,

ರಾಜ್ಯದ 45 ಐಸ್‌ಕ್ರೀಂ ಘಟಕಗಳ ಮೇಲೆ ‘FSSAI’ ದಿಢೀರ್ ದಾಳಿ!!

ರಾಜ್ಯಾದ್ಯಂತ ಜನರಿಗೆ ಸರಬರಾಜಾಗುವ ಐಸ್‌ಕ್ರೀಂ ಗುಣಮಟ್ಟ ಹಾಗೂ ನೈರ್ಮಲ್ಯ ತಪಾಸಣೆಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ರಾಯಚೂರು ಸೇರಿದಂತೆ ರಾಜ್ಯದ ಒಟ್ಟು 45 ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಪರಿಶೀಲನೆಗೆ ಒಳಪಡಿಸಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಡೆದ ಈ ದಿಢೀರ್ ದಾಳಿಯು ಕಲಬೆರಕೆ ಮತ್ತು ನಕಲಿ ಐಸ್‌ಕ್ರೀಂ ಉತ್ಪಾದಕರಲ್ಲಿ ತೀವ್ರ ಆತಂಕ ಮೂಡಿಸಿದೆ. ದಾಳಿಯ ವೇಳೆ ಪ್ರಮುಖ…

ರಾಜ್ಯಾದ್ಯಂತ ಜನರಿಗೆ ಸರಬರಾಜಾಗುವ ಐಸ್‌ಕ್ರೀಂ ಗುಣಮಟ್ಟ ಹಾಗೂ ನೈರ್ಮಲ್ಯ ತಪಾಸಣೆಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ರಾಯಚೂರು ಸೇರಿದಂತೆ ರಾಜ್ಯದ ಒಟ್ಟು 45 ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಪರಿಶೀಲನೆಗೆ ಒಳಪಡಿಸಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಡೆದ ಈ ದಿಢೀರ್ ದಾಳಿಯು ಕಲಬೆರಕೆ ಮತ್ತು ನಕಲಿ ಐಸ್‌ಕ್ರೀಂ ಉತ್ಪಾದಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ದಾಳಿಯ ವೇಳೆ ಪ್ರಮುಖ ನಗರಗಳ ಪ್ರಸಿದ್ಧ ಐಸ್‌ಕ್ರೀಂ ಉತ್ಪಾದನಾ ಕೇಂದ್ರಗಳಲ್ಲಿ ಹಲವು ಗಂಭೀರ ಲೋಪದೋಷಗಳು ಕಂಡುಬಂದಿವೆ. ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನಲ್ಲಿರುವ ‘ಸಾಗರ್ ಐಸ್‌ಕ್ರೀಂ’, ಹಳ್ಳಿಯ ಬನ್ನೇರುಘಟ್ಟ ರಸ್ತೆಯಲ್ಲಿರುವ ‘ಎಎನ್ ಎಂಟರ್‌ಪ್ರೈಸಸ್’, ಮೈಸೂರಿನ ‘ಜಾನ್ ಕ್ಯಾಂಡಿ ಐಸ್‌ಕ್ರೀಂ’ ಹಾಗೂ ರಾಯಚೂರಿನ ‘ಜಮೀನಿ ಐಸ್‌ಕ್ರೀಂ’ ತಯಾರಿಕಾ ಘಟಕಗಳ ಮೇಲೆಯೂ ದಾಳಿ ನಡೆಸಿ ಜಾಲಾಡಲಾಗಿದೆ. ಈ ಪರಿಶೀಲನೆ ವೇಳೆ ಬಳಕೆಗೆ ಯೋಗ್ಯವಲ್ಲದ ಮತ್ತು ನಿಯಮ ಉಲ್ಲಂಘಿಸಿ ತಯಾರಿಸುತ್ತಿದ್ದ ಐಸ್‌ಕ್ರೀಂಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಈ ಕಾರ್ಯಾಚರಣೆ ಸಮಯದಲ್ಲಿ ತಯಾರಿಕೆಗೆ ಬಳಸುತ್ತಿದ್ದ ಹಾಲಿನ ಉತ್ಪನ್ನಗಳು, ಸಕ್ಕರೆ ಸೇರಿದಂತೆ ಒಟ್ಟು 70 ವಿವಿಧ ಆಹಾರ ಮಾದರಿಗಳನ್ನು (ಸಾCategorized Samples) ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಮುಖವಾಗಿ, ದಾಳಿ ನಡೆಸಿದ ಸ್ಥಳಗಳಲ್ಲಿ ಅವಧಿ ಮೀರಿದ (Expired) ಐಸ್‌ಕ್ರೀಂ, ಹಾಲು, ಬಿಸ್ಕತ್ತು ಹಾಗೂ ಕೊಬ್ಬರಿ ಪುಡಿಯನ್ನು ಬಳಸಿ ಐಸ್‌ಕ್ರೀಂ ತಯಾರಿಸುತ್ತಿದ್ದುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಪ್ಯಾಕೇಟ್‌ಗಳ ಮೇಲೆ ಕಡ್ಡಾಯವಾಗಿ ಇರಬೇಕಾದ ನಿಯಮಾನುಸಾರ ಲೇಬಲಿಂಗ್ (Labeling Rules) ಪಾಲಿಸದೇ ಇರುವುದು ಕಂಡುಬಂದಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports