ಮಂಗಳೂರು :ಬೇರೊಬ್ಬರ ದಾಖಲೆಗಳನ್ನು ಬಳಸಿ ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ ಇಸ್ರೇಲ್‌ಗೆ ತೆರಳಿದ ಪ್ರಕರಣದಲ್ಲಿ ಇದೀಗ ಹೊಸ ಬೆಳವಣಿಗೆ ನಡೆದಿದೆ. ಪ್ರಕರಣದ A2 ಮತ್ತು A3 ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಮತ್ತೊಂದೆಡೆ A1 ಆರೋಪಿ ಇನ್ನೂ ಇಸ್ರೇಲ್‌ನಲ್ಲೇ ಇರುವುದಾಗಿ ವರದಿಯಾಗಿದೆ
ಮಂಗಳೂರು ಸಿ.ಎಸ್.ಬಿ. ಪೊಲೀಸರು ಪತ್ತೆಹಚ್ಚಿದ ಈ ಪ್ರಕರಣದಲ್ಲಿ, ಉಳ್ಳಾಲದ ಮಹಿಳೆಯೊಬ್ಬರ ದಾಖಲೆಗಳನ್ನು ಬಳಸಿ ಮತ್ತೋರ್ವ ಮಹಿಳೆಗೆ ಪಾಸ್‌ಪೋರ್ಟ್ ಮಾಡಿಕೊಡಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಆದರೆ ಇದು ಕೇವಲ ಒಂದು ಪ್ರಕರಣವೇ ಅಥವಾ ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಅನುಮಾನಗಳು ಆರಂಭದಿಂದಲೂ ವ್ಯಕ್ತವಾಗುತ್ತಿವೆ. ಉಳ್ಳಾಲ ಭಾಗದಿಂದ ಇದೇ ರೀತಿಯ ವಿಧಾನದಲ್ಲಿ ಹಲವರು ಇಸ್ರೇಲ್‌ಗೆ ತೆರಳಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ನಡುವೆ ಜಾಲದ ಪ್ರಮುಖ ಆರೋಪಿಯಾಗಿರುವ ಪ್ರೇಮ್ ಪ್ರಕಾಶ್ ಡಿ’ಸೋಜಾ ಮುಂಬೈ-ಗೋವಾ ಭಾಗದಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಹರಿದಾಡಿತ್ತು. ಪ್ರಕರಣದಲ್ಲಿ ದೊಡ್ಡ ಮಟ್ಟದ ತನಿಖೆ ನಡೆಯುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಈ ಪ್ರಕರಣದಲ್ಲಿ ನ A1 ಆರೋಪಿ ಇನ್ನು ಇಸ್ರೇಲ್ ನಲ್ಲೇ ಏನು ಆಗುವುದಿಲ್ಲ ಎಂಬ ಧೈರ್ಯದಲ್ಲಿ ಆರಾಮವಾಗಿದ್ದಾರೆ. A2 A3 ಆರೋಪಿಗೆ ಜಾಮೀನಾಗಿದ್ದು, ಈ ಗಂಭೀರ ಪ್ರಕರಣಕ್ಕೆ ಯಾಕೆ ಸರಿಯಾಗಿ ತನಿಖೆಯಾಗುತ್ತಿಲ್ಲ ಎಂಬ ಪ್ರಶ್ನೆ ಹೆಚ್ಚಿದೆ.
ಈ ನಕಲಿ ಪಾಸ್‌ಪೋರ್ಟ್ ಜಾಲದ ಸಂಪೂರ್ಣ ಸತ್ಯ ಹೊರಬರಲು ಉನ್ನತ ಮಟ್ಟದ ತನಿಖೆ ಅಗತ್ಯ ಎಂಬ ಒತ್ತಾಯ ಕೇಳಿಬರುತ್ತಿದೆ.
