ಮಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನೌಕರರು ಕಚೇರಿಗೆ ಗೈರಾಗಿದ್ದರೂ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಪದ್ಧತಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಎಲ್ಲಾ ಕಾರ್ಯನಿರ್ವಾಹಕ ( Filed officer) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಲನ ವಲನ ವಹಿಯಲ್ಲಿ ದಾಖಲಿಸಬೇಕು. ಕಛೇರಿಗೆ ಪ್ರವೇಶಿಸುವಾಗ ಮತ್ತು ಹೊರಗಡೆ ತೆರಲುವಾಗ ಮತ್ತೆ ಕಛೇರಿಗೆ ಭೇಟಿ ನೀಡಿದಾಗ ತಮ್ಮಲ್ಲಿ ಎಷ್ಟು ಮೊತ್ತವಿದೆ ಎಂದು ತಿಳಿಯಲು ಇದರಲ್ಲಿ ವ್ಯತ್ಯಾಸ ಕಂಡು ಬಂದರೆ ಚಲನವಲನ ವಹಿಯಲ್ಲಿ ದಾಖಲಾಗುತ್ತದೆ. ಮತ್ತು ಅಧಿಕಾರಿಗಳು ಇದಕ್ಕೆ ತಕ್ಕುದಾದ ಉತ್ತರ ನೀಡಬೇಕಾಗುತ್ತದೆ. ಈ ಜಿಯೋ ಟ್ಯಾಗ್ಡ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಚಾಲನೆ ನೀಡಲಾಗಿದೆ.
ಆದರೆ ಕೇವಲ ಹಾಜರಾತಿ ವ್ಯವಸ್ಥೆ ಮಾತ್ರವಲ್ಲ, ಸರ್ಕಾರಿ ಕಚೇರಿಗಳಲ್ಲಿ ನೌಕರರ ಚಲನವಲನ ದಾಖಲಿಸುವ ವ್ಯವಸ್ಥೆಯ ಅಗತ್ಯವೂ ಇದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವು ನೌಕರರು ಬೆಳಗ್ಗೆ ಕಚೇರಿಗೆ ಬಂದು ಮಧ್ಯಾಹ್ನವೇ ಹೊರಡುವುದು, ಹೊರಟ ಬಳಿಕ ಸಂಜೆವರೆಗೂ ಮರಳದಿರುವ ಸಂದರ್ಭಗಳಿವೆ.
ಈ ಹಿನ್ನೆಲೆಯಲ್ಲಿ ನೌಕರರು ಕಚೇರಿಯಿಂದ ಹೊರಡುವಾಗ ಯಾವ ಉದ್ದೇಶಕ್ಕಾಗಿ ತೆರಳುತ್ತಿದ್ದಾರೆ, ಪರಿಶೀಲನೆ, ದಾಳಿ ಅಥವಾ ಅಧಿಕೃತ ಕಾರ್ಯಕ್ಕಾಗಿ ಹೋಗುತ್ತಿದ್ದಾರೆಯೇ ಎಂಬ ಮಾಹಿತಿಯನ್ನು ದಾಖಲಿಸುವ ಚಲನವಲನ ನೋಂದಣಿ ವ್ಯವಸ್ಥೆ ಅಗತ್ಯವಾಗಿದೆ.
ಅಲ್ಲದೆ, ಅಧಿಕೃತ ಕೆಲಸದ ವೇಳೆ ಹಣಕಾಸು ವ್ಯವಹಾರಗಳು ನಡೆದರೆ ಹೊರಡುವ ಸಮಯದ ಮೊತ್ತ, ಮರಳುವ ಸಮಯದ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ದಾಖಲಿಸುವ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಮುಖ್ಯ ಮಂತ್ರಿಯವರು ಗಮನ ಹರಿಸುವುದು ಅಗತ್ಯವಾಗಿದೆ.
