, ,

ಕ್ರೈಂ ವಾರ್ತೆಯ ಫಲಶೃತಿ: ನಿರಂತರವರದಿಗಾರಿಕೆಯಿಂದ ಕೆಮ್ಮಣ್ಣು ಪಡು ತೋನ್ಸೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಬಾರ್ & ರೆಸ್ಟೋರೆಂಟ್ ಮಾಲಿಕನ ವಿರುದ್ಧ ಪ್ರಕರಣ ದಾಖಲು..!!

ಉಡುಪಿ ಜಿಲ್ಲೆಯ ಕೆಮ್ಮಣ್ಣು ಪಡು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸರೋವರ ಬಾರ್ & ರೆಸ್ಟೋರೆಂಟ್ ಅಕ್ರಮ ವಾಣಿಜ್ಯ ಕಟ್ಟಡದ ಕಾಮಗಾರಿ ಬಗ್ಗೆ ನಮ್ಮ ಕ್ರೈಂ ವಾರ್ತೆ ಸುದ್ದಿ ವಾಹಿನಿಯಲ್ಲಿ ಕಳೆದ 2 ತಿಂಗಳಿನಿಂದ ನಿರಂತರ ವರದಿ ಮಾಡಿದ್ದು ಅದರ ಫಲಶೃತಿಯಂತೆ ಇಂದು ಕಟ್ಟಡ ಮಾಲೀಕ ಸಂಪತ್‌ ಕುಮಾರ್ ಶೆಟ್ಟಿ ಮೇಲೆ ಪೋಲಿಸರು ಸೋಮೊಟೋ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ತಹಶೀಲ್ದಾರ, ಚೀಫ್‌ ಆಫೀಸರ್, ನಗರಾಭಿವೃದ್ಧಿ ಇಲಾಖೆ…

ಉಡುಪಿ ಜಿಲ್ಲೆಯ ಕೆಮ್ಮಣ್ಣು ಪಡು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸರೋವರ ಬಾರ್ & ರೆಸ್ಟೋರೆಂಟ್ ಅಕ್ರಮ ವಾಣಿಜ್ಯ ಕಟ್ಟಡದ ಕಾಮಗಾರಿ ಬಗ್ಗೆ ನಮ್ಮ ಕ್ರೈಂ ವಾರ್ತೆ ಸುದ್ದಿ ವಾಹಿನಿಯಲ್ಲಿ ಕಳೆದ 2 ತಿಂಗಳಿನಿಂದ ನಿರಂತರ ವರದಿ ಮಾಡಿದ್ದು ಅದರ ಫಲಶೃತಿಯಂತೆ ಇಂದು ಕಟ್ಟಡ ಮಾಲೀಕ ಸಂಪತ್‌ ಕುಮಾರ್ ಶೆಟ್ಟಿ ಮೇಲೆ ಪೋಲಿಸರು ಸೋಮೊಟೋ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ತಹಶೀಲ್ದಾರ, ಚೀಫ್‌ ಆಫೀಸರ್, ನಗರಾಭಿವೃದ್ಧಿ ಇಲಾಖೆ ಉಡುಪಿ, ತಾಲೂಕು ಪಂಚಾಯತ್‌ ಕಾರ್ಯನಿರ್ವವಹಣಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಭಕಾರಿ ಇಲಾಖೆ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸೇರಿದಂತೆ ವಿವಿಧ ಇಲಾಖೆಗೆ ದೂರು ಅರ್ಜಿ ನೀಡಿದ್ದರೂ ಯಾವುದಕ್ಕೂ ಉತ್ತರಿಸದೆ ತಮ್ಮ ಉದ್ಧಟತನ ಮೆರೆಯುತ್ತಿದ್ದ.
ಎಷ್ಟೋ ಬಾರಿ ನೋಟಿಸ್ ನೀಡಿದರೂ , ಅಧಿಕಾರಿಗಳು ಬಂದು ಕಾಮಗಾರಿ ನಿಲ್ಲಿಸಿ ಎಂದರೂ, ತಕ್ಷಣವೇ ಅದರ ಹತ್ತು ಪಟ್ಟು ರಾತ್ರಿ ಹಗಲು ವೇಗವಾಗಿ ಕಾಮಗಾರಿ ನಡೆಸುತ್ತಿದ್ದ.

ಸೋಮೊಟೊ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾಧಿದಾರರು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಕಾನೂನು ಸುವ್ಯವಸ್ಥೆ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 04/01/2025 ರಂದು ಠಾಣೆಯಲ್ಲಿ ಇರುವಾಗ 1 ಗಂಟೆಗೆ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಕೆಮ್ಮಣು ಎಂಬಲ್ಲಿ ಸರೋವರ್ ಬಾರ್ & ರೆಸ್ಟೋರೆಂಟ್ ನ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದ್ದು, ಆದರೂ ಸಹ ಕಟ್ಟಡದ ಹೊರಗೆ ಪರವಾನಗಿಯ ನಿಯಮ ಉಲಂಘನೆ ಮಾಡಿ ಬೆಳಗ್ಗಿನ ಜಾವ ಗಿರಾಕಿಗಳಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಪೋಟೋ ಸಮೇತ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ಮಾಹಿತಿ ಬಂದಿರುತ್ತದೆ. ಅದರಂತೆ ಪಿರ್ಯಾದಿದಾರರು ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣ ನೋಡಲಾಗಿ, ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ಸರೋವ‌ರ್ ಬಾರ್ & ರೆಸ್ಟೋರೆಂಟ್ ನ ಕಟ್ಟಡ ಕಾಮಗಾರಿ ಎಡೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಪೋಟೋ ಇರುತ್ತದೆ. ಕೆಮ್ಮಣ್ಣು ಎಂಬಲ್ಲಿ ಸರೋವರ್ ಬಾರ್ & ರೆಸ್ಟೋರೆಂಟ್ ನ ಮಾಲಕರು ಸಂಪತ್ ಕುಮಾರ್ ಶೆಟ್ಟಿ ಎಂಬುದಾಗಿ ತಿಳಿದುಬಂದಿರುತ್ತದೆ, ಆದ್ದರಿಂದ ಆರೋಪಿತರು ಮದ್ಯ ಮಾರಾಟ ಕುರಿತು ಅಬಕಾರಿ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಕಟ್ಟಡದ ಹೊರಾಂಗಣದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ನೀಡಿರುವುದರಿಂದ ಸದ್ರಿ ದೂರು ಅರ್ಜಿಯಲ್ಲಿನ ವಿಚಾರವು ಅಸಂಜ್ಞೆಯ ಪ್ರಕರಣವಾಗಿದ್ದು, ಠಾಣಾ ಎನ್ನಿ ನಂ:01/2026 ರಂತೆ ಸ್ವೀಕರಿಸಿ, ಸದ್ರಿ ದೂರಿಗೆ ಸಂಬಂಧಿಸಿದಂತೆ ಕಲಂ:15(ಎ), 36 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ನಿವೇದಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲು ಆದೇಶವನ್ನು ನೀಡಿದ್ದು, ಮಾನ್ಯ ನ್ಯಾಯಾಲಯದ ಆದೇಶದಂತೆ ಸದ್ರಿರವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed