ಪೊಲೀಸ್ ಅಧಿಕಾರಿಗಳ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೈವ್ ಮಾಡಿ ಹಾಸನದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ನನ್ನ ಸಾವಿಗೆ ಹುಣಸೂರು ಡಿವೈಎಸ್ಪಿ ರವೀಶ್, ಅಜಯ್, ಮನೋಹರ, ಪ್ರಸಾದ, ಮಂಜುನಾಥ್ ಕಾರಣ ಎಂದು ವಿಡಿಯೋ ಮಾಡಿದ್ದಾನೆ.
ವಿಷ ಕುಡಿದು ಅಮರ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೊಡುವಿನ ಹೊಸಹಳ್ಳಿ ನಿವಾಸಿ ಅಮರ್ ಎಂದು ತಿಳಿದುಬಂದಿದೆ. ಪಿರಿಯಾಪಟ್ಟಣದ ಬೆಟ್ಟದಪುರದ ಠಾಣೆಯ ಸಿಬ್ಬಂದಿ ವಿರುದ್ಧ ಈ ಒಂದು ಆರೋಪ ಮಾಡಿದ್ದು ಲೈವ್ ನಲ್ಲಿಯೇ ಅಮರ್ ಆರೋಪ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನನಗೆ ಅಪಘಾತವಾಗಿತ್ತು. ಅಪಘಾತ ಸಂದರ್ಭದಲ್ಲಿ ದೂರನ್ನು ಕೊಡಲು ಹೋಗಿದ್ದೆ.ಈ ವೇಳೆ ನನ್ನ ಎದುರು ಪಾರ್ಟಿ ಅಂದರೆ ಅಪಘಾತ ಮಾಡಿದವರ ಪರವಾಗಿ ಪೊಲೀಸರು ವರ್ತಿಸಿದ್ದಾರೆ. ನನಗೆ ನ್ಯಾಯ ಕೊಡಿಸದೆ ಬಿ. ರಿಪೋರ್ಟ್ ಹಾಕಿದ್ದಾರೆ ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ತಕ್ಷಣ ಸ್ಥಳೀಯರು ವಿಷಯ ತಿಳಿದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.















