,

ಮಂಗಳೂರು ದಕ್ಕೆಯಲ್ಲಿ ಲೈಟ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು- ಧಕ್ಕೆಯ ಅವ್ಯವಸ್ಥೆ ಬಗ್ಗೆ ಕಾರ್ಮಿಕರ ಆಕ್ರೋಶ

ಮಂಗಳೂರು: ಲೈಟ್ ಕಂಬವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ದಕ್ಕೆಯಲ್ಲಿ ನಿನ್ನೆ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತರನ್ನು ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಮಿಳ್ನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ. ಧಕ್ಕೆಯ ಅವ್ಯವಸ್ಥೆ ಬಗ್ಗೆ ಕಾರ್ಮಿಕರ ಆಕ್ರೋಶ: ಧಕ್ಕೆಯ ಅವ್ಯವಸ್ಥೆ ಅಲ್ಲಿನ ಸ್ಥಿತಿಗತಿ ಮತ್ತೆ ಎದ್ದು ತೋರಿಸುತ್ತಾ ಇದೆ. ದಕ್ಕೆಗೆ ಪ್ರವೇಶಿಸಿವ ದ್ವಿಚಕ್ರ ವಾಹನದಿಂದ ಹಿಡಿದು ದೊಡ್ಡ ದೊಡ್ಡ ಮೀನಿನ ಲಾರಿಗಳಿಂದ ಪ್ರವೇಶ ಶುಲ್ಕ ಪಡೆಯುವಾಗ ದಕ್ಕೆಯಲ್ಲಿರುವ ಹಲವಾರು ಸಮಸ್ಯೆ ಗಳಿಗೆ…

ಮಂಗಳೂರು: ಲೈಟ್ ಕಂಬವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ದಕ್ಕೆಯಲ್ಲಿ ನಿನ್ನೆ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಮೃತರನ್ನು ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಮಿಳ್ನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ.

ಧಕ್ಕೆಯ ಅವ್ಯವಸ್ಥೆ ಬಗ್ಗೆ ಕಾರ್ಮಿಕರ ಆಕ್ರೋಶ:

ಧಕ್ಕೆಯ ಅವ್ಯವಸ್ಥೆ ಅಲ್ಲಿನ ಸ್ಥಿತಿಗತಿ ಮತ್ತೆ ಎದ್ದು ತೋರಿಸುತ್ತಾ ಇದೆ. ದಕ್ಕೆಗೆ ಪ್ರವೇಶಿಸಿವ ದ್ವಿಚಕ್ರ ವಾಹನದಿಂದ ಹಿಡಿದು ದೊಡ್ಡ ದೊಡ್ಡ ಮೀನಿನ ಲಾರಿಗಳಿಂದ ಪ್ರವೇಶ ಶುಲ್ಕ ಪಡೆಯುವಾಗ ದಕ್ಕೆಯಲ್ಲಿರುವ ಹಲವಾರು ಸಮಸ್ಯೆ ಗಳಿಗೆ ಸೂಕ್ತ ಪರಿಹಾರ ಮತ್ತು ನಿರ್ವಹಣೆ ಇಲ್ಲದಂತಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ದುಡಿಯುವ ಮಂಗಳೂರು ಧಕ್ಕೆಯಲ್ಲಿ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತ ಪರಿಸ್ಥಿತಿ, ಈ ಕಂಬದ ಸ್ಥಿತಿಗತಿ ಹೀಗಿದ್ದರೂ ಇದನ್ನು ಗಮನಿಸದೇ ಇರುವುದು ಬದಲಾಯಿಸದೇ ಇರುವುದು ಯಾರ ಬೇಜವಾಬ್ದಾರಿ?? ಇದೇ ಒಂದು ಹತ್ತಾರು ಜನರ ಮೇಲೆ ಬಿದ್ದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಇರುತಿತ್ತು ಅನ್ನುವುದು ಅಲೋಚಿಸಬೇಕಿದೆ. ಈ ರೀತಿಯಲ್ಲಿ ಅಪಾಯದಲ್ಲಿ ಬೀಳುವ ಸ್ಥಿತಿಯಲ್ಲಿರುವ ಕಂಬಗಳನ್ನು ಕೂಡಲೇ ಬದಲಾಯಿಸಲು ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಗಮನ ನೀಡಬೇಕು.
ಅನಾಹುತಕ್ಕೆ ಬಳಿಯಾದ ಕಾರ್ಮಿಕ ಮುರುಗನ್ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ನೀಡಬೇಕು ಎಂದು ದಕ್ಕೆಯಲ್ಲಿ ದುಡಿಯುವ ಕಾರ್ಮಿಕರು ಮಾಧ್ಯಮದ ಮೂಲಕ ಒತ್ತಾಯ ಮತ್ತು ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ದಕ್ಕೆಯಲ್ಲಿ ರಸ್ತೆ, ಚರಂಡಿ, ದಾರಿ ದೀಪ, ಹೀಗೆ ಹಲವಾರು ಪ್ರಮುಖ ಅಭಿವೃದ್ಧಿಯಲ್ಲಿ ಕುಂಠಿತ ಬೆಳವಣಿಗೆ ಹೊಂದಿದ್ದು ಇಲ್ಲಿಯ ಜನ ಪ್ರತಿನಿಧಿಗಳು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದು ಸುಸಜ್ಜಿತ ದಕ್ಕೆ ನಿರ್ಮಾಣ ಮತ್ತು ನಿರ್ವಹಣೆಗೆ ಶ್ರಮಿಸಬೇಕು.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed