,

ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ…!!

ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿ ಭ್ರಷ್ಟ ಅಧಿಕಾರಿಗಳೇ ತುಂಬಿ ತುಳುಕುತ್ತಿವೆ, 5 – 6 ವರ್ಷಗಳಾದರೂ ಇಂತಹ ಅಧಿಕಾರಿಗಳಿಗೆ ವರ್ಗಾವಣೆ ಎಂಬ ಪಧವೇ ಇಲ್ಲ..ಜನ ಸಾಮಾನ್ಯರು ಒಂದು ಸಣ್ಣ ಕೆಲಸ ಅಥವಾ RTC ತಿದ್ದುಪಡಿಗಾಗಿ ನೂರಾರು ಸಲ ಕಛೇರಿಗೆ ಅಲೆದಾಡುವ ಪರಿಸ್ಥಿತಿ ಇಲ್ಲಿಯದ್ದು. ಇಲ್ಲಿನ ಕಂದಾಯ ಇಲಾಖೆಯ ಬೇರೆ ಬೇರೆ ಇಲಾಖಾ ಅಧಿಕಾರಿಗಳು ಲಂಚ ಆರೋಪಲ್ಲಿ ಹಲವಾರು ಬಾರಿ ಲೋಕಯುಕ್ತ ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಉದಾಹರಣೆಗಳಿವೆ. ಉಪತಹಸೀಲ್ದಾರ್ ( DT) ಮತ್ತು ಗ್ರಾಮ ಲೆಕ್ಕಾಧಿಕಾರಿ…

ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿ ಭ್ರಷ್ಟ ಅಧಿಕಾರಿಗಳೇ ತುಂಬಿ ತುಳುಕುತ್ತಿವೆ, 5 – 6 ವರ್ಷಗಳಾದರೂ ಇಂತಹ ಅಧಿಕಾರಿಗಳಿಗೆ ವರ್ಗಾವಣೆ ಎಂಬ ಪಧವೇ ಇಲ್ಲ..ಜನ ಸಾಮಾನ್ಯರು ಒಂದು ಸಣ್ಣ ಕೆಲಸ ಅಥವಾ RTC ತಿದ್ದುಪಡಿಗಾಗಿ ನೂರಾರು ಸಲ ಕಛೇರಿಗೆ ಅಲೆದಾಡುವ ಪರಿಸ್ಥಿತಿ ಇಲ್ಲಿಯದ್ದು. ಇಲ್ಲಿನ ಕಂದಾಯ ಇಲಾಖೆಯ ಬೇರೆ ಬೇರೆ ಇಲಾಖಾ ಅಧಿಕಾರಿಗಳು ಲಂಚ ಆರೋಪಲ್ಲಿ ಹಲವಾರು ಬಾರಿ ಲೋಕಯುಕ್ತ ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಉದಾಹರಣೆಗಳಿವೆ.

ಉಪತಹಸೀಲ್ದಾರ್ ( DT) ಮತ್ತು ಗ್ರಾಮ ಲೆಕ್ಕಾಧಿಕಾರಿ (VA) ಹಾಗೂ ಇನ್ನಿತರ ಸರ್ವೇ ಅಧಿಕಾರಿಗಳಿಗೆ ಮಿನಿ ವಿಧಾನ ಸೌಧವೇ ಖಾಯಂ ಅಂತ ಆಗಿದೆ. ಇವರಿಗೆ ಸರಕಾರದಿಂದ ವರ್ಗಾವಣೆ ಎಂಬುವುದೇ ಇಲ್ಲ.
ಜಾತಿ ಆದಾಯ ಸರ್ಟಿಫಿಕೇಟ್,
RTC, ತಿದ್ದುಪಡಿ ಹೀಗೆ ಹಲವಾರು ಕೆಲಸಗಳು ಹಣ ನೀಡಿದರೆ ಕ್ಷಣಾರ್ಧದಲ್ಲಿ ನಡೆಯುತ್ತದೆ, ಇದೇ ಕೆಲಸ ಜನಸಾಮಾನ್ಯರಿಗೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಕಛೇರಿಗೆ ಅಲೆದಾಡಿಸಿ ಕೊನೆಗೆ ಹಿಂಬರಹ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯವಾಗಿ ಇಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು , ಅಧಿಕಾರಿಗಳ ಮತ್ತು ದಲ್ಲಾಲಿಗಳ ನಡುವೆ ಹಣದ ರೂಪದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.

ಸರ್ಕಾರದ ಆಸ್ತಿಗಳು ಹಕ್ಕುಪತ್ರಕ್ಕೆ ಅನುಮೋದನೆ ಆದೇಶ ಇದ್ದರೂ, ಇಲ್ಲಿನ ಕಂದಾಯ ಅಧಿಕಾರಿಗಳು ಅದಕ್ಕೂ ಸೆನ್ಸ್ ಗೆ ಇಷ್ಟು ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ಒಟ್ಟಾರೆ ಆಗಿ ಇಲ್ಲಿನ ಅಧಿಕಾರಿಗಳು ಜನಸಮಾನ್ಯರ ಪಾಲಿಗೆ ಇದ್ದು ಸತ್ತಂತೆ ಆಗಿದ್ದಾರೆ. ಸರ್ಕಾರ ಹಾಗೂ ಇಲ್ಲಿನ ಜನಪ್ರತಿನಿದಿಗಳು ಮಿನಿ ವಿಧಾನ ಸೌಧದಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ಮತ್ತು ದಲ್ಲಾಳಿಗಳನ್ನು ಕಿತ್ತೆಸೆದು ಉತ್ತಮ ಆಡಳಿತ ‌ಸೌದ ಹಾಗೂ ಪಾರದರ್ಶಕ ಸೇವೆ ನೀಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪಾತ್ರವಾಗಬೇಕಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed