ಬೆಳ್ತಂಗಡಿ: ಶಿಬಾಜೆಯ ತೋಟದಲ್ಲಿ ಶೀಧರ ಕೊಲೆ ಪ್ರಕರಣದ ಸಂಬಂಧ ಎಸ್ಐಟಿ ಅಧಿಕಾರಿಗಳು ದೂರುದಾರ ಹರೀಶ್ ಬಿ. ಮುಗೇರ ಅವರಿಗೆ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರ ಫಾರ್ಮ್ ಗುತ್ತು ಮನೆಯ ತೋಟದಲ್ಲಿ 18-12-2022 ರಂದು ಶ್ರೀಧರ (30ವ) ಎಂಬವರ ಅನುಮಾನಾಸ್ಪದ ಸಾವಿನ ಸಂಬಂಧ ಮರುತನಿಖೆ ನಡೆಸಲು ಹೈಕೋರ್ಟ್ ಆದೇಶ ಮಾಡಿದಂತೆ ಎಸ್.ಐ.ಟಿ. ಅಧಿಕಾರಿಗಳು ಮಾ.2 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಕರಣ ಸಂಬಂಧ ಶ್ರೀಧರ ಕೊಲೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಶಿಬಾಜೆಯ ಹರೀಶ್ ಬಿ. ಮುಗೇರ ಎಂಬವರಿಗೆ ಎಸ್.ಐ.ಟಿ. ತನಿಖಾಧಿಕಾರಿ ಡಿ.ವೈ.ಎಸ್.ಪಿ. ಹರೀಶ್ ಎಂ. ಆರ್. ಅವರು ಮಾ.3 ರಂದು ಹರೀಶ್ ಮನೆಗೆ ತೆರಳಿ ವಿಚಾರಣೆಗಾಗಿ ನೋಟಿಸ್ ತಲುಪಿದ ಕೂಡಲೇ ಧರ್ಮಸ್ಥಳ ಪೊಲೀಸ್ ಠಾಣೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕೆಂದು ನೋಟಿಸ್ ಜಾರಿ ಮಾಡಿದ್ದಾರೆ.
