ಮೂಡುಬಿದಿರೆ: ಪದೇ ಪದೇ ಅಪಘಾತ ನಡೆಯುತ್ತಿರುವ ರಿಂಗ್ ರೋಡ್ ಆಲಂಗಾರು -ಕಾರ್ಕಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಗೆ ಸ್ಥಳೀಯರು ಸೋಮವಾರ ಟಿಪ್ಪರ್ ನಲ್ಲಿ ಮಣ್ಣು ಸುರಿದು ಮುಚ್ವಿ ಪ್ರತಿಭಟನೆ ನಡೆಸಿದರು.
ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಭದ್ರತಾ ಕ್ರಮಗಳ ಕೊರತೆ ಎದ್ದು ಕಾಣು ತ್ತಿದೆ. ಕಳೆದ ಕೆಲ ದಿನಗಳಲ್ಲಿ ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಡೆದು ಹಲವು ಜೀವಗಳು ಬಲಿಯಾ ಗಿವೆ. ಸೋಮವಾರವೂ ಕಾರೊಂದು ಅಪಘಾತಕ್ಕೀಡಾಗಿ ಸವಾರರು ಗಾಯಗೊಂಡಿದ್ದರು.
ಸಂಬಂಧಪಟ್ಟ ಅಧಿಕಾರಿಗಳು ಸಾವ೯ಜನಿಕರ ಮನವಿಗೆ ಸ್ಪಂದಿಸದೆ ಇರುವುದರಿಂದ ರೊಚ್ವಿಗೆದ್ದ ಗ್ರಾಮಸ್ಥರು ಟಿಪ್ಪಲ್ ಲಾರಿಯ ಮೂಲಕ ಮಣ್ಣು ತರಿಸಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡ ಸುರಿದು ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ರೀತಿ ಪ್ರತಿಭಟಿಸಿದರೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಆ ಮೂಲಕವಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ನಡೆಯಬಹುದಾದ ಸಂಬಾವ್ಯ ಅಪಘಾತಗಳನ್ನು ತಪ್ಪಿಸಲು ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
