Author: News Editor

  • ಕಟೀಲು ದೇವಸ್ಥಾನ ಬಳಿ ಪೊಲೀಸರಿಗೆ ನಿಂದನೆ: ಮಹಿಳೆ ವಿರುದ್ಧ ದೂರು ದಾಖಲು
    ,

    ಕಟೀಲು ದೇವಸ್ಥಾನ ಬಳಿ ಪೊಲೀಸರಿಗೆ ನಿಂದನೆ: ಮಹಿಳೆ ವಿರುದ್ಧ ದೂರು ದಾಖಲು

    ಬಜಪೆ : ಕಟೀಲು ದೇವಸ್ಥಾನದ ಪರಿಸರದಲ್ಲಿ ಸಂಚಾರ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಸಂಧ್ಯಾ ಎಂಬ ಮಹಿಳೆಯ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ 1ರಂದು ಬುದ್ಧ ಪೂರ್ಣಿಮಾ ಮತ್ತು ರಜಾ ದಿನವಾದ್ದರಿಂದ ಕಟೀಲು ದೇವಸ್ಥಾನದಲ್ಲಿ ಅತೀ ಹೆಚ್ಚು ಭಕ್ತರ ದಟ್ಟಣೆ ಇತ್ತು. ಮಲ್ಲಿಗೆಯಂಗಡಿ ಜಂಕ್ಷನ್ ಬಳಿ ಬಜಪೆ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಹೆಚ್.ಎನ್. ಹಾಗೂ…

    Continue Reading

  • ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಸಾಗಾಟ: ಬಂಟ್ವಾಳದಲ್ಲಿ ಇಬ್ಬರ ಬಂಧನ
    ,

    ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಸಾಗಾಟ: ಬಂಟ್ವಾಳದಲ್ಲಿ ಇಬ್ಬರ ಬಂಧನ

    ಬಂಟ್ವಾಳ : ಬಡಗಕಜೆಕ್ಕಾರು ಗ್ರಾಮದ ಪಾಂಡವರಕಲ್ಲು ಬಳಿಯ ಕೂಮಿನಡ್ಕ ಎಂಬಲ್ಲಿ ಅಕ್ರಮವಾಗಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಸಂಗ್ರಹಿಸಿಟ್ಟಿದ್ದ ಇಬ್ಬರು ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತರನ್ನು ಮುಹಮ್ಮದ್ ಸಮೀರ್ (28) ಮತ್ತು ಮಹಮ್ಮದ್ ಇರ್ಫಾನ್ (26) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿ ರಶೀದ್ ಕುಂಡಡ್ಕ ಎಂಬಾತ ಪರಾರಿಯಾಗಿದ್ದಾನೆ. ಮೇ 1ರಂದು ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟುಗಳನ್ನು ಇಟ್ಟುಕೊಂಡಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಹಿನ್ನಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು…

    Continue Reading

  • ಮಂಗಳೂರು ಸೈಬರ್ ವಂಚನೆ: ಪಾರ್ಸಲ್ ಕೊಡುತ್ತೇವೆಂದು ನಂಬಿಸಿ ಲಕ್ಷಾಂತರ ದೋಚಿಕೆ
    ,

    ಮಂಗಳೂರು ಸೈಬರ್ ವಂಚನೆ: ಪಾರ್ಸಲ್ ಕೊಡುತ್ತೇವೆಂದು ನಂಬಿಸಿ ಲಕ್ಷಾಂತರ ದೋಚಿಕೆ

    ಮಂಗಳೂರು : ದುಬೈನಿಂದ ಕಳುಹಿಸಿದ ಬೆಲೆಬಾಳುವ ಪಾರ್ಸಲ್ ನೀಡುವುದಾಗಿ ನಂಬಿಸಿ ಮಂಗಳೂರಿನ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ₹6,84,500 ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ನಗರದ ನಿವಾಸಿ 44 ವರ್ಷದ ಮಹಿಳೆಯ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಪಾರ್ಸಲ್ ಕಳುಹಿಸುತ್ತಿದ್ದರು. ಇದನ್ನು ಬಂಡವಾಳ ಮಾಡಿಕೊಂಡ ವಂಚಕರು, ಏಪ್ರಿಲ್ 21 ರಂದು ಲಂಡನ್‌ನ ನಂಬರ್‌ನಿಂದ ವಾಟ್ಸ್ ಆ್ಯಪ್ ಕರೆ ಮಾಡಿ, “ನಿಮ್ಮ ಪತಿ ಫೆಡ್‌ಎಕ್ಸ್ ಕಾರ್ಗೋ…

    Continue Reading

  • ಮದುವೆ ಹೆಸರಿನಲ್ಲಿ ವಂಚನೆ: ಮಹಿಳೆಯರನ್ನು ಬ್ಲ್ಯಾಕ್‌ಮೇಲ್ ಮಾಡಿದ ನಟ ಬಂಧನ
    ,

    ಮದುವೆ ಹೆಸರಿನಲ್ಲಿ ವಂಚನೆ: ಮಹಿಳೆಯರನ್ನು ಬ್ಲ್ಯಾಕ್‌ಮೇಲ್ ಮಾಡಿದ ನಟ ಬಂಧನ

    ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ, ಖಾಸಗಿ ವಿಡಿಯೋಗಳನ್ನು ಮುಂದಿಟ್ಟು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಿರುತೆರೆ ನಟ ಹನಿಯೂರು ಚಂದ್ರೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು 43 ವರ್ಷದ ಮೇಕಪ್ ಆರ್ಟಿಸ್ಟ್‌ ಸೇರಿದಂತೆ ಹಲವು ಮಹಿಳೆಯರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಒಂಟಿ ಮಹಿಳೆಯರನ್ನು ಪರಿಚಯಿಸಿಕೊಳ್ಳುತ್ತಿದ್ದ ಚಂದ್ರೇಗೌಡ, ತಾನು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ವಕೀಲ ಅಥವಾ ಕಾಲೇಜು ಉಪನ್ಯಾಸಕ ಎಂದು ಸುಳ್ಳು ಹೇಳುತ್ತಿದ್ದ. ಸಂತ್ರಸ್ತರಿಗೆ…

    Continue Reading

  • ಮೊಬೈಲ್ ಬಳಕೆದಾರರಿಗೆ ಎಮರ್ಜೆನ್ಸಿ ಅಲರ್ಟ್: ಸರ್ಕಾರದಿಂದ ಸ್ಪಷ್ಟನೆ
    ,

    ಮೊಬೈಲ್ ಬಳಕೆದಾರರಿಗೆ ಎಮರ್ಜೆನ್ಸಿ ಅಲರ್ಟ್: ಸರ್ಕಾರದಿಂದ ಸ್ಪಷ್ಟನೆ

    ಬೆಂಗಳೂರು: ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಏಕಾಏಕಿ ‘ಎಮರ್ಜೆನ್ಸಿ ಅಲರ್ಟ್’ ಸಂದೇಶಗಳು ಬಂದಿವೆ. ಆದರೆ, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಇದು ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ‘ಸೆಲ್ ಬ್ರಾಡ್‌ಕಾಸ್ಟ್’ ವ್ಯವಸ್ಥೆಯ ಅಧಿಕೃತ ಪರೀಕ್ಷೆಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ದೆಹಲಿಯಲ್ಲಿ ಈ ಸ್ವದೇಶಿ ವಿಪತ್ತು ಸಂವಹನ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಭಾರತದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ ಇಂದು ಈ ಪರೀಕ್ಷಾರ್ಥ…

    Continue Reading

  • ಪತ್ನಿಯ ನಡತೆಯಿಂದ ಮನನೊಂದು ತಂದೆಯಿಂದ ಭೀಕರ ಕೃತ್ಯ
    ,

    ಪತ್ನಿಯ ನಡತೆಯಿಂದ ಮನನೊಂದು ತಂದೆಯಿಂದ ಭೀಕರ ಕೃತ್ಯ

    ತುಮಕೂರು: ಚಿನ್ನಾಭರಣ ಸಹಿತ ಪರಾರಿಯಾದ ಹೆಂಡತಿಯ ನಡತೆಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನಿಬ್ಬರು ಪುಟ್ಟ ಮಕ್ಕಳನ್ನೂ ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಅಮಾನವೀಯ ಘಟನೆ ತುಮಕೂರುಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಲ್ಕೆರೆ ಗ್ರಾಮದ ಮಲ್ಲೇಶ್ವರಸ್ವಾಮಿ ದೇಗುಲದ ಅರ್ಚಕ ಹಾಗೂ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಶಿವಣ್ಣ (40) ಆತ್ಮಹತ್ಯೆ…

    Continue Reading

  • ನರ್ಸಿಂಗ್ ಕಾಲೇಜಿನಲ್ಲಿ ದುರಂತ: ವಿದ್ಯಾರ್ಥಿ ಆತ್ಮಹತ್ಯೆ, ಡೆತ್ ನೋಟ್ ಪತ್ತೆ

    ನರ್ಸಿಂಗ್ ಕಾಲೇಜಿನಲ್ಲಿ ದುರಂತ: ವಿದ್ಯಾರ್ಥಿ ಆತ್ಮಹತ್ಯೆ, ಡೆತ್ ನೋಟ್ ಪತ್ತೆ

    ಬೆಂಗಳೂರು : ಇಲ್ಲಿನ ಬೊಮ್ಮಸಂದ್ರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಎಸ್ಸಿ ನರ್ಸಿಂಗ್ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಆದಿತ್ಯನ್ ಪಿ.ಎ (19) ಏಪ್ರಿಲ್ 29ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದಿತ್ಯನ್ ತನ್ನ ಹಾಸ್ಟೆಲ್ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. “ತನ್ನ ಸಾವಿಗೆ ಯಾರೂ ಕಾರಣರಲ್ಲ” ಎಂದು ಬರೆದಿದ್ದ ಡೆತ್ ನೋಟ್ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯಾರ್ಥಿಯು ಖಿನ್ನತೆಯಿಂದ ಬಳಲುತ್ತಿದ್ದಿರಬಹುದು ಎಂದು…

    Continue Reading

  • ಹೈದರಾಬಾದ್‌ನಲ್ಲಿ ದುರಂತ ಅಂತ್ಯ: ಪತ್ನಿಯ ಸಂಬಂಧ ಆರೋಪದ ನಡುವೆ ಎಂಜಿನಿಯರ್ ಆತ್ಮಹತ್ಯೆ
    ,

    ಹೈದರಾಬಾದ್‌ನಲ್ಲಿ ದುರಂತ ಅಂತ್ಯ: ಪತ್ನಿಯ ಸಂಬಂಧ ಆರೋಪದ ನಡುವೆ ಎಂಜಿನಿಯರ್ ಆತ್ಮಹತ್ಯೆ

    ಹೈದರಾಬಾದ್: ಪತ್ನಿಯು ಮೂವರು ಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಸಾಫ್ಟ್‌ವೇರ್ ಎಂಜಿನಿಯರ್ ಸೀತಾರಾಮ್ (36) ಎಂಬವರು ಹುಸೇನ್ ಸಾಗರ್ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಬರೆದಿಟ್ಟಿರುವ 19 ಪುಟಗಳ ಡೆತ್‌ನೋಟ್‌ನಲ್ಲಿ ಪತ್ನಿಯ ವರ್ತನೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸೀತಾರಾಮ್ ಅವರ ಪತ್ನಿ ರೇಣುಕಾ (30) ಕಳೆದ ಒಂದೂವರೆ ವರ್ಷಗಳಿಂದ ಮೂವರು ಪುರುಷರೊಂದಿಗೆ ಸಂಬಂಧ ಹೊಂದಿದ್ದರು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ ರಮಣ ಎಂಬಾತ ರೇಣುಕಾ ಜೊತೆಗಿದ್ದ ಖಾಸಗಿ…

    Continue Reading

  • ಮಾಲೀಕನ ಮೇಲೆ ಆ್ಯಸಿಡ್ ದಾಳಿ ಯತ್ನ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ
    ,

    ಮಾಲೀಕನ ಮೇಲೆ ಆ್ಯಸಿಡ್ ದಾಳಿ ಯತ್ನ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

    ಉಡುಪಿ: ಕೆಲಸದ ವಿಷಯದಲ್ಲಿ ಉಂಟಾದ ಸಣ್ಣ ಜಗಳದಿಂದಾಗಿ ತನ್ನ ಮಾಲೀಕನ ಮೇಲೆ ಆ್ಯಸಿಡ್ ಸುರಿದು ಕೊಲೆಗೆ ಯತ್ನಿಸಿದ ಕೇರಳ ಮೂಲದ ವ್ಯಕ್ತಿಗೆ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕೇರಳ ಮೂಲದ ರತೀಶ್ ಕೆ.ಟಿ. (42) ಶಿಕ್ಷೆಗೊಳಗಾದ ಆರೋಪಿ. ಘಟನೆಯ ವಿವರ:2022ರ ಫೆಬ್ರವರಿ 28ರಂದು, ಕೇರಳದ ತ್ರಿಶೂರ್ ಜಿಲ್ಲೆಯ ಸುಧೀರ್ ಪಿ.ಎ. ಅವರು ಹೆಬ್ರಿ ತಾಲೂಕಿನ ಚಾರ…

    Continue Reading

  • ಬಿರುಗಾಳಿಗೆ ಸಿಲುಕಿದ ಬೋಟ್ ದುರಂತ: 9 ಮಂದಿ ಮೃತ್ಯು, ರಕ್ಷಣಾ ಕಾರ್ಯ ಮುಂದುವರಿಕೆ
    ,

    ಬಿರುಗಾಳಿಗೆ ಸಿಲುಕಿದ ಬೋಟ್ ದುರಂತ: 9 ಮಂದಿ ಮೃತ್ಯು, ರಕ್ಷಣಾ ಕಾರ್ಯ ಮುಂದುವರಿಕೆ

    ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ ಪ್ರವಾಸಿ ಬೋಟ್‌ನಲ್ಲಿದ್ದ ಉಳಿದ ಐವರ ಮೃತದೇಹಗಳನ್ನು ಶುಕ್ರವಾರ ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದು, ಈ ಮೂಲಕ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಏ.30ರ ಸಂಜೆ ಬೋಟ್‌ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ವೇಳೆ ಅದು ಹಠಾತ್ ಬಿರುಗಾಳಿಗೆ ಸಿಲುಕಿ, ದುರಂತ ಸಂಭವಿಸಿದೆ. ದುರಂತವಾದ ತಕ್ಷಣವೇ ನಾಲ್ಕು ಜನರ ಮೃತದೇಹ ಸಿಕ್ಕಿತ್ತು, ಇದೀಗ ಐದು ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿದೆ. ಇದುವರೆಗೆ 28 ಜನರನ್ನು ರಕ್ಷಿಸಲಾಗಿದೆ ಎಂದು…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed