Category: ಕರಾವಳಿ
-

ಮಂಗಳೂರು: ಪರವಾನಿಗೆ ಪತ್ರ ಇಲ್ಲದೆ ನಂದಿಹಿಲ್ಸ್ ಕಟ್ಟಡ ಬಳಕೆ- ಮ.ನ.ಪಾ ಎಚ್ಚರಿಕೆ
ಮಂಗಳೂರು: ನಂದಿಗುಡ್ಡೆ ವೃತ್ತದ ಬಳಿ ಇರುವ ನಂದಿ ಹಿಲ್ಸ್ ಬಹುಮಹಡಿ ಕಟ್ಟಡವು ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಕಟ್ಟಡವು ಪೂರ್ಣ ಪ್ರಮಾಣದ ಲ್ಲಿ ಕಾಮಗಾರಿಯಾಗದೆ. ಕಟ್ಟಡ ಪರವಾನಿಗೆ ಪತ್ರ ಇಲ್ಲದೆ ಕಟ್ಟಡವು ವಾಣಿಜ್ಯ ವ್ಯವಹಾರಕ್ಕೆ ಹಲವಾರು ಶಾಪ್ ಗಳನ್ನು ಈಗಾಗಲೇ ನೀಡಲಾಗಿದ್ದು, ಹೋಟೆಲ್, ಬ್ಯೂಟಿ ಪಾರ್ಲರ್ ಸೇರಿದಂತೆ ಅನೇಕ ಶಾಪ್ ಗಳು ತೆರೆದು ವ್ಯವಹಾರ ನಡೆಯುತ್ತಿದೆ. ಕಟ್ಟಡದ ಒಳಚರಂಡಿವು ಅಕ್ರಮವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ತಕ್ಷಣ ಎಲ್ಲಾ ಶಾಪ್ ಗಳು ಮುಚ್ಚಿ ಕಟ್ಟಡದ ಎಲ್ಲಾ…
-

ಬೆಳ್ತಂಗಡಿ: ನಕ್ಸಲ್ ಪ್ರಕರಣ ಆರೋಪಿ ಜಯಣ್ಣ ಕೋರ್ಟ್‌ಗೆ ಹಾಜರು
ಬೆಳ್ತಂಗಡಿ: ಕುತ್ತೂರಿನ ಲಿಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಕ್ಸಲ್ ಸಂಬಂಧಿತ ಕರಪತ್ರ ಹಂಚಿಕೆ ಹಾಗೂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಜಾನ್ ಅಲಿಯಾಸ್ ಜಯಣ್ಣ ರಾಯಚೂರು ಅವರು ಫೆಬ್ರವರಿ 19ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಬಾಡಿ ವಾರಂಟ್ ಮೂಲಕ ಕೇರಳ ಪೊಲೀಸರು ಜಯಣ್ಣರನ್ನು ಕೋರ್ಟ್‌ಗೆ ಹಾಜರುಪಡಿಸಿದರು.ಜಯಣ್ಣ ಪರ ವಕೀಲ ಶಿವಕುಮಾರ್ ಹಾಗೂ ಸರ್ಕಾರದ ಪರ ವಕೀಲ ದಿವ್ಯರಾಜ್ ಹೆಗ್ಡೆ ನ್ಯಾಯಾಲಯಕ್ಕೆ ಹಾಜರಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.10ಕ್ಕೆ ವಿಚಾರಣೆ ಮುಂದೂಡಲಾಗಿದೆ
-

ಮಂಗಳೂರು: ನೇಣು ಬಿಗಿದು ಯುವಕ ಆತ್ಮಹತ್ಯೆ
ಮಂಗಳೂರು: ಮಂಗಳೂರಿನಲ್ಲಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಕಾಸರಗೋಡು ಮೂಲದ ಯುವಕನೊಬ್ಬ ಕೈಕೊಯ್ದುಕೊಂಡು ಬಳಿಕ ಪ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕದ್ರಿ ಶಿವಭಾಗ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮೃತರನ್ನು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಪೆರುವಾಡ್ ನಿವಾಸಿ ರೋಶನ್ (22) ಎಂದು ಗುರುತಿಸಲಾಗಿದೆ. ಕದ್ರಿ ಪಾರ್ಕ್ ಬಳಿಯ ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಈತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ಮಂಗಳವಾರ ರಾತ್ರಿ ತನ್ನ ಕೈಯನ್ನು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ 10…
-

ಮೊಂಟೆಪದವು ಭೂ ಕುಸಿತ ಪ್ರಕರಣ: ಮಾನವ ಹಕ್ಕುಗಳ ಆಯೋಗದೆದುರು ಭಾವುಕರಾದ ಸಂತ್ರಸ್ತೆ ಅಶ್ವಿನಿ.
ಮಂಗಳೂರು: ಮಂಜನಾಡಿಯ ಮೊಂಟೆಪದವು ಎಂಬಲ್ಲಿ 2025ರ ಮೇ 30ರಂದು ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಸಿಲುಕಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಎಂಬವರು ತನ್ನ ತಾಯಿ ಪುಷ್ಪಾವತಿ ಜತೆ ಮಾನವ ಹಕ್ಕುಗಳ ಆಯೋಗದೆದುರು ನ್ಯಾಯಕ್ಕಾಗಿ ಕಣ್ಣೀರಿಟ್ಟ ಘಟನೆ ಬುಧವಾರ ನಡೆಯಿತು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶ್ಯಾಂ ಭಟ್ ಮತ್ತು ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕ ದೂರುಗಳ ವಿಚಾರಣೆಯನ್ನು ಹಮ್ಮಿಕೊಂಡಿದ್ದರು. ಇದಕ್ಕಾಗಿ ತಾಯಿ ಜೊತೆ ಖಾಸಗಿ ಆಂಬುಲೆನ್ಸ್ ನಲ್ಲಿ ಆಗಮಿಸಿದ್ದ…
-

ಬಂಟ್ವಾಳ: ವಿದ್ಯುತ್ ಮೀಟರ್ ರೀಡರ್‌ಗೆ ನಾಯಿ ಕಡಿತ
ಬಂಟ್ವಾಳ : ವಿದ್ಯುತ್ ಮೀಟರ್ ರೀಡರ್ ಮೇಲೆ ಸಾಕು ನಾಯಿ ದಾಳಿ ಮಾಡಿ ಕೈಗೆ ಗಂಭೀರ ಗಾಯಗೊಳಿಸಿದ ಘಟನೆ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ನಡೆದಿದೆ. ಮೂಲತಃ ಮುಡಿಪು ನಿವಾಸಿ, ಮೀಟರ್ ರೀಡರ್ ಸಿಬ್ಬಂದಿ ಮೇಲ್ವಿಚಾರಕ ಸಂಪತ್ ಆರ್.ಶೆಟ್ಟಿ ಸೋಮವಾರ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಮನೆಗಳ ಮೀಟರ್ ದಾಖಲಿಸಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ನ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ನಡೆದಿದೆ. ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ಸಮೇತ ಓಡಿ ಬಂದು ದಾಳಿ ಮಾಡಿದ್ದು, ಬಲ…
-

ಮಂಗಳೂರು: ಬಡ ವ್ಯಾಪಾರಿಗಳಿಗೆ ನಡೆಸುವ ದಬ್ಬಾಳಿಕೆ ಅನಧಿಕೃತ ಕಟ್ಟಡ ಮಾಲೀಕರಿಗೆ ಯಾಕಿಲ್ಲ.?
ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಬಡ ಅಂಗಡಿ ಮಾಲಿಕನ ಮೇಲೆ ದಬ್ಬಾಲಿಕೆ ನಡೆಸುವ ಮನಪಾ ಅಧಿಕಾರಗಳೇ ನಗರದಲ್ಲಿ ಅನಧಿಕೃತ ಕಟ್ಟಡ ಸೇರಿದಂತೆ ಕಾನೂನು ಬಾಹಿರ ಕಾಮಗಾರಿಗಳಿಗೆ ನಿಮ್ಮ ದಬ್ಬಾಳಿಕೆ ಯಾಕಿಲ್ಲ? ರಸ್ತೆ ಬದಿ ಗೂಡಂಗಡಿ,ಮೊಬೈಲ್ ಕ್ಯಾಂಟೀನ್, ನಡೆಸಿ ಜೀವನ ನಡೆಸುವ ಸಣ್ಣ ವ್ಯಾಪಾರಸ್ಥರಿಗೆ ಹಲವಾರು ಕಾರಣಗಳನ್ನು ನೀಡಿ ತೆರವು ಗೊಳಿಸುವ ಮ.ನ.ಪಾ ಅಧಿಕಾರಿಗಳು, ಮಂಗಳೂರಿನ ಗಣಪತಿ ಸ್ಕೂಲ್ ಕ್ರಾಸ್ ರಸ್ತೆಯಲ್ಲಿ, ಹೈಲ್ಯಾಂಡ್ ರಸ್ತೆಯಲ್ಲಿ, ಕೋಟಿ ಚೆನ್ನಯ್ಯ ವ್ರತ್ತದ ಎದುರು, ಟೋಕ್ಯೋ ಮಾರ್ಕೆಟ್ ಹತ್ತಿರ ಅನಧಿಕೃತ ಕಟ್ಟಡ…
-

ಬೇಕರಿಯಲ್ಲಿ ಕಾನೂನು ಬಾಹಿರ ಮಟ್ಕಾ ಆಟ : ಆರೋಪಿ ಬಂಧನ
ವಿಟ್ಲ: ಬೇಕರಿಯೊಂದರಲ್ಲಿ ಕಾನೂನುಬಾಹಿರವಾಗಿ ಅದೃಷ್ಟದ ಮಟ್ಕಾ ಆಟ ನಡೆಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಫೆಬ್ರವರಿ 14ರಂದು ವಿಟ್ಲಪೇಟೆ ಪ್ರದೇಶದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಿನಾಯಕ ಬೇಕರಿಯಲ್ಲಿ ಮಟ್ಕಾ ಆಟ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿತು. ಮಾಹಿತಿ ಆಧಾರವಾಗಿ ದಾಳಿ ನಡೆಸಿದ ಪೊಲೀಸರು ಅಂಗಡಿ ಮಾಲೀಕ ಕುದ್ದುಪದವು ನಿವಾಸಿ ರವೀಶ್ ಎಂಬಾತನನ್ನು ವಶಕ್ಕೆ ಪಡೆದರು. ‘ನಾನು ಅದೃಷ್ಟದ…
-

ಬಂಟ್ವಾಳ: ಲಾರಿಗಳ ಬ್ಯಾಟರಿ ಕಳ್ಳತನ- ಸಿಸಿಟಿವಿಯಲ್ಲಿ ಸೆರೆ
ಬಂಟ್ವಾಳ: ವಿಟ್ಲ-ಪುತ್ತೂರು ರಸ್ತೆಯ ಉದ್ದಕ್ಕೂ ನಿಲ್ಲಿಸಲಾಗಿದ್ದ ಹಲವಾರು ಲಾರಿಗಳಿಂದ ಬ್ಯಾಟರಿಗಳು ಕಳವಾದ ಘಟನೆ ವಿಟ್ಲದಿಂದ ವರದಿಯಾಗಿದೆ. ಲಾರಿ ಚಾಲಕರು ನೀಡಿದ ದೂರುಗಳ ಪ್ರಕಾರ, ಬದನಾಜೆಯ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಲಾರಿಯಿಂದ ಅಪರಿಚಿತ ದುಷ್ಕರ್ಮಿಗಳು ಬ್ಯಾಟರಿಯನ್ನು ಕದ್ದಿದ್ದಾರೆ. ಅದೇ ರಾತ್ರಿ, ಕಾಶಿಮಠ ರಸ್ತೆ ಮತ್ತು ಉಕ್ಕುಡದ ಸರ್ವಿಸ್ ಸ್ಟೇಷನ್‌ನಲ್ಲಿ ನಿಲ್ಲಿಸಿದ್ದ ಮೂರು ಲಾರಿಗಳ ಬ್ಯಾಟರಿಗಳು ಕಾಣೆಯಾಗಿವೆ ಎಂದು ವರದಿಯಾಗಿದೆ. ಚಾಲಕರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆರೋಪಿಗಳು ಬಿಳಿ ಕಾರಿನಲ್ಲಿ ಬಂದು ಕಳ್ಳತನ…
-

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ಪ್ರಕರಣ : ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದೇನು?
ಮಂಗಳೂರು : ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹೇಳಿಕೆ ನೀಡಿದರು. SIT ಅಂತಿಮ ವರದಿಯನ್ನು ಕೋರ್ಟಿಗೂ ಸಲ್ಲಿಸಬೇಕಿದೆ ಅಂತಿಮ ವರದಿ ನೀಡುವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ. ಅಂತಿಮ ವರದಿ ನೀಡುವಂತೆ ಎಸ್ಐಟಿ ಮುಖ್ಯಸ್ಥರಿಗೆ ಸೂಚಿಸಿದ್ದೇನೆ. ಬುರುಡೆ ಪ್ರಕರಣದಲ್ಲಿ ಈಗಾಗಲೇ ಮಧ್ಯಂತರ ವರದಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಸದನದೊಳಗೆ ಮತ್ತು ಸದಾನಂದ ಹೊರಗೆ ಪ್ರತಿಕ್ರಿಯಿಸಿದ್ದೇನೆ. ಎಸ್ಐಟಿ ಅಂತಿಮ…
-

ಕಡಬ: ಲಂಚ ಸ್ವೀಕಾರ ವೇಳೆ ಸಿಕ್ಕಿಬಿದ್ದ ಕಂದಾಯ ನಿರೀಕ್ಷಕ..!!
ಕಡಬ ತಾಲೂಕಿನಲ್ಲಿ ಕಂದಾಯ ನಿರೀಕ್ಷಕನೊಬ್ಬ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಕಡಬ ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪ್ರತಿ ಸೆಂಟ್ಸ್‌ಗೆ ₹100 ರಂತೆ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಒಟ್ಟು ₹1000 ಹಣವನ್ನು ಫೆಬ್ರವರಿ 4, 2026ರಂದು ತಮ್ಮ ಕಚೇರಿಯಲ್ಲೇ ಸ್ವೀಕರಿಸುವಾಗ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿರುವುದು ತಿಳಿದುಬಂದಿದೆ.…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











