Author: News Editor
-

ಟೊಮ್ಯಾಟೋ ಬೆಲೆ ಕುಸಿತ; ರೈತರು ಕಂಗಾಲು
ಕರ್ನಾಟಕದ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ಬೆಲೆಯು ತೀವ್ರವಾಗಿ ಕುಸಿದಿದ್ದು, ವಿಶೇಷವಾಗಿ ವಿಜಯನಗರ ಜಿಲ್ಲೆಯಲ್ಲಿ 1000-1200 ರೂ. ಇದ್ದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 100-80 ರೂ.ಗೆ ಕುಸಿದಿದೆ. ಬೆಲೆ ಕುಸಿತದಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹಾಕಿದ ಬಂಡವಾಳವೂ ವಾಪಸ್ ಬಾರದೆ ಕಂಗಾಲಾಗಿದ್ದಾರೆ. ಕೇವಲ ವಿಜಯನಗರ ಮಾತ್ರವಲ್ಲದೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರುಕಟ್ಟೆಗಳಲ್ಲೂ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಕೆಲವು ಕಡೆಗಳಲ್ಲಿ ವ್ಯಾಪಾರಿಗಳು 20 ರೂ.ಗೆ 2 ರಿಂದ 4 ಕೆಜಿ ಟೊಮ್ಯಾಟೋವನ್ನು ಮಾರಾಟ ಮಾಡುತ್ತಿದ್ದಾರೆ. ಇರಾನ್ –…
-

ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ- ವಿಧಾನಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಆಕ್ರೋಶ
ಬೆಂಗಳೂರು : “ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಚುನಾಯಿತ ಶಾಸಕರಿಗಿಂತ ಪರಾಜಿತ ಅಭ್ಯರ್ಥಿಗಳ ಪತ್ರಕ್ಕೇ ಹೆಚ್ಚಿನ ಬೆಲೆ ಸಿಗುತ್ತಿದೆ,” ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ರಾಜೇಶ್ ನಾಯ್ಕ್ , “ಮಾಜಿ ಸಚಿವ ರಮಾನಾಥ್ ರೈ ಅವರನ್ನು ಅಧಿಕಾರಿಗಳು ಇಂದಿಗೂ ಸಚಿವ ಎಂದೇ ಭಾವಿಸಿದಂತಿದೆ. ಕಾಮಗಾರಿಗಳ ಏಜೆನ್ಸಿಗಳನ್ನು ಗುರುತಿಸಲು ಮಾಜಿ ಶಾಸಕರಿಗೆ ಅಧಿಕಾರಿಗಳು ಪತ್ರ ಬರೆಯುತ್ತಿದ್ದಾರೆ. ಲೋಕೋಪಯೋಗಿ ಮತ್ತು ಸಮಾಜ…
-

ಮಂಗಳೂರು: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮಂಗಳೂರು: ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ 2009 ರಲ್ಲಿ ಕಾಪಿರೈಟ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ನಾಟೆಕಲ್ ನಿವಾಸಿ ರಿಯಾಜ್ ಎಂಬಾತನನ್ನು 17 ವರ್ಷಗಳ ಬಳಿಕ ಇದೀಗ ಬಂಧಿಸಲಾಗಿದೆ. ಬರ್ಕೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೊಪಿಯನ್ನು ಮಾರ್ಚ್ 24 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ. ನ್ಯಾಯಾಲಯವು 2016 ರಲ್ಲಿ ಈ ಪ್ರಕರಣವನ್ನು ಎಲ್ ಪಿ ಸಿ ಅಂದರೆ ಲಾಂಗ್ ಪೆಂಡಿಗ್ ಕೇಸ್…
-

ಮಂಗಳೂರು: ಪಾಲಿಕೆಯಲ್ಲಿ ಪ್ರಮಾಣಪತ್ರಕ್ಕಾಗಿ ಸಾರ್ವಜನಿಕರ ಪರದಾಟ; ಅಧಿಕಾರಿಗಳ ವಿರುದ್ಧ ಆಕ್ರೋಶ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದು, ಪಾಲಿಕೆ ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಸಾರ್ವಜನಿಕರು ಪ್ರಮಾಣಪತ್ರಕ್ಕಾಗಿ ಪಾಲಿಕೆಗೆ ಅಲೆಯುತ್ತಿದ್ದಾರೆ. ಮಂಗಳವಾರ ಮುಂಜಾನೆಯಿಂದಲೇ ನೂರಕ್ಕೂ ಅಧಿಕ ಮಂದಿ ಕ್ಯೂನಲ್ಲಿ ನಿಂತಿದ್ದರೂ, ಮಧ್ಯಾಹ್ನ 3 ಗಂಟೆಯವರೆಗೆ ಕೌಂಟರ್ ತೆರೆದಿರಲಿಲ್ಲ. ಸಂಜೆ ವೇಳೆಗೆ ಕೌಂಟರ್ ತೆರೆದ ಸಿಬ್ಬಂದಿ, ಕೇವಲ 20 ಮಂದಿಗೆ ಮಾತ್ರ ಟೋಕನ್ ನೀಡುವುದಾಗಿ ಹೇಳಿದ್ದು ಸಾರ್ವಜನಿಕರ…
-

ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿಗೆ ಬಂಧನ- 10ಕ್ಕೂ ಹೆಚ್ಚು ವಾರಂಟ್ ಹೊಂದಿದ್ದ ವ್ಯಕ್ತಿ ಪೊಲೀಸರ ಬಲೆಗೆ
ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ :117/2019 ಹಾಗೂ ಅ.ಕ್ರ :111/2020 ಪ್ರಕರಣಗಳಿಗೆ ಸಂಬಂಧಿಸಿದಂತೆ, ಬಂಟ್ವಾಳ ACJ & JMFC ನ್ಯಾಯಾಲಯಕ್ಕೆ ಹಲವು ಬಾರಿ ಹಾಜರಾಗದೇ ತಪ್ಪಿಸಿಕೊಂಡಿದ್ದ ಬಂಟ್ವಾಳ ವೀರಕಂಬ ನಿವಾಸಿ ಮಹಮ್ಮದ್ ಅಶ್ರಫ್ (38) ಅವರನ್ನು ಬಂಧಿಸಲಾಗಿದೆ. ಆರೋಪಿತನ ವಿರುದ್ಧ ಈಗಾಗಲೇ 10ಕ್ಕೂ ಹೆಚ್ಚು ಬಾರಿ ವಾರಂಟ್ ಜಾರಿಯಾಗಿದ್ದರೂ, ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.…
-

ಅಪಾರ್ಟ್‌ಮೆಂಟ್‌ವೊಂದರ ಫ್ರಿಜ್‌ನಲ್ಲಿ ಭ್ರೂಣ ಪತ್ತೆ!
ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರು ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಫ್ರಿಜ್ ಒಳಗೆ ಭ್ರೂಣವನ್ನು ಸಂರಕ್ಷಿಸಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ದಂಪತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಖಚಿತ ಮಾಹಿತಿಯ ಮೇರೆಗೆ ಸೋಮವಾರ ಸಂಜೆ ಕೊಡುಂಗಲ್ಲೂರು ಸಮೀಪದ ಚತೇದತುಪರಂಬುವಿನ ಫ್ಲಾಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ರೆಫ್ರಿಜರೇಟರ್ ಒಳಗೆ “AMY” ಎಂದು ಗುರುತಿಸಲಾದ ಹಸಿರು ಪೆಟ್ಟಿಗೆಯಲ್ಲಿ ಸುಮಾರು 3ರಿಂದ 4 ತಿಂಗಳ ವಯಸ್ಸಿನ ಭ್ರೂಣ ಪತ್ತೆಯಾಗಿದೆ. ತ್ರಿಶೂರ್ ಜಿಲ್ಲೆಯ ಅನಪ್ಪುಳ ಮೂಲದ…
-

ಮಂಗಳೂರು: ನಗರದ ಪಾಂಡೇಶ್ವರದ ಶಿವನಗರದಲ್ಲಿ ಅನಧಿಕೃತ PG ..!! ಇಲ್ಲಿನ ವಿದ್ಯಾರ್ಥಿಗಳ ಪುಡಾಂಟಿಕೆಯಿಂದ ಬೇಸತ್ತ ಸ್ಥಳೀಯರು
ಮಂಗಳೂರು: ನಗರದ ಪಾಂಡೇಶ್ವರದ ಶಿವನಗರ ಎಂಬಲ್ಲಿ ಮನೆ ಮಾಲೀಕರು ಮನೆ ಮೇಲೆ ಯಾವುದೇ ಪರವಾನಗಿ ಪಡೆಯದೇ ಅನಧಿಕೃತ ಕಟ್ಟಡ ನಿರ್ಮಿಸಿ ವಸತಿ ನಿಲಯವನ್ನು ವಾಣಿಜ್ಯ ಕಟ್ಟಡವನ್ನಾಗಿ ಮಾಡಿ ಸುಮಾರು 40 ಮಂದಿ ಪಿ.ಜಿ ವಿದ್ಯಾರ್ಥಿಗಳ ನ್ನು ಹಾಕಿ ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.ಇಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೇ ಇದ್ದರೂ ವಿದ್ಯಾರ್ಥಿಗಳಿಂದ 4 ಸಾವಿರ ರೂ . ಹಣ ಪಡೆದು ಮಾಲೀಕರು ಮೆರೆಯುತ್ತಿದ್ದಾರೆ. ಅಷ್ಟೇ ಅಲ್ಲ ಇಲ್ಲಿನ ವಿದ್ಯಾರ್ಥಿಗಳ ಬೈಕ್…
-

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆ? ಸಿಬಿಐಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ 13 ವರ್ಷಗಳ ಹಿಂದೆ ನಡೆದಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಸುಪ್ರೀಂಕೋರ್ಟ್ ಸಿಬಿಐಗೆ ನೊಟೀಸ್ ಜಾರಿ ಮಾಡಿದೆ.ಸೌಜನ್ಯ ತಾಯಿ ಕುಸುಮಾತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿರುವುದರಿಂದ ಈ ಪ್ರಕರಣ ಮರಳಿ ತನಿಖೆಯಾಗುವ ನಿರೀಕ್ಷೆ ಮೂಡಿದೆ. 2012ರ ಅಕ್ಟೋಬರ್‌ನಲ್ಲಿ ನಾಪತ್ತೆಯಾಗಿದ್ದ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯ ಅವರ ಮೃತದೇಹ ಮರುದಿನ ಅತ್ಯಾಚಾರಕ್ಕೀಡಾಗಿ…
-

ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!
ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ ಗಳು ಬೆಳಕಿಗೆ ಬಂದಿವೆ. ಸೈಬರ್ ವಂಚಕರು 94 ವರ್ಷದ ವೃದ್ಧನಿಗೆ ಡಿಜಿಟಲ್ ಅರೆಸ್ಟ್ ಮಾಡಿ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ನಿವೃತ್ತ ಸಂಶೋಧಕನಿಗೆ ಸೈಬರ್ ವಂಚಕರು ಭಾರಿ ವಂಚನೆ ಎಸಗಿದ್ದಾರೆ. ಲ್ಯಾಂಡ್ ಲೈನ್ ಗೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮೂಲಕ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ಮೊದಲು ಟೆಲಿಕಾಂ ಆಫೀಸ್ ನಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ…
-

ಮೂಡುಬಿದರೆ ಇನ್‌ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಮಹಿಳೆಯರ ಮೇಲೆ ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡುಬಿದರೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹಾಗೂ ಸಂತ್ರಸ್ತೆಯ ಭೇಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











