, ,

ಮೊಬೈಲ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ಕಳೆದುಕೊಂಡ ವ್ಯಕ್ತಿ

ಮಂಗಳೂರು: ಯಾರೋ ಅಪರಿಚಿತ ವಂಚಕರು ಮೊಬೈಲ್‌ಗೆ ಲಿಂಕ್ ಇರುವ ಎಸ್‌ಎಂಎಸ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹6,91,534 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಕಾವೂರು ಮತ್ತು ಕುಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತರು ಯೂನಿಯನ್ ಬ್ಯಾಂಕ್‌ನ ಕಾವೂರು ಶಾಖೆಗೆ ತೆರಳಿ ಖಾತೆಯ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ, ಮೇ 3 ರಂದು ಯುಪಿಐ (UPI) ಮೂಲಕ ಅವರ ಖಾತೆಯಿಂದ ಪೇಮೆಂಟ್ಸ್ ಬ್ಯಾಂಕ್‌ನ ಖಾತೆಯೊಂದಕ್ಕೆ ಹಂತ ಹಂತವಾಗಿ…

ಮಂಗಳೂರು: ಯಾರೋ ಅಪರಿಚಿತ ವಂಚಕರು ಮೊಬೈಲ್‌ಗೆ ಲಿಂಕ್ ಇರುವ ಎಸ್‌ಎಂಎಸ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹6,91,534 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಕಾವೂರು ಮತ್ತು ಕುಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂತ್ರಸ್ತರು ಯೂನಿಯನ್ ಬ್ಯಾಂಕ್‌ನ ಕಾವೂರು ಶಾಖೆಗೆ ತೆರಳಿ ಖಾತೆಯ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ, ಮೇ 3 ರಂದು ಯುಪಿಐ (UPI) ಮೂಲಕ ಅವರ ಖಾತೆಯಿಂದ ಪೇಮೆಂಟ್ಸ್ ಬ್ಯಾಂಕ್‌ನ ಖಾತೆಯೊಂದಕ್ಕೆ ಹಂತ ಹಂತವಾಗಿ ₹3,76,620 ವರ್ಗಾವಣೆಯಾಗಿತ್ತು. ಅಷ್ಟೇ ಅಲ್ಲದೆ, ಅವರ ಬ್ಯಾಂಕ್ ಆಫ್ ಬರೋಡಾ ಕುಳೂರು ಶಾಖೆಯ ಎರಡು ಖಾತೆಗಳಿಂದಲೂ ಅದೇ ದಿನ ಯುಪಿಐ ಮೂಲಕ ಪೇಮೆಂಟ್ಸ್ ಬ್ಯಾಂಕ್ ಹಾಗೂ ಯುಕೋ ಬ್ಯಾಂಕ್ ಖಾತೆಗಳಿಗೆ ₹3,14,914 ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.

ಒಟ್ಟು ₹6,91,534.88 ಹಣವನ್ನು ವಂಚಕರು ಎಗರಿಸಿದ್ದಾರೆ. ಈ ಕುರಿತು ಸಂತ್ರಸ್ತರು ತಕ್ಷಣವೇ 1930 ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ದೂರು ನೀಡಿದ್ದು, ಸದ್ಯ ಸೆನ್ (CEN) ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed