, ,

ತಾಳೆ ಕುಂಬ್ರಿ ಕಾರ್ ಸುಟ್ಟ ‌ಪ್ರಕರಣ ಬೇಧಿಸಿದ ಪೊಲೀಸರು: ಮೂವರು ಆರೋಪಿಗಳ ಬಂಧನ

ಕಾರವಾರ: ಯಲ್ಲಾಪುರ ಅರಬೈಳ್ ಘಟ್ಟದ ತಾಳೆ ಕುಂಬ್ರಿ ಬಸ್ ನಿಲ್ದಾಣದ ಹತ್ತಿರ ಕಾರ್ ಸುಟ್ಟ ‌ಪ್ರಕರಣವನ್ನು ಬ ಪೊಲೀಸರು ಪತ್ತೆ ಹಚ್ಚಿದ್ದಾರೆ ‌ಹಳೆ ಹುಬ್ಬಳ್ಳಿಯ ಮೂವರು ಆರೋಪಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ದೀಪನ್ ಹೇಳಿದ್ದಾರೆ. ಕಾರವಾರದಲ್ಲಿ ಎಸ್ಪಿ ಕಚೇರಿಯಲ್ಲಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾರ್ ನಲ್ಲಿದ್ದ ನಿತೇಶ್ ಧಾಪಳೆ ಕೊಲೆಯಾದ ನಂತರ ಅವರನ್ನು ಕಾರ್ ಅಪಘಾತದಲ್ಲಿ ಸತ್ತ ರೀತಿಯಲ್ಲಿ ಬಿಂಬಿಸಲು ಆರೋಪಿಗಳು ಯತ್ನಿಸಿದ್ದಾರೆ ಎಂದರು. ಈ ಪ್ರಕರಣದಲ್ಲಿ ಆರೋಪಿತರಾದ ಸಿದ್ದಾರೂಢ ನಗರ ಹೆಗ್ಗರಿ ಹಳೆ ಹುಬ್ಬಳ್ಳಿಯ…

ಕಾರವಾರ: ಯಲ್ಲಾಪುರ ಅರಬೈಳ್ ಘಟ್ಟದ ತಾಳೆ ಕುಂಬ್ರಿ ಬಸ್ ನಿಲ್ದಾಣದ ಹತ್ತಿರ ಕಾರ್ ಸುಟ್ಟ ‌ಪ್ರಕರಣವನ್ನು ಬ ಪೊಲೀಸರು ಪತ್ತೆ ಹಚ್ಚಿದ್ದಾರೆ ‌ಹಳೆ ಹುಬ್ಬಳ್ಳಿಯ ಮೂವರು ಆರೋಪಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ದೀಪನ್ ಹೇಳಿದ್ದಾರೆ.

ಕಾರವಾರದಲ್ಲಿ ಎಸ್ಪಿ ಕಚೇರಿಯಲ್ಲಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾರ್ ನಲ್ಲಿದ್ದ ನಿತೇಶ್ ಧಾಪಳೆ ಕೊಲೆಯಾದ ನಂತರ ಅವರನ್ನು ಕಾರ್ ಅಪಘಾತದಲ್ಲಿ ಸತ್ತ ರೀತಿಯಲ್ಲಿ ಬಿಂಬಿಸಲು ಆರೋಪಿಗಳು ಯತ್ನಿಸಿದ್ದಾರೆ ಎಂದರು.

ಈ ಪ್ರಕರಣದಲ್ಲಿ ಆರೋಪಿತರಾದ ಸಿದ್ದಾರೂಢ ನಗರ ಹೆಗ್ಗರಿ ಹಳೆ ಹುಬ್ಬಳ್ಳಿಯ ಅಬ್ದುಲ್ ನಹೀಮ ಮುಜಾವರ ( 32) , ಮೌಲಾಸಾಬ ಬಾಬಾಜಾನ ಬಾಡ (36 ) ದಾದಾಪೀರ ಅಪ್ತಾಬ್ ಮೆಹಬೂಬಸಾಬ ಬಾಳಸಂಗಿ ( 22 ) ಎಂಬುವವರನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ ಎಂದರು. ಈ ಕೊಲೆ ಪ್ರಕರಣದಲ್ಲಿ ಇನ್ನೂ ನಾಲ್ವರು ಭಾಗಿಯಾಗಿದ್ದು ಅವರಿಗಾಗಿ ಹುಡುಕಾಟ ನಡೆದಿದೆ.

ಮೊದಲ ಆರೋಪಿ ಅಬ್ದುಲ್ ನಹೀಂ ಕೋರ್ಟ್ ಗೆ ಶರಣಾಗಿದ್ದಾನೆ. ನಂತರ ಪೊಲೀಸರ ವಶಕ್ಕೆ ಬಂದಿದ್ದಾನೆ. ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ಚಲನವಲನ ಮಾಹಿತಿ ಹಿಡಿದು ಪ್ರಕರಣ ಬೇಧಿಸಲಾಯಿತು. ಕೊಲೆಯಾದ ನಿತೇಶ್ ಮೇಲೆ ಸಹ 22 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ‌.

ಬೆಳಗಾವಿ, ‌ಧಾರವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳಿವೆ. ಅಬ್ದುಲ್ ನಹೀಮ ಮುಜಾವರ ಜೊತೆ ಇದ್ದ ನಿತೇಶ್ ಪ್ರಕರಣ ಒಂದರಲ್ಲಿ ಅಬ್ದುಲ್ ಗೆ ಸಾಥ್ ನೀಡಿದ್ದ. ನಂತರ ಅವನ ಬಳಿ ಕಾರ್ ಚಾಲಕನಾಗಿ ನಿತೇಶ್ ಕೆಲಸ ಮಾಡಿದ್ದ. ಇವರ ಮಧ್ಯೆ ಏನೂ ಭಿನ್ನಾಭಿಪ್ರಾಯ ಬಂದು ಕೊಲೆ ಮಾಡಲಾಗಿದೆ.

ಕೊಲೆಗೆ ಕಾರಣ ತನಿಖೆಯಾಗುತ್ತಿದೆ ಎಂದು ಎಸ್ಪಿ ದೀಪನ್ ತಿಳಿಸಿದರು. ನಿತೇಶ್ ಕೊಲೆ ಪ್ರಕರಣ ಪತ್ತೆಯಲ್ಲಿ ಡಿವೈಎಸ್ಪಿ ಗೀತಾ ಪಾಟೀಲ್, ಯಲ್ಲಾಪುರ ಸಿಪಿಐ ರಮೇಶ್‌ ಹಾನಪುರ, ಪಿಎಸ್ ಐ ರಮೇಶ್ ಒಂದಲಿ,ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿ ಪ್ರಯತ್ನವನ್ನು ಎಸ್ಪಿ ದೀಪನ್ ಮೆಚ್ಚಿಕೊಂಡರು.‌ ಪತ್ರಿಕಾಗೋಷ್ಠಿಯಲ್ಲಿ ಅಡಿಶನಲ್ ಎಸ್ಪಿ ಕೃಷ್ಣಮೂರ್ತಿ ಇದ್ದರು.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed