,

ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ ಗಳು ಬೆಳಕಿಗೆ ಬಂದಿವೆ. ಸೈಬರ್ ವಂಚಕರು 94 ವರ್ಷದ ವೃದ್ಧನಿಗೆ ಡಿಜಿಟಲ್ ಅರೆಸ್ಟ್ ಮಾಡಿ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ನಿವೃತ್ತ ಸಂಶೋಧಕನಿಗೆ ಸೈಬರ್ ವಂಚಕರು ಭಾರಿ ವಂಚನೆ ಎಸಗಿದ್ದಾರೆ. ಲ್ಯಾಂಡ್ ಲೈನ್ ಗೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮೂಲಕ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ಮೊದಲು ಟೆಲಿಕಾಂ ಆಫೀಸ್ ನಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ…

ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ ಗಳು ಬೆಳಕಿಗೆ ಬಂದಿವೆ. ಸೈಬರ್ ವಂಚಕರು 94 ವರ್ಷದ ವೃದ್ಧನಿಗೆ ಡಿಜಿಟಲ್ ಅರೆಸ್ಟ್ ಮಾಡಿ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ನಿವೃತ್ತ ಸಂಶೋಧಕನಿಗೆ ಸೈಬರ್ ವಂಚಕರು ಭಾರಿ ವಂಚನೆ ಎಸಗಿದ್ದಾರೆ. ಲ್ಯಾಂಡ್ ಲೈನ್ ಗೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮೂಲಕ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ.

ಮೊದಲು ಟೆಲಿಕಾಂ ಆಫೀಸ್ ನಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಕೆಎಸ್ ದಾಖಲಾಗಿದೆ. ಇನ್ಸ್ಪೆಕ್ಟರ್ ಕರೆ ಮಾಡುತ್ತಾರೆ ಎಂದು ಕಾಲ್ ಕಟ್ ಮಾಡಿದ್ದ. ಬಳಿಕ ಸಂದೀಪ್ ರಾವ್ ಹೆಸರಿನಲ್ಲಿ ವೃದ್ಧನಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಸಿಬಿಐ ಅಧಿಕಾರಿ ಎಂದು ಆಧಾರ್ ಕಾರ್ಡ್ ವಾಟ್ಸಪ್ಪ್ ಮಾಡಿಸಿಕೊಂಡಿದ್ದ. ವೃದ್ಧರ ಮೊಬೈಲ್ ನಂಬರ್ ಗೆ ನಕಲಿ ಎಫ್ಐಆರ್ ಕಳುಹಿಸಿದ್ದ ಆರೋಪಿ ನಂತರ ಸಿ ಬಿ ಐ ಪೊಲೀಸರ ರೀತಿ ಡ್ರೆಸ್ ಹಾಕಿ ವಿಡಿಯೋ ಕಾಲ್ ಮಾಡಿದ್ದಾನೆ.

ನಾವು ಹೇಳಿದಂತೆ ಕೇಳಬೇಕು ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಕೇಸ್ ಕೈ ಬಿಡಲು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಡಿಸೆಂಬರ್ 17 ರಿಂದ ಫೆಬ್ರಮರಿ 23ರ ವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. 4.91 ಕೋಟಿ ರೂಪಾಯಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಇನ್ನು ಹೆಚ್ಚಿನ ಹಣ ಕೇಳಿದಾಗ ವಿರುದ್ಧ ಪೊಲೀಸರ ಮೊರೆ ಹೋಗಿದ್ದಾರೆ. ಬಳಿಕ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಗೆ ವೃದ್ಧನಿಂದ ದೂರು ಬಂದಿದ್ದು ಕೇಸ್ ದಾಖಲಿಸಿ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿಯಲ್ಲಿ ವೃದ್ಧನಿಗೆ 15 ಕೋಟಿ ವಂಚನೆ

ಬೆಳಗಾವಿಯಲ್ಲಿ ವೃದ್ಧ ಉದ್ಯಮಿಗೆ 15 ಕೋಟಿ ಸೈಬರ್ ವಂಚನೆ ಎಸಗಲಾಗಿದೆ. ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡಿ ಸೈಬರ್ ವಂಚಕರು ವಂಚನೆ ಎಸಗುತ್ತಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಇದೀಗ ವೃದ್ಧ ಉದ್ಯಮಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ವೃದ್ಧ ಉದ್ಯಮಿಗೆ ವಿಡಿಯೋ ಕಾಲ್ ಮಾಡಿ ಸೈಬರ್ ವಂಚಕರು ಬೆದರಿಸಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಲಿಸ್ಟ್ ನಲ್ಲಿ ಇದೆ ನೀವು ಮನೆ ಲಾಂಡ್ರಿಂಗ್ ಮಾಡುತ್ತಿದ್ದೀರಿ ಎಂದು ವೃದ್ಧ ಉದ್ಯಮಿಗೆ ಬೆದರಿಕೆ ಹಾಕಿದ್ದಾರೆ. ಬೇರೆ ಖಾತೆಗೆ ಹಣ ವರ್ಗಾಯಿಸಿ ಎಂದು ಅಕೌಂಟ್ ನಂಬರ್ ಕೊಟ್ಟಿದ್ದಾರೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ನಿಮಗೆ ವಾಪಸ್ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಈ ವೇಳೆ ಹಂತ ಹಂತವಾಗಿ 15 ಕೋಟಿ ಹಣ ಸೈಬರ್ ವಂಚಕರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ.

ಬಳಿಕ ಸಂಪರ್ಕಕ್ಕೆ ಸಿಗದೇ ಇದ್ದಾಗ ಅನುಮಾನಗೊಂಡು ವೃದ್ಧ ಉದ್ಯಮಿ ಬೆಳಗಾವಿ ನಗರದ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್ 18ರಂದು ಈ ಒಂದು ಘಟನೆ ನಡೆದಿದ್ದು, ದೂರು ಆಧರಿಸಿ ಪೊಲೀಸರು ಸೈಬರ್ ವಂಚಕರ ಅಕೌಂಟ್ ಫ್ರೀಜ್ ಮಾಡಿದ್ದಾರೆ. 15 ಕೋಟಿ ಪೈಕಿ ಇರುವ 90 ಲಕ್ಷ ಇದ್ದ ಖಾತೆ ಫ್ರೀಜ್ ಮಾಡಿದ್ದಾರೆ. ಸೈಬರ್ ವಂಚಕರ ಬಂಧನಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ವಿಶೇಷ ತಂಡ ರಚನೆ ಮಾಡಿದ್ದಾರೆ ಒಂದೇ ತಿಂಗಳಲ್ಲಿ ಮೂವರು ಹಿರಿಯ ನಾಗರಿಕರಿಗೆ ಸೈಬರ್ ವಂಚನೆ ನಡೆದಿದೆ. ಈ ರೀತಿಯ ಬೆದರಿಕೆಗೆ ಹೆದರದೆ ದೂರು ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed