,

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಶಶಿಧರ್ ಹೆಗ್ಡೆ ಬಹುತೇಕ ಖಚಿತ..!?

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನುಭವಿ‌ ಮತ್ತು ಒಂದು ಕಾಲದಲ್ಲಿ ದ.ಕ ಜಿಲ್ಲಾ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ ಶಶಿಧರ್ ಹೆಗ್ಡೆ ಅವರು ಅರ್ಜಿ ಸಲ್ಲಿಸಿದ್ದು, ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡದ ರಾಜಕೀಯ ವಲಯದಲ್ಲಿ ಶಶಿ ಅಣ್ಣ ಎಂಬ ಹೆಸರು “ಸೋಲಿಲ್ಲದ ಸರ್ದಾರ” ಎಂಬ ಹೆಸರಿನಿಂದಲೇ ಪ್ರಸಿದ್ದಿ ಪಡೆದವರು ಶಶಿಧರ್ ಹೆಗ್ಡೆ, ಮಂಗಳೂರು ಮಹಾನಗರ ಪಾಲಿಕೆಯ ಕಿಂಗ್‌ಮೇಕರ್ ಎಂದೇ ಅವರು ಗುರುತಿಸಿಕೊಂಡಿದ್ದಾರೆ. ಅವರು ಅಭಿವೃದ್ಧಿಯ ಬಗ್ಗೆ ಕೇವಲ ಮಾತನಾಡುವ ನಾಯಕನಲ್ಲ, ಅಭಿವೃದ್ಧಿಯನ್ನು…

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನುಭವಿ‌ ಮತ್ತು ಒಂದು ಕಾಲದಲ್ಲಿ ದ.ಕ ಜಿಲ್ಲಾ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ ಶಶಿಧರ್ ಹೆಗ್ಡೆ ಅವರು ಅರ್ಜಿ ಸಲ್ಲಿಸಿದ್ದು, ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

ದಕ್ಷಿಣ ಕನ್ನಡದ ರಾಜಕೀಯ ವಲಯದಲ್ಲಿ ಶಶಿ ಅಣ್ಣ ಎಂಬ ಹೆಸರು “ಸೋಲಿಲ್ಲದ ಸರ್ದಾರ” ಎಂಬ ಹೆಸರಿನಿಂದಲೇ ಪ್ರಸಿದ್ದಿ ಪಡೆದವರು ಶಶಿಧರ್ ಹೆಗ್ಡೆ, ಮಂಗಳೂರು ಮಹಾನಗರ ಪಾಲಿಕೆಯ ಕಿಂಗ್‌ಮೇಕರ್ ಎಂದೇ ಅವರು ಗುರುತಿಸಿಕೊಂಡಿದ್ದಾರೆ.

ಅವರು ಅಭಿವೃದ್ಧಿಯ ಬಗ್ಗೆ ಕೇವಲ ಮಾತನಾಡುವ ನಾಯಕನಲ್ಲ, ಅಭಿವೃದ್ಧಿಯನ್ನು ಕಾರ್ಯರೂಪಕ್ಕೆ ತರುವ ನಾಯಕ. ಅವರ ಮೇಯರ್ ಅವಧಿಯಲ್ಲಿ ನಮ್ಮ ಜಿಲ್ಲೆಯ ಮೊದಲ ನಾಲ್ಕು ಲೇನ್ ಕಾಂಕ್ರೀಟ್ ರಸ್ತೆಯ ನಿರ್ಮಾಣವೇ ಅದಕ್ಕೆ ಜೀವಂತ ಸಾಕ್ಷಿಯಾಗಿದೆ.

ಜನರು ಅವರ ಮೇಲೆ ಹೊಂದಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಮತ್ತೊಂದು ನಿದರ್ಶನವೆಂದರೆ, ಅವರು ವಿವಿಧ ವಾರ್ಡ್‌ಗಳಿಂದ ಸತತ ಐದು ಬಾರಿ ಜನರ ಆಶೀರ್ವಾದ ಪಡೆದು ಗೆಲುವು ಸಾಧಿಸಿರುವುದು.
ಅವರು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಆರಂಭಿಸಿ, ತಮ್ಮ ಪರಿಶ್ರಮ, ನಿಷ್ಠೆ ಮತ್ತು ಸಮರ್ಪಣೆಯಿಂದ ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದ ನಾಯಕ. ರಾಜಕೀಯ ಅನುಭವಿ ಮತ್ತು ಪಕ್ಷ ಕಟ್ಟುವಲ್ಲಿ ನಿಪುಣರು ಕೂಡ.

ಅವರ ಮೇಲಿನ ಪಕ್ಷದ ವಿಶ್ವಾಸಕ್ಕೆ ಸಾಕ್ಷಿಯೆಂದರೆ, ಕರ್ನಾಟಕ ಪ್ರಸ್ಥಾನಕ್ಕೆ ಕಾಂಗ್ರೆಸ್ ಸಮಿತಿ (KPCC)ಯ ಶಿಸ್ತು ಸಮಿತಿಯ ಸದಸ್ಯರಾಗಿ ಹಾಗೂ ವಿವಿಧ ಸ್ಥಳೀಯ ಸಂಸ್ಥೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ವೀಕ್ಷಕರಾಗಿ (Observer) ಮಹತ್ವದ ಜವಾಬ್ದಾರಿಗಳನ್ನು ಪಕ್ಷವು ಅವರಿಗೆ ವಹಿಸಿತ್ತು. ಆ ಎಲ್ಲಾ ಜವಾಬ್ದಾರಿಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಇವರು ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿ, ಮತ್ತು ಹಿರಿಯರು ಹೌದು, ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ನೋವು ನಲಿವುಗಳಲ್ಲಿ ಭಾಗಿಯಾಗಿ ದ.ಕ ಜಿಲ್ಲಾ ಮೂಲೆ ಮೂಲೆಗಳಲ್ಲಿ ಪಕ್ಷ ಬಲಪಡಿಸುವಲ್ಲಿ ಯಶಸ್ವಿಯಾದವರು. ಇವರ ಕಾಲದಲ್ಲಿ ದ.ಕ ಜಿಲ್ಲೆ ಎಂದರೆ ಕಾಂಗ್ರೆಸ್ ಎಂದೆ ಪ್ರಖ್ಯಾತಿ ಪಡೆದಿತ್ತು. ಇಂತಹ ಪಕ್ಷ ನಿಷ್ಠೆ ಮತ್ತು ನಾಯಕತ್ವ ಪಡೆದಿರುವ ಶಶಿಧರ್ ಹೆಗ್ಡೆ ನೂತನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಒಳ್ಳೆಯದು.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed