ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ವ್ಯಾಪಾರವನ್ನು ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವುದು ಕೇವಲ ಬಡವರ, ಅಂಗವಿಕಲರ ಹಾಗೂ ಊಟಕ್ಕಾಗಿ ವ್ಯಾಪಾರವನ್ನು ಅವಲಂಬಿಸಿರುವರದ್ದನ್ನೇ.
ಯಾಕೆಂದರೆ ಅವರಿಗೆ ಯಾವುದೇ ರಾಜಕೀಯ ಇನ್ಫ್ಲುಯೆನ್ಸ್ ಇಲ್ಲ ಹಾಗೂ ಹಣದ ಬಲವೂ ಇಲ್ಲ.
ಇದೇ ವೇಳೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ.
ಕಟ್ಟಡ ಪರವಾನಿಗೆ ರೂಲ್ಸ್ ಬ್ರೇಕ್ ಮಾಡಿ ಫುಟ್ಪಾತ್ನಲ್ಲಿ ಬಿಲ್ಡಿಂಗ್ಗಳನ್ನು, ಮಾರ್ಕೆಟ್ ರೋಡ್ಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಈ ವಿಚಾರಗಳು ಮಹಾನಗರ ಪಾಲಿಕೆ ಕಮಿಷನರ್ ಅವರಿಗೆ ಕಾಣುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಬಡ ವ್ಯಾಪಾರಿಗಳ ಮೇಲಷ್ಟೇ ಯಾಕೆ ಕಣ್ಣು? ಯಾಕೆ ಈ ಬಡ ವ್ಯಾಪಾರಿಗಳೇ ಟಾರ್ಗೆಟ್ ಆಗಿದ್ದಾರೆ? ಯಾಕೆ ಇಷ್ಟು ತಾರತಮ್ಯ? ಶ್ರೀಮಂತರು ಯಾಕೆ ಕಣ್ಣಿಗೆ ಕಾಣುವುದಿಲ್ಲ? ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶ್ರೀಮಂತರ ವಿಚಾರವಾದಾಗ ಮಹಾನಗರ ಪಾಲಿಕೆ ಕಮಿಷನರ್ ಅವರ ಕಣ್ಣಿಗೆ ಮಾಸ್ಕ್ ಹಾಕಲಾಗುತ್ತದೆಯೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ಬಡವರ ಬದುಕಿಗೂ ಸಹಕಾರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಹೊಟ್ಟೆಪಾಡಿಗಾಗಿ ಸಣ್ಣ ವ್ಯಾಪಾರ ಮಾಡುವ ಬಡವರು, ಅಂಗವಿಕಲರು ಹಾಗೂ ಸಾಮಾನ್ಯ ಜನರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ನಿಯಮ ಉಲ್ಲಂಘಿಸುವ ದೊಡ್ಡ ಕಟ್ಟಡಗಳ ಮೇಲೂ ಸಮಾನ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಬಡವರನ್ನು ರಕ್ಷಿಸುವುದು ಮತ್ತು ನಗರದ ವ್ಯವಸ್ಥೆಯನ್ನು ಕಾಪಾಡುವುದು ಪಾಲಿಕೆಯ ಜವಾಬ್ದಾರಿಯಾಗಿದೆ.
