,

ರಾಜ್ಯೋತ್ಸವ ಪ್ರಶಸ್ತಿಯ ಘನತೆಗೆ ಧಕ್ಕೆ!! ಪ್ರಶಸ್ತಿಯ ಆಯ್ಕೆಯಲ್ಲಿ ವ್ಯಾಪಾರೀಕರಣದ ಆರೋಪ

ಕರ್ನಾಟಕದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹನೀಯರನ್ನು ಗುರುತಿಸಿ ಗೌರವಿಸುವ ಹೆಮ್ಮೆಯ ಪ್ರಶಸ್ತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ನಿಜವಾಗಿಯೂ ಅರ್ಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆಯೇ? ಅಥವಾ ಪ್ರಭಾವ, ಹಣಬಲ ಮತ್ತು ಇತರ ಒತ್ತಡಗಳಿಗೆ ಮನ್ನಣೆ ಸಿಗುತ್ತಿದೆಯೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ…

ಕರ್ನಾಟಕದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹನೀಯರನ್ನು ಗುರುತಿಸಿ ಗೌರವಿಸುವ ಹೆಮ್ಮೆಯ ಪ್ರಶಸ್ತಿ.

ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ನಿಜವಾಗಿಯೂ ಅರ್ಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆಯೇ? ಅಥವಾ ಪ್ರಭಾವ, ಹಣಬಲ ಮತ್ತು ಇತರ ಒತ್ತಡಗಳಿಗೆ ಮನ್ನಣೆ ಸಿಗುತ್ತಿದೆಯೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ನೈಜ ಸಾಧಕರು, ಕನ್ನಡಪರ ಹೋರಾಟಗಾರರು, ಸಾಹಿತ್ಯ ಕ್ಷೇತ್ರದ ಗಣ್ಯರು ಹಾಗೂ ಸಮಾಜ ಸೇವಕರ ಸಾಧನೆಗೆ ನಮ್ಮದೊಂದು ಸಲಾಂ. ಅವರ ಸೇವೆ ಮತ್ತು ಪರಿಶ್ರಮಕ್ಕೆ ಈ ಗೌರವ ಸಲ್ಲಬೇಕಾದದ್ದೇ.

ಆದರೆ ಇದೇ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಅಥವಾ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಸ್ಪಷ್ಟವಾದ ಸಾರ್ವಜನಿಕ ಮಾಹಿತಿ ಇಲ್ಲದ ಕೆಲವು ಉದ್ಯಮಿಗಳು ಹಾಗೂ ಶ್ರೀಮಂತ ವ್ಯಕ್ತಿಗಳ ಹೆಸರುಗಳು ಕಾಣಿಸಿಕೊಂಡಾಗ ಸಹಜವಾಗಿಯೇ ಪ್ರಶ್ನೆಗಳು ಉದ್ಭವಿಸುತ್ತವೆ.

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಪ್ರಶಸ್ತಿ ಪುರಸ್ಕೃತರ ಕುರಿತು ಅವರ ಹಿಂದಿನ ಚಟುವಟಿಕೆಗಳು ಮತ್ತು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ದ.ಕ ಜಿಲ್ಲೆಯಲ್ಲಿ “ಯಾನೆ ಗಾಂಜಾ” “ಯಾನೆ‌ ಟ್ಯಾಬ್ಲೆಟ್ ” ಎಂದು ಹೆಸರುವಾಸಿಯಾದವರಿಗೂ ಪ್ರಶಸ್ತಿ ಲಭಿಸಿದ್ದು ಇಡೀ ಸಮಾಜವೇ ನಾಚಿಕೆಪಡುವಂತಾಗಿದೆ.

ಕ್ರಿಮಿನಲ್ ಪ್ರಕರಣಗಳು ಅಥವಾ ವಿವಾದಗಳ ಹಿನ್ನೆಲೆಯಿರುವ ವ್ಯಕ್ತಿಗಳ ಹೆಸರು ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಾಗ, ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಪ್ರಶ್ನಿಸುವುದು ಸಾರ್ವಜನಿಕರ ಹಕ್ಕು.

ಹಾಗಾದರೆ ನೈಜ ಸಾಧಕರಿಗೆ ಸಿಗಬೇಕಾದ ಗೌರವಕ್ಕೆ ಬೆಲೆ ಇಲ್ಲವೇ? ಹಣಬಲ ಮತ್ತು ಪ್ರಭಾವಕ್ಕೆ ಮನ್ನಣೆ ನೀಡಲಾಗುತ್ತಿದೆಯೇ?

ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಯಾರದೋ ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ವೇದಿಕೆಯಲ್ಲ. ಅದು ಕನ್ನಡಿಗರ ಆತ್ಮಗೌರವದ ಸಂಕೇತ. ಇಂತಹ ಗೌರವದ ಆಯ್ಕೆಯಲ್ಲಿ ಯಾವುದೇ ರೀತಿಯ ಲಾಬಿ, ಪ್ರಭಾವ ಅಥವಾ ಹಣಕಾಸಿನ ವ್ಯವಹಾರಕ್ಕೆ ಅವಕಾಶವಿದೆಯೇ ಎಂಬ ಅನುಮಾನಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು.

ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಮಾನದಂಡಗಳನ್ನು ಸಾರ್ವಜನಿಕಗೊಳಿಸಬೇಕು. ಪ್ರಶಸ್ತಿ ಪುರಸ್ಕೃತರ ಸಾಧನೆಗಳ ವಿವರಗಳನ್ನು ಜನರ ಮುಂದಿಡಬೇಕು. ಅರ್ಹರನ್ನು ಕಡೆಗಣಿಸಿ ಅನರ್ಹರಿಗೆ ಗೌರವ ನೀಡಲಾಗಿದೆ ಎಂಬ ಆರೋಪಗಳಿದ್ದರೆ ಅವುಗಳ ಕುರಿತು ಪಾರದರ್ಶಕ ಪರಿಶೀಲನೆ ನಡೆಯಬೇಕು

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed