ಮಂಗಳೂರು: ಅಡ್ಡೂರು ಕೋಡಿಬೆಟ್ಟು ಎಂಬಲ್ಲಿ ಸುಮಾರು 2,500 ದಿಂದ 3,000 ಲೋಡು ವರೆಗೆ ಅಕ್ರಮವಾಗಿ ಮರಳು ಸಂಗ್ರಹಿಸಿದ್ದು , ಇದಕ್ಕೆ ಯಾವುದೇ ಪರವಾನಿಗೆ ಇಲ್ಲದಿರುವುದು ಕಂಡುಬಂದಿದೆ.
ಈ ರೀತಿ ಕಾನೂನಿನ ಬಾಹಿರವಾಗಿ ಮರಳು ಸಂಗ್ರಹಿಸಿವವರ ವಿರುದ್ದ ಗಣಿಗಾರಿಕೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಗಣಿ ಇಲಾಖೆಯ ಅಧಿಕಾರಿಗಳಿಗೂ ಇದರ ಬಗ್ಗೆ ಪಾಲು ಇದೆ ಎಂಬ ಸಂಶಯ ಮೇಲ್ನೋಟಕ್ಕೆ ಕಾಣಿಸುತ್ತದೆ?? ಅಷ್ಟು ದೊಡ್ಡ ಮರಳು ದಾಸ್ತಾನಿಗೆ ಆದೇಶ ಕೊಟ್ಟವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಾನ್ಯ ಜಿಲ್ಲಾಧಿಕಾರಿಯವರೇ ಮರಳಿನ ಅಭಾವ ಇರುವಾಗ ಇದಕ್ಕೆ ಆದೇಶ ಕೊಟ್ಟವರು ಯಾರು ನಿಮ್ಮ ಗಮನಕ್ಕೆ ಬರಲಿಲ್ಲವೇ, ಒಂದು ಲೋಡು ಮರಳು ಹೋಗುವಾಗಲೇ ಪೊಲೀಸರು ಬಂದು ಹಿಡಿದು ಸೀಸ್ ಮಾಡುತ್ತಾರೆ, ಲೋಡು ಗಟ್ಟಲೆ ಮರಳನ್ನು ದಾಸ್ತಾನಿಟ್ಟಿದ್ದಾರೆ ಇದಕ್ಕೆ ಯಾವುದೇ ಕಾನೂನಿಲ್ಲವೇ, ಇನ್ನಾದರೂ ಎಚ್ಚೆತ್ತುಕೊಳ್ಳಬಹುದ ಗಣಿ ಇಲಾಖೆಯವರು?.
