ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ಅಕ್ರಮ ಚಟುವಟಿಕೆಗಳು ನಿಂತಿದೆ. ಇದಕ್ಕೆ ಕಾರಣ, ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಎಸ್ಪಿ ಅನ್ನೋದು ಸಹಮತದ ಅಭಿಪ್ರಾಯ. ಆದ್ರೀಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಹುನ್ನಾರ ನಡೆದಿದ್ಯಾ? ಅನ್ನೋ ಚರ್ಚೆ ಜೋರಾಗಿದೆ.
ಖಡಕ್ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ ಅರುಣ್, ಪೊಲೀಸ್ ಕಮಿಷನರ್ ಸುದೀರ್ ಕುಮಾರ್ ರೆಡ್ಡಿ ಇವರು ತಮ್ಮ ಕಟ್ಟುನಿಟ್ಟಿನ ನಿಲುವಿನಿಂದಾಗಿ ಇಸ್ಪೀಟ್, ಒಸಿ, ಗಾಂಜಾ, ಮರಳುಗಾರಿಕೆ ಮತ್ತು ವಿವಿಧ ಅಕ್ರಮಗಳಿಗೆ ಸಿಂಹಸ್ವಪ್ನವಾಗಿದ್ದ ಇವರು ಬರುತ್ತಿದ್ದಾರೆ ಎಂದಾಗಲೇ ಕೆಲ ಖಾಕಿ ಪಡೆಯಲ್ಲಿ ನಡುಕ ಶುರುವಾಗಿತ್ತು. ಬರ, ಬರುತ್ತಲೇ ಎಲ್ಲ ಅಧಿಕಾರಿಗಳ ಸಭೆ ಮಾಡಿದ ಎಸ್ಪಿ ಡಾ.ಕೆ.ಅರುಣ್ ರಾತ್ರಿ 10ರೊಳಗೆ ಬಾರ್ ಆ್ಯಂಡ್ ರೆಸ್ಟೋರೆಂಟ್, ಅಂಗಡಿ, ಮುಗ್ಗಟ್ಟುಗಳು ಮುಚ್ಚಿಸಿದ್ದರು.ಇಡೀ ಮಂಗಳೂರೇ ಖಾಲಿ ಹೊಡೆಯುತ್ತಿತ್ತು. ಇನ್ನು ಇಸ್ಪೀಟ್, ಓಸಿ, ಅಕ್ರಮ ಮರಳುಸಾಗಣೆ ಹೀಗೆ ಎಲ್ಲ ಧೋ ನಂಬರ್ ದಂಧೆಗಳಿಗೆ ಕಡಿವಾಣ ಹಾಕಿದ್ದರು. ಇದು ರಾಜಕಾರಣಿಗಳಿಗೆ ಮುಳುವಾಗಿತ್ತು ಎಂಬ ಮಾತು ಕೇಳಿ ಬಂದಿತ್ತು.
ಎಸ್ಪಿ ಡಾ.ಕೆ.ಅರುಣ್ ಬಂದ ಕೂಡಲೇ ಆಡಳಿತ ಸುಧಾರಣೆಗಾಗಿ ಪೊಲೀಸ್ ಠಾಣೆಯಲ್ಲಿ ಬಹುದಿನಗಳಿಂದ ಇದ್ದ ಪಿಸಿ, ಡ್ರೈವರ್‌ಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿದ್ದರು. ಅಲ್ಲದೇ ಬೆಳಗ್ಗೆ 10 ಕ್ಕೆ ಕಚೇರಿಗೆ ಆಗಮಿಸುತ್ತಿದ್ದ ಎಸ್ಪಿ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಹೋಗುತ್ತಿರಲಿಲ್ಲ.
ಇಲಾಖಾ ಕರ್ತವ್ಯವನ್ನು ಬಿಟ್ಟು ಎಲ್ಲೂ ಕೂಡ ಎಸ್ಪಿ ಡಾ.ಕೆ.ಅರುಣ್ ಕಾಣಿಸುತ್ತಿರಲಿಲ್ಲ. ಕಳೆದ 6 ತಿಂಗಳಿನಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಯುತವಾಗಿತ್ತು. ಒಟ್ಟಾರೆ ದ.ಕ ಜಿಲ್ಲೆಯಲ್ಲಿ ರೌಡಿಗಳಿಗೆ, ಅಕ್ರಮ ದಂಧೆಕೋರರಿಗೆ, ಭ್ರಷ್ಟ ಇಲಾಖಾಧಿಕಾರಿಗಳಿಗೆ ತಲೆ ನೋವಾಗಿದ್ದ ದಕ್ಷ ಅಧಿಕಾರಿಗಳ ವರ್ಗಾವಣೆಗೆ
ಸಾರ್ವಜನಿಕ ವಲಯದಲ್ಲಿ ಅಸಮಾದಾನ ವ್ಯಕ್ತವಾಗಿದೆ.
