Author: News Editor

  • ಮಂಗಳೂರು: ಪರವಾನಿಗೆ ಪತ್ರ ಇಲ್ಲದೆ ನಂದಿಹಿಲ್ಸ್ ಕಟ್ಟಡ ಬಳಕೆ- ಮ.ನ.ಪಾ ಎಚ್ಚರಿಕೆ
    ,

    ಮಂಗಳೂರು: ಪರವಾನಿಗೆ ಪತ್ರ ಇಲ್ಲದೆ ನಂದಿಹಿಲ್ಸ್ ಕಟ್ಟಡ ಬಳಕೆ- ಮ.ನ.ಪಾ ಎಚ್ಚರಿಕೆ

    ಮಂಗಳೂರು: ನಂದಿಗುಡ್ಡೆ ವೃತ್ತದ ಬಳಿ ಇರುವ ನಂದಿ ಹಿಲ್ಸ್ ಬಹುಮಹಡಿ ಕಟ್ಟಡವು ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಕಟ್ಟಡವು ಪೂರ್ಣ ಪ್ರಮಾಣದ ಲ್ಲಿ ಕಾಮಗಾರಿಯಾಗದೆ. ಕಟ್ಟಡ ಪರವಾನಿಗೆ ಪತ್ರ ಇಲ್ಲದೆ ಕಟ್ಟಡವು ವಾಣಿಜ್ಯ ವ್ಯವಹಾರಕ್ಕೆ ಹಲವಾರು ಶಾಪ್ ಗಳನ್ನು ಈಗಾಗಲೇ ನೀಡಲಾಗಿದ್ದು, ಹೋಟೆಲ್, ಬ್ಯೂಟಿ ಪಾರ್ಲರ್ ಸೇರಿದಂತೆ ಅನೇಕ ಶಾಪ್ ಗಳು ತೆರೆದು ವ್ಯವಹಾರ ನಡೆಯುತ್ತಿದೆ. ಕಟ್ಟಡದ ಒಳಚರಂಡಿವು ಅಕ್ರಮವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ತಕ್ಷಣ ಎಲ್ಲಾ ಶಾಪ್ ಗಳು ಮುಚ್ಚಿ ಕಟ್ಟಡದ ಎಲ್ಲಾ…

    Continue Reading

  • ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್
    ,

    ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

    ದಾವಣಗೆರೆ: ಘಾನಾದ ತುಮು ಪಟ್ಟಣದಲ್ಲಿ ನೋಂದಾಯಿಸದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕರ್ನಾಟಕದ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ 26 ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಘಟನೆಯ ನಂತರ ಘಾನಾದ ವಿವಿಧ ಭಾಗಗಳಲ್ಲಿ ವಾಸಿಸುವ ಸಮುದಾಯದ 250 ಕ್ಕೂ ಹೆಚ್ಚು ಜನರು ಬಂಧನದ ಭೀತಿಯಲ್ಲಿದ್ದಾರೆ. ಬಂಧಿತರು ಕಳೆದ ವರ್ಷ ಆಫ್ರಿಕನ್ ದೇಶದಲ್ಲಿ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯಾಪಾರ ವೀಸಾದಲ್ಲಿ ಅಲ್ಲಿಗೆ ಹೋಗಿದ್ದರು. ಈ ಬೆಳವಣಿಗೆಯನ್ನು ದೃಢಪಡಿಸುತ್ತಾ, ಕರ್ನಾಟಕ ಹಕ್ಕಿ ಪಿಕ್ಕಿ ಸಮುದಾಯ ಸಂಘದ ಅಧ್ಯಕ್ಷ ಪುನೀತ್ ಅವರು 26…

    Continue Reading

  • ಬೆಳ್ತಂಗಡಿ: ನಕ್ಸಲ್‌ ಪ್ರಕರಣ ಆರೋಪಿ ಜಯಣ್ಣ ಕೋರ್ಟ್‌ಗೆ ಹಾಜರು
    ,

    ಬೆಳ್ತಂಗಡಿ: ನಕ್ಸಲ್‌ ಪ್ರಕರಣ ಆರೋಪಿ ಜಯಣ್ಣ ಕೋರ್ಟ್‌ಗೆ ಹಾಜರು

    ಬೆಳ್ತಂಗಡಿ: ಕುತ್ತೂರಿನ ಲಿಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಕ್ಸಲ್ ಸಂಬಂಧಿತ ಕರಪತ್ರ ಹಂಚಿಕೆ ಹಾಗೂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಜಾನ್ ಅಲಿಯಾಸ್ ಜಯಣ್ಣ ರಾಯಚೂರು ಅವರು ಫೆಬ್ರವರಿ 19ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಬಾಡಿ ವಾರಂಟ್ ಮೂಲಕ ಕೇರಳ ಪೊಲೀಸರು ಜಯಣ್ಣರನ್ನು ಕೋರ್ಟ್‌ಗೆ ಹಾಜರುಪಡಿಸಿದರು.ಜಯಣ್ಣ ಪರ ವಕೀಲ ಶಿವಕುಮಾರ್ ಹಾಗೂ ಸರ್ಕಾರದ ಪರ ವಕೀಲ ದಿವ್ಯರಾಜ್ ಹೆಗ್ಡೆ ನ್ಯಾಯಾಲಯಕ್ಕೆ ಹಾಜರಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.10ಕ್ಕೆ ವಿಚಾರಣೆ ಮುಂದೂಡಲಾಗಿದೆ

    Continue Reading

  • ಮಂಗಳೂರು: ನೇಣು ಬಿಗಿದು ಯುವಕ ಆತ್ಮಹತ್ಯೆ

    ಮಂಗಳೂರು: ನೇಣು ಬಿಗಿದು ಯುವಕ ಆತ್ಮಹತ್ಯೆ

    ಮಂಗಳೂರು: ಮಂಗಳೂರಿನಲ್ಲಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಕಾಸರಗೋಡು ಮೂಲದ ಯುವಕನೊಬ್ಬ ಕೈಕೊಯ್ದುಕೊಂಡು ಬಳಿಕ ಪ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕದ್ರಿ ಶಿವಭಾಗ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮೃತರನ್ನು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಪೆರುವಾಡ್ ನಿವಾಸಿ ರೋಶನ್ (22) ಎಂದು ಗುರುತಿಸಲಾಗಿದೆ. ಕದ್ರಿ ಪಾರ್ಕ್ ಬಳಿಯ ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಈತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ಮಂಗಳವಾರ ರಾತ್ರಿ ತನ್ನ ಕೈಯನ್ನು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ 10…

    Continue Reading

  • ಮೊಂಟೆಪದವು ಭೂ ಕುಸಿತ ಪ್ರಕರಣ: ಮಾನವ ಹಕ್ಕುಗಳ ಆಯೋಗದೆದುರು ಭಾವುಕರಾದ ಸಂತ್ರಸ್ತೆ ಅಶ್ವಿನಿ.

    ಮೊಂಟೆಪದವು ಭೂ ಕುಸಿತ ಪ್ರಕರಣ: ಮಾನವ ಹಕ್ಕುಗಳ ಆಯೋಗದೆದುರು ಭಾವುಕರಾದ ಸಂತ್ರಸ್ತೆ ಅಶ್ವಿನಿ.

    ಮಂಗಳೂರು: ಮಂಜನಾಡಿಯ ಮೊಂಟೆಪದವು ಎಂಬಲ್ಲಿ 2025ರ ಮೇ 30ರಂದು ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಸಿಲುಕಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಎಂಬವರು ತನ್ನ ತಾಯಿ ಪುಷ್ಪಾವತಿ ಜತೆ ಮಾನವ ಹಕ್ಕುಗಳ ಆಯೋಗದೆದುರು ನ್ಯಾಯಕ್ಕಾಗಿ ಕಣ್ಣೀರಿಟ್ಟ ಘಟನೆ ಬುಧವಾರ ನಡೆಯಿತು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶ್ಯಾಂ ಭಟ್ ಮತ್ತು ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕ ದೂರುಗಳ ವಿಚಾರಣೆಯನ್ನು ಹಮ್ಮಿಕೊಂಡಿದ್ದರು. ಇದಕ್ಕಾಗಿ ತಾಯಿ ಜೊತೆ ಖಾಸಗಿ ಆಂಬುಲೆನ್ಸ್ ನಲ್ಲಿ ಆಗಮಿಸಿದ್ದ…

    Continue Reading

  • ಬಂಟ್ವಾಳ: ವಿದ್ಯುತ್ ಮೀಟರ್ ರೀಡರ್‌ಗೆ ನಾಯಿ ಕಡಿತ

    ಬಂಟ್ವಾಳ: ವಿದ್ಯುತ್ ಮೀಟರ್ ರೀಡರ್‌ಗೆ ನಾಯಿ ಕಡಿತ

    ಬಂಟ್ವಾಳ : ವಿದ್ಯುತ್ ಮೀಟರ್ ರೀಡರ್ ಮೇಲೆ ಸಾಕು ನಾಯಿ ದಾಳಿ ಮಾಡಿ ಕೈಗೆ ಗಂಭೀರ ಗಾಯಗೊಳಿಸಿದ ಘಟನೆ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್‌ ಎಂಬಲ್ಲಿ ನಡೆದಿದೆ. ಮೂಲತಃ ಮುಡಿಪು ನಿವಾಸಿ, ಮೀಟರ್ ರೀಡರ್ ಸಿಬ್ಬಂದಿ ಮೇಲ್ವಿಚಾರಕ ಸಂಪತ್ ಆರ್.ಶೆಟ್ಟಿ ಸೋಮವಾರ ಕೈತ್ರೋಡಿ ಕ್ವಾರ್ಟರ್ಸ್‌ ಎಂಬಲ್ಲಿ ಮನೆಗಳ ಮೀಟರ್ ದಾಖಲಿಸಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ನ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ನಡೆದಿದೆ. ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ಸಮೇತ ಓಡಿ ಬಂದು ದಾಳಿ ಮಾಡಿದ್ದು, ಬಲ…

    Continue Reading

  • ಮಂಗಳೂರು: ಬಡ ವ್ಯಾಪಾರಿಗಳಿಗೆ ನಡೆಸುವ ದಬ್ಬಾಳಿಕೆ ಅನಧಿಕೃತ ಕಟ್ಟಡ ಮಾಲೀಕರಿಗೆ ಯಾಕಿಲ್ಲ.?

    ಮಂಗಳೂರು: ಬಡ ವ್ಯಾಪಾರಿಗಳಿಗೆ ನಡೆಸುವ ದಬ್ಬಾಳಿಕೆ ಅನಧಿಕೃತ ಕಟ್ಟಡ ಮಾಲೀಕರಿಗೆ ಯಾಕಿಲ್ಲ.?

    ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಬಡ ಅಂಗಡಿ ಮಾಲಿಕನ ಮೇಲೆ ದಬ್ಬಾಲಿಕೆ ನಡೆಸುವ ಮನಪಾ ಅಧಿಕಾರಗಳೇ ನಗರದಲ್ಲಿ ಅನಧಿಕೃತ ಕಟ್ಟಡ ಸೇರಿದಂತೆ ಕಾನೂನು ಬಾಹಿರ ಕಾಮಗಾರಿಗಳಿಗೆ ನಿಮ್ಮ ದಬ್ಬಾಳಿಕೆ ಯಾಕಿಲ್ಲ? ರಸ್ತೆ ಬದಿ ಗೂಡಂಗಡಿ,ಮೊಬೈಲ್‌ ಕ್ಯಾಂಟೀನ್‌, ನಡೆಸಿ ಜೀವನ ನಡೆಸುವ ಸಣ್ಣ ವ್ಯಾಪಾರಸ್ಥರಿಗೆ ಹಲವಾರು ಕಾರಣಗಳನ್ನು ನೀಡಿ ತೆರವು ಗೊಳಿಸುವ ಮ.ನ.ಪಾ ಅಧಿಕಾರಿಗಳು, ಮಂಗಳೂರಿನ ಗಣಪತಿ ಸ್ಕೂಲ್ ಕ್ರಾಸ್ ರಸ್ತೆಯಲ್ಲಿ, ಹೈಲ್ಯಾಂಡ್ ರಸ್ತೆಯಲ್ಲಿ, ಕೋಟಿ ಚೆನ್ನಯ್ಯ ವ್ರತ್ತದ ಎದುರು, ಟೋಕ್ಯೋ ಮಾರ್ಕೆಟ್ ಹತ್ತಿರ ಅನಧಿಕೃತ ಕಟ್ಟಡ…

