ಮಂಗಳೂರು: ಕೊಡಗಿನ ಹೋಂಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ.
ಇದೆ ರೀತಿ ಮಂಗಳೂರಿನಲ್ಲಿಯೂ ಅದೆಷ್ಟೋ ಅಕ್ರಮ ಹೋಂ ಸ್ಟೇಗಳಿವೆ. ಯಾವುದೇ ಕಾನೂನಿನ ಭಯವಿಲ್ಲದೆ, ಕೆಲವು ರಾಜಕೀಯ ಹಾಗೂ ಅಧಿಕಾರಿಗಳ ಪ್ರಭಾವದಿಂದ ರಾಜಾರೋಷವಾಗಿ ಅಕ್ರಮ ಹೋಂ ಸ್ಟೇಗಳು ಕಾರ್ಯಚರಿಸುತ್ತಿದೆ.
ಪ್ರಮುಖವಾಗಿ ಮಂಗಳೂರು ನಗರದಲ್ಲಿ ಅಲ್ಲಲ್ಲಿ ನಾಯಿ ಕೊಡೆಗಳಂತೆ ಹೋಂ ಸ್ಟೇ ಮತ್ತು ರೆಸಾರ್ಟ್ ಗಳು ತುಂಬಿದೆ, ಮಂಗಳೂರು ಮಹಾನಗರ ಪಾಲಿಕೆಯಿಂದ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲ,ಉಳ್ಳಾಲದಲ್ಲಿ, ಸೋಮೇಶ್ವರದಲ್ಲಿ, ಉಚ್ಚಿಲದಲ್ಲಿ, ತಲಪಾಡಿಯಲ್ಲೂ ಅನಾದಿಕ್ರತ ರೆಸಾರ್ಟ್, ಹೊಂಸ್ಟೇ ಇರುತ್ತದೆ, ಇದರ ಬಗ್ಗೆ ಮುಂಜಾಗ್ರತ ಕ್ರಮವಾಗಿ ಪೋಲಿಸ್ ಇಲಾಖೆಯವರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,
