Author: News Editor
-

ಉಡುಪಿ: ಇಬ್ಬರು ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಿ ಆದೇಶ
ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ನೌಫಿಲ್ ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಹಾನ್ ಪೂಜಾರಿ ಎಂಬುವರನ್ನು ಗಡಿಪಾರು ಮಾಡಿ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ. ಆರೋಪಿಗಳ ಪೈಕಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ಕಳತ್ತೂರು ನಿವಾಸಿ ಮಹಮ್ಮದ್ ನೌಫಿಲ್ ಈತನ ವಿರುದ್ಧ 5 ಪ್ರಕರಣ ದಾಖಲಾಗಿದ್ದು ಶಿರ್ವ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿರುತ್ತದೆ. ಅಂತೆಯೇ ಮಲ್ಪೆ ಠಾಣಾ ವ್ಯಾಪ್ತಿಯ ನಿವಾಸಿ ಸುಹಾನ್ ಪೂಜಾರಿ ವಿರುದ್ಧ 4…
-

ಉಡುಪಿ : ಮಟ್ಕಾ ದಂಧೆ – ಆರೋಪಿಗಳು ಅರೆಸ್ಟ್!!
ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಪುನಿತ್ ಕುಮಾರ್ ಮತ್ತು ತಂಡದವರು ಗಸ್ತು ಕರ್ತವ್ಯದಲ್ಲಿದ್ದಾಗ ಪೆರ್ಡೂರು ಗ್ರಾಮದ ಕುಕ್ಕೆಹಳ್ಳಿ ರಸ್ತೆಯ ದಿನೇಶ್ ಎಂಬುವವರ ದಿನಸಿ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಜೂಜಾಟ ನಡೆಸುತ್ತಿದ್ದ ದಿನೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾನು ಸಂಗ್ರಹಿಸಿದ ಹಣವನ್ನು ರಾಘವೇಂದ್ರ ಅಲಿಯಾಸ್ ರಾಘಣ್ಣ ಎಂಬುವವರು ತೆಗೆದುಕೊಂಡು ಹೋಗುತ್ತಾರೆ ಎಂದು ಆರೋಪಿ ತಿಳಿಸಿದ್ದಾನೆ. ಬಂಧಿತರಿಂದ ₹1,010 ನಗದು,…
-

ಮಂಗಳೂರು: ಆರೀಫ್ ನ ಬರ್ಬರ ಹತ್ಯೆ- ಬುಡೋಳಿಯಲ್ಲಿ ಪತ್ತೆಯಾಯ್ತು ಹಂತಕರು ಬಳಸಿದ್ದ ಕಾರು!
ಮಂಗಳೂರು: ಫ್ಲೈಓವರ್ ಮೇಲೆ ಇಂದು ಮಾರ್ಚ್ 27ರಂದು ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದ ರೌಡಿಶೀಟರ್ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ. ಕೃತ್ಯಕ್ಕೆ ಬಳಸಲಾಗಿದ್ದ ಕಾರು ಬಂಟ್ವಾಳ ತಾಲೂಕಿನ ಬುಡೋಳಿ ಎಂಬಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಿಫ್‌ನನ್ನು ಬೈಕ್‌ನಿಂದ ಕೆಡವಿ ಹತ್ಯೆ ಮಾಡಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ನಡುವೆ ಬಂಟ್ವಾಳದ ಬುಡೋಳಿಯಲ್ಲಿ ಸಂಶಯಾಸ್ಪದ ಕಾರು ಇರುವ ಬಗ್ಗೆ ಮಾಹಿತಿ ಲಭಿಸಿದ…
-

ಮಂಗಳೂರು: ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳಿಂದ ತಲಾವಾರು ದಾಳಿ..!! ಆರೀಫ್ ನ ಬರ್ಬರ ಹತ್ಯೆ
ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ (46) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣವೇ, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ…
-

ಬಿಟ್‌ಕಾಯಿನ್ ಹೂಡಿಕೆ ನೆಪದಲ್ಲಿ ₹17 ಲಕ್ಷ ವಂಚನೆ: ಪ್ರಕರಣ ದಾಖಲು!!
ಕುಂದಾಪುರ :ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಭಾರೀ ವಂಚನೆ ನಡೆದ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಹಾಲಾಡಿ ಗ್ರಾಮದ 43 ವರ್ಷದ ಯಶೋಧ ಅವರು ನೀಡಿದ ದೂರಿನ ಪ್ರಕಾರ, ಅಂಕದಕಟ್ಟೆಯ ಚಂದ್ರಿಕಾ (38) ಮತ್ತು ಶಿವಮೊಗ್ಗದ ಭಾಸ್ಕರ (45) ಇವರಿಬ್ಬರು ಬಿಟ್‌ಕಾಯಿನ್ ಹೂಡಿಕೆ ಮೂಲಕ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಕೆ ಮೂಡಿಸಿದ್ದರು. ಬೈಂದೂರಿನ ಪ್ರದೀಪ್ ಶೆಟ್ಟಿ ಮೂಲಕ ಸಂಪರ್ಕ ಸಾಧಿಸಿ, ಕೋಟೇಶ್ವರ ಗ್ರಾಮದ ಅಂಕದಕಟ್ಟೆ ಸಹನಾ ಹಾಲ್ ಸಮೀಪ ಇರುವ ಕಚೇರಿಗೆ ಹಣ ತರಲು ಸೂಚಿಸಿದ್ದರು. ದೂರಿನ ಪ್ರಕಾರ, ಕಚೇರಿಗೆ…
-

ಬೆಳ್ತಂಗಡಿ: ಬೆಳಾಲು ಸೊಸೈಟಿ ವಂಚನೆ ಕೇಸ್..!! ಪರಾರಿಯಾಗಿದ್ದ ಎರಡನೇ ಆರೋಪಿ ಬಂಧನ
ಬೆಳ್ತಂಗಡಿ : ಬೆಳಾಲು ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಸುಮಾರು 2 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಾಲು ನಿವಾಸಿ ಪ್ರಶಾಂತ್ ಬಿ. ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದಾಶಿವ ಯಾನೆ ಸುಜಿತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನೊಬ್ಬ ಆರೋಪಿಯಾಗಿದ್ದ ಪ್ರಶಾಂತ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಸಹಕಾರಿ ಸಂಘದ ಸಿಬ್ಬಂದಿಗಳಾದ ಸದಾಶಿವ ಯಾನೆ ಸುಜಿತ್ ಹಾಗೂ ಪ್ರಶಾಂತ್ ಬಿ. ಅವರು…
-

ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ
ಬೆಂಗಳೂರು : ರಾಜ್ಯದಲ್ಲಿ ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವುದನ್ನು ತಡೆಯಲು ಮತ್ತು ಮದ್ಯ ಖರೀದಿ ಮಾಡುವವರ ವಯಸ್ಸಿನ ದೃಢೀಕರಣವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಹೆಜ್ಜೆ ಇರಿಸಿದೆ. ಮದ್ಯದ ಅಂಗಡಿ ಹಾಗೂ ಬಾರ್‌ಗಳಲ್ಲಿ ಗ್ರಾಹಕರ ವಯಸ್ಸಿನ ಪುರಾವೆ ಪರಿಶೀಲಿಸುವುದನ್ನು ಕಡ್ಡಾಯಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಬಾರ್ ಮಾಲೀಕರ ಸಂಘಕ್ಕೆ ನೋಟಿಸ್ ಜಾರಿ ಮಾಡಿದೆ. ಅಪ್ರಾಪ್ತರಿಗೆ ಮದ್ಯ ಪೂರೈಕೆ ಮತ್ತು ಬ್ರಿವರಿಂಗ್ ಕಂಪನಿಗಳು ಸೇರಿದಂತೆ ಮದ್ಯ ಸರಬರಾಜು ಸಂಸ್ಥೆಗಳಲ್ಲಿ ಅವರ…
-

ಮದ್ಯ ಮಾರಾಟಕ್ಕೆ ವಯಸ್ಸಿನ ಪುರಾವೆ ಕಡ್ಡಾಯ: ಬಾರ್ ಮಾಲೀಕರಿಗೆ ಹೈಕೋರ್ಟ್ ಖಡಕ್ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವುದನ್ನು ತಡೆಯಲು ಮತ್ತು ಮದ್ಯ ಖರೀದಿ ಮಾಡುವವರ ವಯಸ್ಸಿನ ದೃಢೀಕರಣವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಹೆಜ್ಜೆ ಇರಿಸಿದೆ. ಮದ್ಯದ ಅಂಗಡಿ ಹಾಗೂ ಬಾರ್‌ಗಳಲ್ಲಿ ಗ್ರಾಹಕರ ವಯಸ್ಸಿನ ಪುರಾವೆ ಪರಿಶೀಲಿಸುವುದನ್ನು ಕಡ್ಡಾಯಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಬಾರ್ ಮಾಲೀಕರ ಸಂಘಕ್ಕೆ ನೋಟಿಸ್ ಜಾರಿ ಮಾಡಿದೆ. ಕಡ್ಡಾಯ ಗುರುತಿನ ಚೀಟಿ: ಇನ್ನು ಮುಂದೆ ಬಾರ್, ರೆಸ್ಟೋರೆಂಟ್ ಅಥವಾ ವೈನ್ ಶಾಪ್‌ಗಳಲ್ಲಿ ಮದ್ಯ ಖರೀದಿಸುವ ಮುನ್ನ…
-

ಅಮೆರಿಕ–ಇರಾನ್ ಸಂಘರ್ಷ: ತೆರೆಮರೆಯಲ್ಲಿ ಇರಾನ್ ಮೇಲೆ ಯುದ್ದಕ್ಕೆ ಸೌದಿ ‘ಗೇಮ್ ಪ್ಲಾನ್’?
ವಾಷಿಂಗ್ಟನ್/ರಿಯಾದ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸೃಷ್ಟಿಯಾಗಿರುವ ಯುದ್ಧದ ಕಾರ್ಮೋಡಗಳ ಹಿಂದೆ ಸೌದಿ ಅರೇಬಿಯಾದ ಚದುರಂಗದಾಟವಿದೆಯೇ? ಇಂತಹದೊಂದು ಗಂಭೀರ ಚರ್ಚೆ ಈಗ ಜಾಗತಿಕ ಭೌಗೋಳಿಕ ರಾಜಕೀಯ ವಲಯದಲ್ಲಿ ತೀವ್ರವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಜತಾಂತ್ರಿಕತೆಗೆ ಅವಕಾಶ ನೀಡಲು ಮುಂದಾಗಿದ್ದರೂ, ಸೌದಿ ಅರೇಬಿಯಾ ಮಾತ್ರ ಇರಾನ್ ಆಡಳಿತವನ್ನು ಹತ್ತಿಕ್ಕಲು ವಾಷಿಂಗ್ಟನ್ ಮೇಲೆ ನಿರಂತರ ಒತ್ತಡ ಹೇರುತ್ತಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.ವರದಿಯ ಪ್ರಕಾರ,…
-

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ – ಮಂಗಳೂರು-ಸೂರತ್ ವಿಶೇಷ ರೈಲು ಇನ್ನು ಮುಂದೆ ಖಾಯಂ ಸೇವೆ
ಮಂಗಳೂರು: ವಾರದಲ್ಲಿ ಎರಡು ದಿನ ಸಂಚರಿಸುವ ಸೂರತ್-ಮಂಗಳೂರು ಜಂಕ್ಷನ್-ಸೂರತ್ ವಿಶೇಷ ರೈಲನ್ನು ಖಾಯಂಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದು, ಮಂಗಳೂರು-ಸೂರತ್ ವಿಶೇಷ ರೈಲು ಇನ್ನುಮುಂದೆ ಖಾಯಂ ರೈಲು ಸೇವೆ ನೀಡಲಿದೆ. ಕರಾವಳಿ ಕರ್ನಾಟಕದಿಂದ ಮುಂಬಯಿ ಬೆಸೆದು ಸೂರತ್ ತಲುಪುವ ಈ ರೈಲು ಈವರೆಗೆ ವಿಶೇಷ ರೈಲಾಗಿ ಸಾಗುತ್ತಿತ್ತು. ವಾರಕ್ಕೆರಡು ಬಾರಿ ಸೇವೆ ನೀಡುವ ಈ ರೈಲನ್ನು ಈ ಖಾಯಂ ರೈಲಾಗಿ ಘೋಷಿಸಿದ್ದು ಕರಾವಳಿ ಜನರಿಗೆ ಇದು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