    Continue Reading

  • ಬೇಕರಿಯಲ್ಲಿ ಕಾನೂನು ಬಾಹಿರ ಮಟ್ಕಾ ಆಟ : ಆರೋಪಿ ಬಂಧನ
    ,

    ಬೇಕರಿಯಲ್ಲಿ ಕಾನೂನು ಬಾಹಿರ ಮಟ್ಕಾ ಆಟ : ಆರೋಪಿ ಬಂಧನ

    ವಿಟ್ಲ: ಬೇಕರಿಯೊಂದರಲ್ಲಿ ಕಾನೂನುಬಾಹಿರವಾಗಿ ಅದೃಷ್ಟದ ಮಟ್ಕಾ ಆಟ ನಡೆಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಫೆಬ್ರವರಿ 14ರಂದು ವಿಟ್ಲಪೇಟೆ ಪ್ರದೇಶದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಿನಾಯಕ ಬೇಕರಿಯಲ್ಲಿ ಮಟ್ಕಾ ಆಟ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿತು. ಮಾಹಿತಿ ಆಧಾರವಾಗಿ ದಾಳಿ ನಡೆಸಿದ ಪೊಲೀಸರು ಅಂಗಡಿ ಮಾಲೀಕ ಕುದ್ದುಪದವು ನಿವಾಸಿ ರವೀಶ್ ಎಂಬಾತನನ್ನು ವಶಕ್ಕೆ ಪಡೆದರು. ‘ನಾನು ಅದೃಷ್ಟದ…

    Continue Reading

  • ಬಂಟ್ವಾಳ: ಲಾರಿಗಳ ಬ್ಯಾಟರಿ ಕಳ್ಳತನ- ಸಿಸಿಟಿವಿಯಲ್ಲಿ ಸೆರೆ

    ಬಂಟ್ವಾಳ: ಲಾರಿಗಳ ಬ್ಯಾಟರಿ ಕಳ್ಳತನ- ಸಿಸಿಟಿವಿಯಲ್ಲಿ ಸೆರೆ

    ಬಂಟ್ವಾಳ: ವಿಟ್ಲ-ಪುತ್ತೂರು ರಸ್ತೆಯ ಉದ್ದಕ್ಕೂ ನಿಲ್ಲಿಸಲಾಗಿದ್ದ ಹಲವಾರು ಲಾರಿಗಳಿಂದ ಬ್ಯಾಟರಿಗಳು ಕಳವಾದ ಘಟನೆ ವಿಟ್ಲದಿಂದ ವರದಿಯಾಗಿದೆ. ಲಾರಿ ಚಾಲಕರು ನೀಡಿದ ದೂರುಗಳ ಪ್ರಕಾರ, ಬದನಾಜೆಯ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಲಾರಿಯಿಂದ ಅಪರಿಚಿತ ದುಷ್ಕರ್ಮಿಗಳು ಬ್ಯಾಟರಿಯನ್ನು ಕದ್ದಿದ್ದಾರೆ. ಅದೇ ರಾತ್ರಿ, ಕಾಶಿಮಠ ರಸ್ತೆ ಮತ್ತು ಉಕ್ಕುಡದ ಸರ್ವಿಸ್ ಸ್ಟೇಷನ್‌ನಲ್ಲಿ ನಿಲ್ಲಿಸಿದ್ದ ಮೂರು ಲಾರಿಗಳ ಬ್ಯಾಟರಿಗಳು ಕಾಣೆಯಾಗಿವೆ ಎಂದು ವರದಿಯಾಗಿದೆ. ಚಾಲಕರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆರೋಪಿಗಳು ಬಿಳಿ ಕಾರಿನಲ್ಲಿ ಬಂದು ಕಳ್ಳತನ…

    Continue Reading

  • ಅತ್ಯಾಚಾರ, ಪೋಕ್ಸೋ ಕೇಸಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಖಡಕ್ ಆದೇಶ
    ,

    ಅತ್ಯಾಚಾರ, ಪೋಕ್ಸೋ ಕೇಸಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಖಡಕ್ ಆದೇಶ

     ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರೀಕ್ಷಕರು ಆದೇಶ ಮಾಡಿದ್ದು, ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ,…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed