ ದೋಖಾ : ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನ
ಬೆಂಗಳೂರಿನಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಯುವತಿಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟಿದ್ದಾನೆ. ಈ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು 26 ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ ಮಹಿಳಾ ಪೊಲೀಸ್ ಠಾಣೆ ಬಳಿ ಈ ಒಂದು ಘಟನೆ ಸಂಭವಿಸಿದೆ. ಹೌದು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಮಹಿಳಾ ಪೊಲೀಸ್ ಠಾಣೆ ಬಳಿ ಮಾತ್ರೆ ಸೇವಿಸಿ ಪವಿತ್ರ ಬಾಯಿ (26) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕನಕಪುರ ತಾಲೂಕಿನ ಗಟ್ಟಿಗುಂದ ಗ್ರಾಮದ ನಿವಾಸಿಯಾಗಿರುವ ಪವಿತ್ರಬಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.…
-

ಮಕ್ಕಳಾಗಲಿಲ್ಲ ಎಂಬ ಹೊಟ್ಟೆಕಿಚ್ಚು : 6 ವರ್ಷದ ಬಾಲಕಿಯನ್ನ ಕ್ರೂರವಾಗಿ ಹತ್ಯೆಗೈದ ಮಲತಾಯಿ
ಗಾಜಿಯಾಬಾದ್ :ವೇವ್ ಸಿಟಿ ಪೊಲೀಸ್ ಠಾಣೆ ಪ್ರದೇಶದ ದಾಸ್ನಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತನಗೆ ಮಕ್ಕಳಿಲ್ಲ ಎಂದು ಅಸೂಯೆಟ್ಟ ಮಲತಾಯಿ ಆರು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾಳೆ. ಆಕೆಯ ಬಟ್ಟೆಗಳು ಕೊಳಕಾಗಿದ್ದವು ಎಂಬ ನೆಪವೊಡ್ಡಿ ಹಲ್ಲೆ ನಡೆಸಿ ಕೊಂದಿದ್ದಕ್ಕಾಗಿ ಪೊಲೀಸರು ಬುಧವಾರ ಮಲತಾಯಿ ಮತ್ತು ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಅಸೂಯೆ ಕೊಲೆಗೆ ಕಾರಣವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ಮೊದಲ ಹೆಂಡತಿಯಿಂದ ತನಗೆ ಮೂವರು ಮಕ್ಕಳಿದ್ದಾರೆ ಎಂದು ಹೇಳಿದ್ದಾನೆ. ತನ್ನ ಎರಡನೇ ಹೆಂಡತಿಯಿಂದ ತನಗೆ ಮಕ್ಕಳಿಲ್ಲ. ಇದರಿಂದಾಗಿ,…
-

ಕಾರ್ಕಳ: ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ಬಿದ್ದು ಯುವಕ ಮೃತ್ಯು!
ಕಾರ್ಕಳ: ಬೃಹತ್ ಗಾತ್ರದ ವಿದ್ಯುತ್ ಕಂಬ ಅಳವಡಿಸುವ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಬಜಗೋಳಿಯ ಮುಡ್ರಾಲು ಕ್ರಾಸ್ ನಲ್ಲಿ ನಡೆದಿದೆ. ಯುವಕ 11 ಮೀಟರ್ ಎತ್ತರದ ಬೃಹತ್ ವಿದ್ಯುತ್ ಕಂಬವನ್ನು ಏರಿದ್ದ. ಈ ವೇಳೆ ಮಳೆ ಸುರಿಯುತ್ತಿದ್ದು, ಜೊತೆಗೆ ಸಿಡಿಲು ಬಡಿದ ಆಘಾತದಿಂದಾಗಿ ಯುವಕ ಕೆಳಕ್ಕೆ ಬಿದ್ದು, ಪ್ರಾಣಕಳೆದುಕೊಂಡಿದ್ದಾನೆ. ಮೃತ ಯುವಕ ಅಸ್ಸಾಂ ಮೂಲದವನೆಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











