ಪಡುಬಿದ್ರೆ : ಲಾರಿ ಖರೀದಿಸಿದ ಬಳಿಕ ಒಪ್ಪಂದದಂತೆ ಬಾಕಿ ಹಣ ಪಾವತಿಸದೆ ನಂಬಿಕೆದ್ರೋಹ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಲ್ಕಿ ನಿವಾಸಿ ಬಸವರಾಜ ಜಿ. ಹುನಕುಂಟಿ ಅವರು ತಮ್ಮ ಲಾರಿ ವಾಹನವನ್ನು ಶಾಮೀರ್ ಪಾಶ ಎಂಬವರಿಗೆ ಮಾರಾಟ ಮಾಡಿದ್ದರು. ವ್ಯವಹಾರದ ವೇಳೆ ಆರೋಪಿಯು 35,000 ರೂ. ಮೊತ್ತವನ್ನು ಚೆಕ್ ಮೂಲಕ ಹಾಗೂ 20,000 ರೂ. ನಗದು ರೂಪದಲ್ಲಿ ಪಾವತಿಸಿ, ಉಳಿದ 3.15 ಲಕ್ಷ ಹಣವನ್ನು ಬಳಿಕ ನೀಡುವುದಾಗಿ ಮೌಖಿಕ ಒಪ್ಪಂದ ಮಾಡಿಕೊಂಡು ಲಾರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದರೆ, ಲಾರಿ ಸ್ವಾಧೀನಕ್ಕೆ ಪಡೆದ ನಂತರ ಒಪ್ಪಂದದಂತೆ ಬಾಕಿ ಹಣವನ್ನು ಪಾವತಿಸದೆ ನಂಬಿಕೆದ್ರೋಹ ಎಸಗಿದ್ದಾನೆ ಎಂದು ಆರೋಪಿಸಿ ಭಾಸವರಾಜ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ
