ವಿದೇಶಿ ಉದ್ಯೋಗಕ್ಕೆ ಮುನ್ನ ಎಚ್ಚರ; ನಕಲಿ ಏಜೆನ್ಸಿಗಳ ಬಗ್ಗೆ ಮಂಗಳೂರು ಕಮಿಷನರ್‌ರಿಂದ ಮಹತ್ವದ ಸಲಹೆ

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕನಸು ಕಾಣುವ ಯುವ ಜನತೆ ವಂಚಕರ ಜಾಲಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ನಗರ ಪೊಲೀಸ್‌ ಕಮೀಷನರ್‌ ಸುಧೀರ್ ಕುಮಾರ್ ರೆಡ್ಡಿ ಅವರು ಪಾಲಿಸಬೇಕಾದ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ವಿದೇಶಿ ಉದ್ಯೋಗದ ಆಕಾಂಕ್ಷಿಗಳು ಯಾವುದೇ ಏಜೆನ್ಸಿಯನ್ನು ನಂಬುವ ಮುನ್ನ, ಆ ನೇಮಕಾತಿ ಏಜೆನ್ಸಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಲ್ಪಟ್ಟಿದೆಯೇ ಮತ್ತು ಅಧಿಕೃತ ‘ಇ-ಮೈಗ್ರೇಟ್’ ಪೋರ್ಟಲ್‌ನಲ್ಲಿ ಪಟ್ಟಿಯಲ್ಲಿದೆಯೇ ಎಂಬುದನ್ನು ಖಂಡಿತವಾಗಿ ಪರಿಶೀಲಿಸಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಸರಿಯಾದ ಪರಿಶೀಲನೆ ನಡೆಸದೆ ಮುಂಚಿತವಾಗಿ ಹಣವನ್ನು ಪಾವತಿಸುವುದು ಅಥವಾ ವೈಯಕ್ತಿಕ…

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕನಸು ಕಾಣುವ ಯುವ ಜನತೆ ವಂಚಕರ ಜಾಲಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ನಗರ ಪೊಲೀಸ್‌ ಕಮೀಷನರ್‌ ಸುಧೀರ್ ಕುಮಾರ್ ರೆಡ್ಡಿ ಅವರು ಪಾಲಿಸಬೇಕಾದ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ವಿದೇಶಿ ಉದ್ಯೋಗದ ಆಕಾಂಕ್ಷಿಗಳು ಯಾವುದೇ ಏಜೆನ್ಸಿಯನ್ನು ನಂಬುವ ಮುನ್ನ, ಆ ನೇಮಕಾತಿ ಏಜೆನ್ಸಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಲ್ಪಟ್ಟಿದೆಯೇ ಮತ್ತು ಅಧಿಕೃತ ‘ಇ-ಮೈಗ್ರೇಟ್’ ಪೋರ್ಟಲ್‌ನಲ್ಲಿ ಪಟ್ಟಿಯಲ್ಲಿದೆಯೇ ಎಂಬುದನ್ನು ಖಂಡಿತವಾಗಿ ಪರಿಶೀಲಿಸಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಸರಿಯಾದ ಪರಿಶೀಲನೆ ನಡೆಸದೆ ಮುಂಚಿತವಾಗಿ ಹಣವನ್ನು ಪಾವತಿಸುವುದು ಅಥವಾ ವೈಯಕ್ತಿಕ ದಾಖಲೆಗಳನ್ನು ಹಂಚಿಕೊಳ್ಳುವುದನ್ನು ಮಾಡಬಾರದು ಎಂದು ಮನವಿ ಮಾಡಿದ್ದಾರೆ.ನಕಲಿ ಉದ್ಯೋಗದ ಆಫರ್‌ಗಳು ನಿಮ್ಮನ್ನು ಕೇವಲ ಆರ್ಥಿಕ ನಷ್ಟಕ್ಕಷ್ಟೇ ಅಲ್ಲದೆ, ಭಾರಿ ಶೋಷಣೆ ಹಾಗೂ ಮನುಷ್ಯ ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳಿಗೂ ಸಿಲುಕಿಸಬಹುದು. ಹಾಗಾಗಿ, ಸದಾ ಜಾಗರೂಕರಾಗಿರಿ, ಮೊದಲು ಪರಿಶೀಲಿಸಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಿ ಎಂದು ಮಂಗಳೂರು ಕಮಿಷನರ್ ಕೋರಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed