Author: News Editor
-

ಮಂಗಳೂರು ಜೈಲಿನಲ್ಲಿ ಅಚ್ಚರಿ ಪ್ರಕರಣ: ಬಂಧಿಯ ದೇಹದೊಳಗೆ ಅಡಗಿಸಿದ್ದ ಮೊಬೈಲ್ ವಶ
ಮಂಗಳೂರು : ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾ ಬಂಧಿಯೊಬ್ಬ ಕಾರಾಗೃಹಕ್ಕೆ ಮರಳುವಾಗ ಗುದದ್ವಾರದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟು ತಂದಿದ್ದ ಘಟನೆ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಈ ಸಂಬಂಧ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಹಮ್ಮದ್ ತೋಹಿದ್ ಎಂಬ ವಿಚಾರಣಾ ಬಂಧಿಯನ್ನು ಏಪ್ರಿಲ್ 24ರಂದು ಚಿಕಿತ್ಸೆಗಾಗಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 29ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಸಂಜೆ 5:15ಕ್ಕೆ ಬೆಂಗಾವಲು ಸಿಬ್ಬಂದಿಯೊಂದಿಗೆ ಕಾರಾಗೃಹದ ಮುಖ್ಯದ್ವಾರಕ್ಕೆ ಆತನನ್ನು ಕರೆತರಲಾಯಿತು. ಮುಖ್ಯದ್ವಾರದಲ್ಲಿ ಕರ್ತವ್ಯದಲ್ಲಿದ್ದ…
-

ಉಳ್ಳಾದಲ್ಲಿ ಉದ್ಯಮಿಗಳಿಂದ ಅಕ್ರಮ ಗೆಸ್ಟ್ ಹೌಸ್..!! ವಿದ್ಯುತ್ ಸಮಸ್ಯೆಯಿಂದ ಕಂಗಾಲದ ಊರಿನವರು
ಮಂಗಳೂರು: ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿ ಮತ್ತು ಪೆರಿಬೈಲ್ ಸಮುದ್ರ ತೀರದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಮೀನುಗಾರರ ಹೆಸರಲ್ಲಿ ಅಕ್ರಮವಾಗಿ ಗೆಸ್ಟ್ ಹೌಸ್ ದಂಧೆಯನ್ನು ನಡೆಸುತ್ತಾ ಹತ್ತಾರು ರೂಮ್ ಗಳಿಗೆ ಎ. ಸಿ ಇಟ್ಟು ಇಲ್ಲಿಗೆ ಬರುವ ಪವರ್ ಸಪ್ಲೈ ನ್ನು ಕದ್ದು ಮುಚ್ಚಿ ಇಲ್ಲವೇ ಇನ್ಫ್ಲುಯೆನ್ಸ್ ಮಾಡಿ ಉಪಯೋಗಿಸುತ್ತಿದ್ದಾರೆ. ಇದರಿಂದಾಗಿ ಊರಿನ ಉಳಿದ ಮನೆಗಳಿಗೆ ವೋಲ್ಟೇಜ್ ಕಡಿಮೆ ಆಗಿ ಮನೆಯ ಎಲೆಕ್ಟ್ರಿಕಲ್ ಉಪಕರಣ ಶಾರ್ಟ್ ಆಗಿ ಹಾಳಾಗುತ್ತಿದೆ… ಆದುದರಿಂದ ಬಂಡವಾಳ ಸಾಹಿಗಳ ಹಣದ ಅಕ್ರಂದಾಣಕ್ಕೆ ಊರಿನವರು ಬಲಿಯಾಗುತ್ತಿದ್ದಾರೆ,…
-

ಕೊಡಲಿಯಿಂದ ಹೊಡೆದು ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿ ಪತಿ ಶರಣಾಗತಿ
ಮೈಸೂರು: ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ಸಣ್ಣ ಕಾರಣಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪತಿ ಮಹೇಶ್ ಪತ್ನಿ ಪುಷ್ಪ(24) ಅವರನ್ನು ಕೊಡಲಿಯಿಂದ ಹೊಡೆದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಮೃತ ಪುಷ್ಪ ಅವರು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಅವರು ಪ್ರತಿದಿನ ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದರು.…
-

ಲೋಕಾಯುಕ್ತ ದಾಳಿ: ಆರ್‌ಟಿಓ ಕಚೇರಿ ಸಿಬ್ಬಂದಿ ಸಹಿತ ಇಬ್ಬರ ಬಂಧನ
ಕೊಪ್ಪಳ: ಲಂಚದ ಹಣ ಸ್ವೀಕರಿಸಿದ ಆರೋಪದ ಮೇಲೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಓ)ಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಂಜಿತ್ ಸಹಾಜಾನಂದ(30) ಆರ್‌ಟಿಓ ಕಚೇರಿ ದ್ವಿತೀಯ ದರ್ಜೆ ಸಹಾಯಕ, ಹಾಗೂ ವಿನಯಕುಮಾರ(32) ಡ್ರೈವಿಂಗ್ ಸ್ಕೂಲ್ ಗುಮಾಸ್ತ ಎಂದು ಗುರುತಿಸಲಾಗಿದೆ. ಲಂಚ ನೀಡಲು ಇಚ್ಛಿಸದ ನಈಮ್ ಅಕ್ರಮ್ ಕೆ.ಎಸ್. ಎಂಬವರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಶೋರೂಮ್‌ಗಳಿಗೆ ಟ್ರೇಡ್ ಲೈಸೆನ್ಸ್ ನೀಡಲು 21,000 ರೂ.…
-

ಹೋಂಗಾರ್ಡ್ಸ್, ರಿಸರ್ವ್ ಪೊಲೀಸ್ & ಎಎಸೈಗಿಂತ ಕಡಿಮೆ ದರ್ಜೆಯ ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕ ವಾಹನಗಳನ್ನು ಅಡ್ಡಗಟ್ಟಿದರೆ ಕ್ರಮ
ರಾಜ್ಯದ ಗೃಹರಕ್ಷಕ ದಳ, ಸಶಸ್ತ್ರ ಪೊಲೀಸ್ ಹಾಗೂ ಎಎಸೈ ದರ್ಜೆಗಿಂತ ಕೆಳಹಂತದ ಪೊಲೀಸ್ ಸಿಬ್ಬಂದಿಗಳು ನಿಯಮಬಾಹಿರವಾಗಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸರ್ಕಾರಿ ವಾಹನಗಳನ್ನು ಬಳಸಿಕೊಂಡು ವಾಹನ ತಪಾಸಣಾ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ, ಪ್ರಕರಣ ದಾಖಲಿಸುವುದಾಗಿ ಹೆದರಿಸಿ, ಬೆದರಿಸಿ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವ ಘಟನೆಗಳನ್ನು ಕೂಡಲೇ ನಿಲ್ಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಡಿಜಿ & ಐಜಿಪಿರವರಿಗೆ ಪತ್ರ ಬರೆದ ನಿಮಿತ್ಯ ಆಯಾ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಚಟುವಟಿಕೆಗಳ ವಿರುದ್ಧ ವಿಶೇಷ ಮತ್ತು ನಿರಂತರ ಕಾರ್ಯಾಚರಣೆ ಕೈಗೊಂಡು ಸಿಬ್ಬಂದಿಗಳ…
-

ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ..!
ಉಡುಪಿ : ಸುದೀಪ್ ಶೆಟ್ಟಿ ಆತ್ಮಹತ್ಯೆ ಸಂಬಂಧ ಪೊಲೀಸ್ ವಶದಲ್ಲಿದ್ದ ಆತನ ಪತ್ನಿ ಸೌಮ್ಯ ಶೆಟ್ಟಿಗೆ ಉಡುಪಿ ಸೆಸನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಮಾ. 22ರಂದು ಸುದೀಪ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಸೌಮ್ಯ ಶೆಟ್ಟಿ ಪ್ರಚೋದನೆ ಕಾರಣ ಎಂದು ಸುದೀಪ್ ತಂದೆ ದಾಮೋದರ್ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸೌಮ್ಯ ಶೆಟ್ಟಿಯನ್ನು ಎ. 11ರಂದು ಉಡುಪಿಯಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿಗಾಗಿ ಸೌಮ್ಯ ಶೆಟ್ಟಿ ಉಡುಪಿ ಸೆಸನ್ಸ್ ನ್ಯಾಯಾಲಯಕ್ಕೆ ಅರ್ಜಿ…
-

ಮಂಗಳೂರಿನಲ್ಲಿಯೂ ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆಎತ್ತಿ ನಿಂತ ಹೋಂಸ್ಚೇ & ರೆಸಾರ್ಟ್ !! ಇವುಗಳಿಗೆ ಕಾನೂನು ಕ್ರಮ ಯಾವಾಗ??
ಮಂಗಳೂರು: ಕೊಡಗಿನ ಹೋಂಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ.ಇದೆ ರೀತಿ ಮಂಗಳೂರಿನಲ್ಲಿಯೂ ಅದೆಷ್ಟೋ ಅಕ್ರಮ ಹೋಂ ಸ್ಟೇಗಳಿವೆ. ಯಾವುದೇ ಕಾನೂನಿನ ಭಯವಿಲ್ಲದೆ, ಕೆಲವು ರಾಜಕೀಯ ಹಾಗೂ ಅಧಿಕಾರಿಗಳ ಪ್ರಭಾವದಿಂದ ರಾಜಾರೋಷವಾಗಿ ಅಕ್ರಮ ಹೋಂ ಸ್ಟೇಗಳು ಕಾರ್ಯಚರಿಸುತ್ತಿದೆ. ಪ್ರಮುಖವಾಗಿ ಮಂಗಳೂರು ನಗರದಲ್ಲಿ ಅಲ್ಲಲ್ಲಿ ನಾಯಿ ಕೊಡೆಗಳಂತೆ…
-

BREAKING : ಭ್ರೂಣಲಿಂಗ ಪತ್ತೆಗಾಗಿ ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್ : ಮೂವರು ವೈದ್ಯರು ಅರೆಸ್ಟ್!
ಮಂಡ್ಯ : ಕಳೆದ ವರ್ಷ ಮಂಡ್ಯ ಮೈಸೂರು ಭಾಗದಲ್ಲಿ ಭ್ರೂಣಲಿಂಗ ಪತ್ತೆ & ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಮಂಡ್ಯದಲ್ಲಿ ಮತ್ತೆ ಭ್ರೂಣಲಿಂಗ ಪತ್ತೆಗಾಗಿ ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪೊಲೀಸರು ಮೂವರು ವೈದ್ಯರನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಹೌದು ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡಿದ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಕೆ ಆರ್ ಪೇಟಿಯ ಚೇತನ ಮೆಟರ್ನಿಟಿ ಸೆಂಟರ್ ನ ದಿವ್ಯ ಚೇತನ್, ಕೆಆರ್ ಪೇಟೆ ನಾವಿ…
-

ಗುರುಪುರ: ಸ್ಕೂಟರ್ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು
ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ ಖಾರದ ಪುಡಿ ಎರಚಿ ಸ್ಕೂಟರ್ ಡಿಕ್ಕಿಯಲ್ಲಿದ್ದ 46 ಸಾವಿರ ರೂ. ದೋಚಿರುವ ಘಟನೆ ವರದಿಯಾಗಿದೆ. ಗಂಜಿಮಠದ ಝಾರಾ ಹಾಲ್‌ನಲ್ಲಿ ಅಡುಗೆ ಮೇಲ್ವಿಚಾರಕರಾಗಿದ್ದ ಮಹಮ್ಮದ್ ಮನ್ಸೂರ್ ಹಣ ಕಳೆದು ಕೊಂಡವರು. ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದಂತೆ, ಎ.26ರಂದು ರಾತ್ರಿ 9:10ರ ವೇಳೆಗೆ ಬಂಗ್ಲಗುಡ್ಡೆಗೆ ತಲುಪಿ ದ್ದಾರೆ. ಆಗ ರಸ್ತೆಯ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರು ಮನ್ಸೂರ್ ಅವರ ಸ್ಕೂಟರ್‌ನ್ನು ನಿಲ್ಲಿಸಿ, ತಮ್ಮ ಸ್ಕೂಟರ್ ಕೆಟ್ಟಿದೆ ಎಂದು ಹೇಳಿದ್ದಾರೆ. ಮನ್ಸೂರ್…
-

ಉಡುಪಿ: 32 ಅಕ್ರಮ ಹೋಂ ಸ್ಟೇಗಳು ಪತ್ತೆ..!! ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ
ಉಡುಪಿ: ಕೊಡಗಿನ ಹೋಂಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ. ಮಾನ್ಯ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ 32 ಅಕ್ರಮ ಹೋಂಸ್ಟೇಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











